News Kannada
Tuesday, November 29 2022

ಮೈಸೂರು

ವಿದೇಶಿ ಹಕ್ಕಿಯ ಕೊಂದು ರಾಜನಂತೆ ಫೋಸ್ ಕೊಟ್ಟ ಆರೋಪಿಯ ಬಂಧನ - 1 min read

Photo Credit :

ವಿದೇಶಿ ಹಕ್ಕಿಯ ಕೊಂದು ರಾಜನಂತೆ ಫೋಸ್ ಕೊಟ್ಟ ಆರೋಪಿಯ ಬಂಧನ

ಕೆ.ಆರ್.ಪೇಟೆ: ತಾಲೂಕಿನ ವಳಗೆರೆ ಮೆಣಸ ಗ್ರಾಮದ ಕೆರೆಯಲ್ಲಿ ವಿದೇಶಿ ಹಕ್ಕಿಯೊಂದನ್ನು ನಾಡ ಬಂದೂಕಿನಿಂದ ಬೇಟೆಯಾಡಿ ಸುಟ್ಟು ಹಾಕಿ ತಿನ್ನುವ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರಿಸಿ ತಾವೇ ತಮ್ಮ ಫೇಸ್ಬುಕ್ ಮತ್ತು ವಾಟ್ಸಪ್ಗೆ ಅಫ್ಲೋಡ್ ಮಾಡಿದ್ದ ನಾಲ್ವರು ದುಷ್ಕರ್ಮಿಗಳ ಪೈಕಿ ಒಬ್ಬನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಪಟ್ಟಣದ ಶ್ರೀಕಂಠನಗರ ನಿವಾಸಿ ದಿ. ನಾರಾಯಣಪ್ಪ ಅವರ ಪುತ್ರ ನಾಗರಾಜು ಅಲಿಯಾಸ್ ಗೆಂಡೆ(35) ಬಂಧಿತ ಆರೋಪಿ.ಈತ  ಸ್ನೇಹಿತರಾದ ಪ್ರದೀಪ, ಚೇತನ್ ಮತ್ತು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ  ಆಗಸ್ಟ್ 14ರ ಸೋಮವಾರ ವಳಗೆರೆ ಮೆಣಸ ಕೆರೆಯತ್ತ ನಾಡ ಬಂದೂಕಿನೊಂದಿಗೆ ಹೋಗಿದ್ದಾಗ ಸುಂದರ ವಿದೇಶಿ ಹಕ್ಕಿಯೊಂದು ಕೆರೆಯ ದಡದಲ್ಲಿರುವುದು ಕಂಡಿದೆ.

ಈ ವೇಳೆ ತಮ್ಮ ಬಳಿಯಿದ್ದ ನಾಡಬಂದೂಕಿನಿಂದ ಗುಂಡು ಹಾರಿಸಿ ಪಕ್ಷಿಯನ್ನು ಸಾಯಿಸಿ ಕೈಯ್ಯಲ್ಲಿ ಹಿಡಿದುಕೊಂಡು ಫೋಟೋವನ್ನು ವ್ಯಾಟ್ಸಫ್ ಮತ್ತು ಫೇಸ್ಬುಕ್ ಸಾಮಾಜಿಕ ತಾಣಗಳಿಗೆ ಅಪ್ಲೋಡ್ ಮಾಡಿದ್ದರು. ನಂತರ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಈ ಬಗ್ಗೆ  ಅರಣ್ಯ ಇಲಾಖೆಯ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.  ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದ್ದ ಮೇರೆಗೆ ಕಾರ್ಯಾಚರಣೆ ನಡೆಸಿದ ನಾಗಮಂಗಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅನಂತರಾಮು ಮತ್ತು ತಾಲೂಕು ಅರಣ್ಯಾಧಿಕಾರಿ ರವೀಂದ್ರ ಮತ್ತು ಉಪ ಅರಣ್ಯಾಧಿಕಾರಿ ರಾಘವೇಂದ್ರ, ಶಿವಮೂರ್ತಿ, ಅರಣ್ಯ ವೀಕ್ಷಕರಾದ ರಮೇಶ್, ಮನೋಜ್, ಮಂಜೇಗೌಡ ಮತ್ತಿತರರಿದ್ದ ಅರಣ್ಯ ಸಿಬ್ಬಂದಿಗಳ ತಂಡ ಆರೋಪಿಗಳ ಫೇಸ್ಬುಕ್,  ವಾಟ್ಸಪ್ ವಿಳಾಸವನ್ನಾಧರಿಸಿ ವಿದೇಶಿ ಪಕ್ಷಿಯನ್ನು ಕೊಂದು ಹಾಕಿರುವ  ಪ್ರಕರಣದ ಪ್ರಮುಖ ಆರೋಪಿಯಾದ ನಾಗರಾಜುವನ್ನು ಶ್ರವಣಬೆಳಗೊಳದಲ್ಲಿ ಬಂಧಿಸಿದ್ದಾರೆ.

ಈತನಿಂದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನಾಡಬಂದೂಕು, ಕಾಂತರಾಜಪುರ ಪಕ್ಕದ ತೋಟದಲ್ಲಿ ಪಕ್ಷಿಯನ್ನು ಸುಟ್ಟು ತಿಂದ ಸ್ಟೌವ್, ಸೌದೆ ಸೇರಿದಂತೆ ಪಕ್ಷಿ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗಾಗಿ  ಬಲೆ ಬೀಸಿದ್ದಾರೆ. ಕೆ.ಆರ್.ಪೇಟೆ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆರೋಪಿ ನಾಗರಾಜುವನ್ನು ಹಾಜರುಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ

See also  ಮತ್ತಿಗೋಡು ಆನೆ ಶಿಬಿರದಲ್ಲಿ ಸಾಕಾನೆ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು