News Kannada
Saturday, December 03 2022

ಮೈಸೂರು

ಮೈಸೂರು: ಕಾರ್ಯಕ್ರಮಕ್ಕೆ ಅಂದ ನೀಡಿದ ಅಂಧ ಹುಡುಗಿಯರು…

Photo Credit :

ಮೈಸೂರು: ಕಾರ್ಯಕ್ರಮಕ್ಕೆ ಅಂದ ನೀಡಿದ ಅಂಧ ಹುಡುಗಿಯರು…

ಮೈಸೂರು: ಆ ಹುಡುಗಿಯರು ಒಂದೊಂದು ಹೆಜ್ಜೆಯನ್ನಿಡುತ್ತಿದ್ದರೆ ನೆರೆದವರು ಚಪ್ಪಾಳೆ ತಟ್ಟುತ್ತಿದ್ದರು.. ಶಿಳ್ಳೆ ಹೊಡೆಯುತ್ತಿದ್ದರು. ಅವರು ಮಾಡುತ್ತಿದ್ದ ನೃತ್ಯಕ್ಕೆ ತಲೆದೂಗುತ್ತಿದ್ದರು. ಇಷ್ಟಕ್ಕೂ ಅವರಿಗೆ ಜನರ ಶಿಳ್ಳೆ, ಚಪ್ಪಾಳೆ ಮಾತ್ರ ಕೇಳಿಸುತ್ತಿತ್ತಾದರೂ ಜನ ತಮ್ಮ ನೃತ್ಯಕ್ಕೆ ಯಾವ ರೀತಿಯ ಪ್ರತಿಕ್ರಿಯೆ ತೋರುತ್ತಿದ್ದಾರೆ ಎಂಬುವುದನ್ನು ನೋಡುವ ಭಾಗ್ಯವಿರಲಿಲ್ಲ. ಕಾರಣ ನೃತ್ಯ ಮಾಡುತ್ತಿದ್ದವರೆಲ್ಲ ಅಂಧರಾಗಿದ್ದರು. ಆದರೂ ತಾವೇನು ಯಾವುದರಲ್ಲೂ ಕಡಿಮೆ ಇಲ್ಲ ಎಂಬಂತೆ ಹೆಜ್ಜೆ ಹಾಕುತ್ತಿದ್ದರು.

ಇದು ನಡೆದಿದ್ದು ನಗರದ ಪ್ರೀಮಿಯರ್ ಸ್ಟುಡಿಯೋ ಆವರಣದಲ್ಲಿ. ಆರ್ಟಿಕ್ಯುಲೇಟ್ ನೃತ್ಯೋತ್ಸವದ 15ನೇ ಸಂಚಿಕೆಯ ಪ್ರದರ್ಶನದಲ್ಲಿ. ಆರು ಜನ ದೃಷ್ಟಿ ವಿಕಲಚೇತನ ಹುಡುಗಿಯರು ತಮ್ಮಲ್ಲಿ ದೃಷ್ಟಿಯಲ್ಲಿ ವೈಫಲ್ಯತೆ ಕಂಡುಬಂದರೂ ಪ್ರತಿಭೆಯಲ್ಲಿ ಅಂಧತ್ವ ಇಲ್ಲ ಎಂಬುದನ್ನು ದಾರುವರ್ಣದಲ್ಲಿ ಶ್ರೀ ರಾಜರಾಜೇಶ್ವರಿ ನೃತ್ಯವನ್ನು ಭರತನಾಟ್ಯ ಶೈಲಿಯಲ್ಲಿ ಪ್ರದರ್ಶಿಸುವ ಮೂಲಕ ಇತರರಿಗೆ ತೋರಿಸಿಕೊಟ್ಟರು. ನೃತ್ಯ ಮಾಡಿದ ಅಂಧ ಹುಡುಗಿಯರೆಲ್ಲ ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆ ಆರ್ಟಕ್ಯುಲೇಟ್ ಎಬಿಲಿಟಿಗೆ ಸೇರಿದವರಾಗಿದ್ದಾರೆ. ಇವರು ನಡೆಸಿಕೊಟ್ಟ ಎರಡನೇ ಭಾಗವಾದ ಅಮಂಗಲಚರಣ ಮತ್ತು ದೇವಿ ಸ್ತುತಿಯನ್ನು ಬ್ರಿಟನ್ ಮೂಲದವರಾದ ಗೈರಿಕಾ ಮಾಥೂರ್ ಓಡಿಸ್ಸಿ ಏಕವ್ಯಕ್ತಿ ಶೈಲಿಯಲ್ಲಿ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.

ಗುರು ಅರ್ಚನಾ ಪುಣ್ಯೇಶ್ರವರ ಶಿಷ್ಯೆಯರಾದ ಪ್ರಿಯಾಂಕ ಮತ್ತು ಕಾವ್ಯ ದಿಲೀಪ್ರವರು ಜುಗಲ್ಬಂದಿಯಲ್ಲಿ ಗಣೇಶ ಸ್ತುತಿ ಹಾಗೂ ಭೋ ಶಂಭೋ ಶಿವ ಶಂಭೋ ಹಾಡಿಗೆ ಕುಚುಪುಡಿ ಮತ್ತು ಭರತನಾಟ್ಯ ಶೈಲಿಯ ನೃತ್ಯ ಗಮನಸೆಳೆಯಿತು. ಕಾವ್ಯ ದಿಲೀಪ್ರವರು ಏನ ಬೇಡಲಿ ನಿನ್ನ ಎಂಬ ದೇವರನಾಮವನ್ನು ಭರತನಾಟ್ಯ ಏಕವ್ಯಕ್ತಿ ಶೈಲಿಯಲ್ಲಿ ಪ್ರದರ್ಶಿಸಿ ನೆರೆದವರಿಂದ ಪ್ರಶಂಸೆಯ ಮಳೆಗೆರೆಸಿಕೊಂಡರು. ಇನ್ನು ಪ್ರಿಯಾಂಕರವರ ಶ್ರೀ ಕೃಷ್ಣ ಲೀಲಾ ತರಂಗಂ ಗೀತೆಗೆ ಕೂಚುಪುಡಿ ಏಕವ್ಯಕ್ತಿ ಶೈಲಿಯಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ನೃತ್ಯೋತ್ಸವವು ಸಂಪನ್ನವಾಯಿತು. ಮಳೆಯ ಸಿಂಚನದ ನಡುವೆಯೂ ಬಹುಸಂಖ್ಯೆಯ ನೃತ್ಯಾಸಕ್ತರು ಪಾಲ್ಗೊಂಡು ನೃತ್ಯೋತ್ಸವಕ್ಕೆ ಜೀವ ತುಂಬಿದ್ದು ವಿಶೇಷವಾಗಿತ್ತು.

See also  ಎಟಿಎಂಗೆ ತುಂಬಾಬೇಕಾಗಿದ್ದ ಹಣವನ್ನ ಸಾಲಗಾರರಿಗೆ ಕೊಟ್ಟು ಪರಾರಿಯಾದ ಭೂಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು