News Kannada
Thursday, December 01 2022

ಮೈಸೂರು

ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳಿವೆ: ಡಿ.ಕೆ ಶಿವಕುಮಾರ್

Photo Credit :

ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳಿವೆ: ಡಿ.ಕೆ ಶಿವಕುಮಾರ್

ಮೈಸೂರು- ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳಿವೆ, ಸಮಯ ಬಂದಾಗ ಅವುಗಳನ್ನ ಬಳಕೆ ಮಾಡುತ್ತೇವೆ ಎಂದು ಐಟಿ ದಾಳಿಯ ಬಗ್ಗೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹೇಳಿಕೆ ನೀಡಿದ್ದಾರೆ.

ಐಟಿ ದಾಳಿಯ ನಂತರ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಕುಟುಂಬ ಸಮೇತ ಆಗಮಿಸಿದ ಇಂಧನ ಸಚಿವ ಡಿ.ಕೆ ಶಿವಕುಮಾರ್, ಮೊದಲು ಇಟ್ಟಿಗೆಗೂಡಿನಲ್ಲಿರುವ ಮಾವ ತಿಮ್ಮಯ್ಯ ಮನೆಗೆ ತೆರಳಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾತು ಕತೆ ನಡೆಸಿ ನಂತರ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಅವರು ಚಾಮುಂಡಿ ತಾಯಿಯ ದರ್ಶನ ಪಡೆದು ನಂತರ ಅಲ್ಲೇ ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ದುಃಖವನ್ನ ದೂರು ಮಾಡುವ ಶಕ್ತಿ ನೀಡು. ರಾಜ್ಯದಲ್ಲಿ ನೆಮ್ಮದಿ ಹಾಗೂ ಒತ್ತಡ ನಿವಾರಿಸುವ ಶಕ್ತಿ ನೀಡು.

ನನಗೆ ಅನೇಕ ಜನ ತೊಂದರೆ ಕೊಡುತ್ತಿದ್ದಾರೆ. ಈ ತೊಂದರೆ ನಿವಾರಿಸುವ ಶಕ್ತಿಯನ್ನ ನೀಡು ಎಂದು ಬೆಳಗ್ಗೆಯಿಂದ ನಮ್ಮ ಮನೆ ದೇವರು ಪೂಜೆ ನಂತರ ಇಲ್ಲಿ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಕೇಳಿಕೊಂಡಿದ್ದೇನೆ ಎಂದರು. ನಾನು ಯಾವದೇ ತಪ್ಪು ಮಾಡಿಲ್ಲ. ಯಾರಿಗೂ ಹೆದರಿವುದಿಲ್ಲ. ಕಾನೂನು ಚೌಕ್ಕಟಿನಲ್ಲಿ ಉತ್ತರ ನೀಡುತ್ತೇನೆ. ನಮ್ಮವರ 73 ಮನೆಗಳ ಮೇಲೆ ಹಗಲು ರಾತ್ರಿ ರೈಡ್ ಮಾಡಿ ಹಿಂಸೆ ನೀಡಿದ್ದಾರೆ. ಅವರಿಗೆ ರಕ್ಷಣೆ ಕೊಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದ್ದು ನಾನು ದಾಳಿಯ ನಂತರ ಕುಗ್ಗಿಲ್ಲ. ಮೂರು ದಿನ ದಾಳಿಯ ನಂತರ ಮಾಧ್ಯಮದ ಹೇಳಿಕೆಗಳನ್ನ ಗಮನಿಸಿದರೆ ನಿಮಗೆ ತಿಳಿಯುತ್ತದೆ ಎಂದು ಮಾರ್ಮಕವಾಗಿ ಮಾಧ್ಯಮದವರಿಗೆ ಹೇಳಿದರು.

ಇಂದು ತಮ್ಮ ಆಪ್ತನ ಮನೆಯ ಮೇಲೆ ಐಟಿ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು ಆತ ರಾಜಕೀಯವಾಗಿ ಇಗ ತಾನೇ ಬೆಳೆಯುತ್ತಿದ್ದ. ಕೆಪಿಸಿಸಿ ಕಾರ್ಯದರ್ಶಿಯಾಗಿದ್ದು ಗುಜರಾತ್ ನಿಂದ ಬೆಂಗಳೂರಿಗೆ ಬಂದಿದ್ದ ಶಾಸಕರ ಉಸ್ತುವಾರಿಯನ್ನ ನೋಡಿಕೊಳ್ಳುತ್ತಿದ್ದ. ಸರಳ ಜೀವಿ. ಈತನ ಮನೆಯ ಮೇಲೆ ಐಟಿ ದಾಳಿಯ ಬಗ್ಗೆ ಮಾಧ್ಯಮಗಳಲ್ಲಿ ನೋಡಿ ತಿಳಿದಿದ್ದೇನೆ ಎಂದಷ್ಟ ಹೇಳಿದರು. ಈ ಬಗ್ಗೆ ಸಿಎಂ ಮೈಸೂರಿನಲ್ಲಿ ನೀಡಿರುವ ಹೇಳಿಕೆ ಅರ್ಥಪೂರ್ಣವಾಗಿದ್ದು ಎಲ್ಲರೂ ಒಪ್ಪುವಂತ ಹೇಳಿಕೆ ನೀಡಿದ್ದಾರೆ ಎಂದರು.  ನಮ್ಮ ಮನೆಯ ಮೇಲಿನ ಐಟಿ ದಾಳಿಯ ಬಗ್ಗೆ ನಾನು ಹೆಚ್ಚಿಗೆ ಮಾಧ್ಯಮಗಳಲ್ಲಿ ಚರ್ಚೆ ಮಾಡುವುದಿಲ್ಲ. ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳಿವೆ. ಸಮಯ ಬಂದಾಗ ಅವುಗಳನ್ನ ಬಳಕೆ ಮಾಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು.

 

See also  ದಸರಾ ಆನೆಗಳಿಗೆ ಮ್ಯಾಗ್ನೆಟಿಕ್ ಟ್ರ್ಯಾಲಿಯ ರಕ್ಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು