News Kannada
Tuesday, November 29 2022

ಮೈಸೂರು

ಗುರ್ಮಿತ್ ಗೆ ಜೈಲು ಶಿಕ್ಷೆ ತೀರ್ಪು ತೃಪ್ತಿ ತಂದಿದೆ-ನಿವೃತ್ತ ಸಿಬಿಐ ಡಿಐಜಿ ಮುಳಿಂಜ ನಾರಾಯಣನ್ - 1 min read

Photo Credit :

ಗುರ್ಮಿತ್ ಗೆ ಜೈಲು ಶಿಕ್ಷೆ ತೀರ್ಪು ತೃಪ್ತಿ ತಂದಿದೆ-ನಿವೃತ್ತ ಸಿಬಿಐ ಡಿಐಜಿ ಮುಳಿಂಜ ನಾರಾಯಣನ್

 ಮೈಸೂರು: ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂಗೆ 20 ವರ್ಷ ಜೈಲು ಶಿಕ್ಷಗಿಂತ ಜೀವಾವಧಿ ಶಿಕ್ಷೆಯಾಗಬೇಕಿತ್ತು. ಈ ಬಗ್ಗೆ ಸಿಬಿಐ ಹೈಕೋರ್ಟ್ ಹೋಗುತ್ತದೆ ಎಂದು ಈ ಪ್ರಕರಣದ ತನಿಖೆ ನಡೆಸಿದ ನಿವೃತ್ತ ಸಿಬಿಐ ಡಿಐಜಿ ಮುಳಿಂಜ ನಾರಾಯಣನ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. 

ನಿವೃತ್ತ ಸಿಬಿಐ ಡಿಐಜಿ ಮುಳಿಂಜ ನಾರಾಯಣನ್ ಇಂದು ಮಾಧ್ಯಮದವರ ಜೊತೆ ಮಾತನಾಡಿ ಬಾಬಾನ ಮೂರು ಕೇಸ್ ಗಳನ್ನ ಸಿಬಿಐ ತನಿಖೆಗೆ ವಹಿಸಿತ್ತು. ಅದರಂತೆ ಈಗ ಈತನಿಗೆ 20 ವರ್ಷ ಜೈಲು ಶಿಕ್ಷೆಯಾಗಿದೆ. ಆತನಿಗೆ ಜೀವವಧಿ ಶಿಕ್ಷೆಯಾಗಬೇಕಿತ್ತು. ಈ ಬಗ್ಗೆ ಸಿಬಿಐ ಹೈ ಕೋರ್ಟ್ ಮೇಲ್ಮನವಿ ಸಲ್ಲಿಸಲಿದೆ ಎಂದರು.ನಮ್ಮ ನ್ಯಾಯಾಂಗ ವ್ಯವಸ್ಥೆ ಬಲವಾಗಿದೆ ಹಾಗೂ ಆಕ್ಟೀವ್ ಆಗಿದೆ. ಅದು ನಮ್ಮನ್ನ ರಕ್ಷಣೆ ಮಾಡುತ್ತದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವಾಗ ನನಗೆ ತನಿಖೆ ನಡೆಸದಂತೆ ನಮ್ಮ ಇಲಾಖೆಯ ನಿರ್ದೇಶಕರು ಒತ್ತಡ ಹೇರಿದರು. ಜೊತೆಗೆ ರಾಜಕೀಯ ಪಕ್ಷದ ಪ್ರಭಾವವಿದ್ದ ಬಾಬಾ ತನ್ನ ಪ್ರಭಾವದಿಂದ 5 ವರ್ಷ ತನಿಖೆಯಾಗದಂತೆ ತಡೆ ಹಿಡಿದ. ಆದರೂ ಕೋರ್ಟ್ ಆದೇಶದಂತೆ ತನಿಖೆ ಕೈಗೊಂಡೆ. ಈಗ ನ್ಯಾಯಾ ಸಿಕ್ಕಿದೆ. ಅದರ ಸಂತೃಪ್ತಿ ನನಗಿದೆ. ಇದರಿಂದ ಅನ್ಯಾಯಾಕ್ಕೊಳಾಗದ ಡೇರಾದ ಹೆಣ್ಣು ಮಕ್ಕಳಿಗೆ ನ್ಯಾಯದ ಜೊತೆಗೆ ಸ್ವತಂತ್ರ ಸಿಕ್ಕಿದ್ದು ಸಮಾಜದಲ್ಲಿ ತಲೆ ಎತ್ತಿ ಬದುಕುವಂತಾಗಿದೆ ಎಂದರು.

 ಇನ್ನೂ ಸಿಬಿಐ ಹಾಗೂ ಪೊಲೀಸ್ ಏನೇ ಒತ್ತಡವಿದ್ದರೂ ಕಾನೂನು ಪ್ರಕಾರ ಕೆಲಸ ಮಾಡಬೇಕು. ಇದರ ಮದ್ಯೆ ಯಾವುದೇ ಭ್ರಷ್ಟಚಾರ ಇರಬಾರದು. ಮೊದಲು ನಮ್ಮ ಕೆಲಸವನ್ನ ಪ್ರಮಾಣಿಕತೆಯಿಂದ ನಿರ್ವಹಿಸಬೇಕು. ನನಗೆ ವಹಿಸಿದ ಮೂರು ಕೇಸ್ ಗಳನ್ನ ತನಿಖೆ ಮಾಡಿದ್ದೇನೆ.ಕೋರ್ಟ್ ತೀರ್ಪು ನನಗೆ ಸಮಾಧಾನ ತರುವುದು ಮುಖ್ಯವಲ್ಲ, ನೊಂದ ಮಹಿಳೆಯರಿಗರ ನ್ಯಾಯ ಸಿಗಬೇಕಿತ್ತು.ಈ ಪ್ರಕರಣದಿಂದ ಅಧಿಕಾರಿಗಳು ಪಾಠ ಕಲಿಯಬೇಕು ಎಷ್ಟೇ ಒತ್ತಡವಿರಲಿ ನಮಗೆ ಒಪ್ಪಿಸಿದ ಕಾರ್ಯವನ್ನ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಸಾವು ನಮ್ಮ‌ ಕೈಲಿ ಇರೋದಿಲ್ಲ. ಯಾಕೆಂದರೆ ಅನೇಕ ದಾಳಿಯಿಂದ ಬಚಾವಾಗಿದ್ದೇನೆ ನನಗೆ ಯಾವುದೇ ಭಯವಿಲ್ಲ, ಯಾವುದೇ ಬೆದರಿಕೆಗೆ ಬಗ್ಗದೆ ತನಿಖೆ ಮಾಡಿದ್ದೇನೆ. ಇದೊಂದೇ‌ ಪ್ರಕರಣವಲ್ಲ, ರಾಜೀವ್ ಗಾಂಧಿ‌ ಹತ್ಯೆ, ಬಾಬ್ರಿ ಮಸೀದಿ ಪ್ರಕರಣದ ತನಿಖೆಯಲ್ಲೂ ಭಾಗಿಯಾಗಿದ್ದೆ. ಮೂರು ಬಾರಿ ನನ್ನ ಮೇಲೆ ಅಟ್ಯಾಕ್ ಆಗಿದೆ ಎಂದ ಅವರು ನನಗೆ ಯಾವುದೇ ಪ್ರಾಣಭಯವಿಲ್ಲ. ಟೈಮ್ ಬಂದಾಗ ಎಲ್ಲರೂ ಸಾಯಲೇ ಬೇಕು ಎನ್ನುತ್ತಾರೆ ನಿವೃತ್ತ ಸಿಬಿಐ ಡಿಐಜಿ ಮುಳಿಂಜ ನಾರಾಯಣನ್

 

See also  ಹಾಡುಹಗಲೇ ಚಾಕುವಿನಿಂದ ಇರಿದು ಜೇಬುಗಳ್ಳನ ಬರ್ಬರ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು