News Kannada
Sunday, December 04 2022

ಮೈಸೂರು

ಮೈಸೂರಿನಿಂದ ಬೈಕ್ ರ್ಯಾಲಿಗೆ ಅನುಮತಿ ಇಲ್ಲ: ನಗರ ಪೊಲೀಸ್ ಕಮಿಷನರ್

Photo Credit :

ಮೈಸೂರಿನಿಂದ ಬೈಕ್ ರ್ಯಾಲಿಗೆ ಅನುಮತಿ ಇಲ್ಲ: ನಗರ ಪೊಲೀಸ್ ಕಮಿಷನರ್

ಮೈಸೂರು- ಮಂಗಳೂರು ಚಲೋ ಅಂಗವಾಗಿ ಮೈಸೂರಿನಿಂದ ಹೊರಡಲಿರುವ ಬೈಕ್ ರ್ಯಾಲಿಗೆ ಅನುಮತಿ ನೀಡಲಾಗಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಡಾ. ಸುಬ್ರಹ್ಮಣ್ಯೇಶ್ವರ್ ರಾವ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಇಂದು ನಗರದ ಕಮಿಷನರ್ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಮಿಷನರ್, ಬಿಜೆಪಿ ಯುವ ಮೊರ್ಚಾ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಅನುಮತಿಗಾಗಿ ಪತ್ರ ನೀಡಿ ೬ ರಂದು ಮೈಸೂರು ಕೋಟೆ ಆಂಜನೇಯ ದೇವಸ್ಥಾನದಿಂದ ಬೈಕ್ ರ್ಯಾಲಿಗೆ ಅವಕಾಶ ಕೇಳಿದ್ದರು. ಆದರೆ ಪತ್ರವನ್ನ ಗಮನಿಸಿದಾಗ ಅವರು ತೆರಳುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವ ಅಂಶಗಳು ಕಂಡಿವೆ. ಈ ಬಗ್ಗೆ ಅವರಿಗೆ ಶೋಕಾಶ್ ನೋಟಿಸ್ ನೀಡಿದ್ದೇವೆ. ಇದಕ್ಕೆ ಸರಿಯಾದ ಸ್ಪಷ್ಟನೆ ಕೊಟ್ಟಿಲ್ಲ, ಹಾಗಾಗಿ ಬೈಕ್ ರ್ಯಾಲಿಗೆ ಅನುಮತಿ ನೀಡಿಲ್ಲ.

ಕರ್ನಾಟಕ ಪೊಲೀಸ್ ಆಕ್ಟ್ ೧೯೬೩ , ೩೩, ೩೪ ಅಧಿನಿಯಮ ಪ್ರಕಾರ ನಾಳೆ ಬೆಳಿಗ್ಗೆ 6 ರಿಂದ 8ನೇ ತಾರೀಕಿನ ಬೆಳಿಗ್ಗೆ 6 ರವರೆಗೆ ಮೈಸೂರು ನಗರದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. 1000 ಬೈಕ್ ಒಂದೇ ಭಾರಿ ರಸ್ತೆಗೆ ಇಳಿಯೊದ್ರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತೆ. ಇದರ ಬಗ್ಗೆ ಮುಖಂಡರು ಜವಾಬ್ದಾರಿ ತಗೊಂಡಿಲ್ಲ.

ಹಿಂದೆ ಕೂಡ ಬೈಕ್ ರ್ಯಾಲಿಗೆ ಅವಕಾಶ ಕೊಟ್ಟಿಲ್ಲ. ಈಗಲೂ ಕೊಟ್ಟಿಲ್ಲ. ಮೈಸೂರು ಪೊಲೀಸ್ ಸ್ಟ್ರೆಂತ್ ೩೦೦೦ ಇದೆ. ೧೦೦೦ ಸಾವಿರ ಬೈಕ್ ತಡೆಯೋದು ಕಷ್ಟ ಆಗಲ್ಲ. ಅದಾಗ್ಯೂ ಆಗುವ ತೊಂದರೆಗೆ ಮುಖ್ಯಸ್ಥರೇ ಹೊಣೆ ಆಗ್ತಾರೆ. ಒಂದು ವೇಳೆ ನಿಯಮ ಮೀರಿದರೆ ಬೈಕ್ ಮತ್ತು ಯುವಕರ ಮೇಲೆ ಕೇಸ್ ಹಾಕಲಾಗುತ್ತೆ. ಆಯೋಜಕರ ಮೇಲೆ ಐಟಿಗೆ ಕೂಡ ದೂರು ಕೊಡಲಾಗುತ್ತೆ. ಬಂಧಿಸಿದವರನ್ನು ಜೈಲಿಗೆ ಕಳಿಸುವ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಮೈಸೂರು ಪೊಲೀಸ್ ಕಮಿಷನರ್ ಸುಬ್ರಹ್ಮಣ್ಯೇಶ್ವರ್ ರಾವ್ ಎಚ್ಚರಿಕೆ.

See also  ಮೈಸೂರಿನಿಂದ ತರಕಾರಿ ಕೊಂಡುಕೊಂಡ ನಟಿ ಶೃತಿ, ಶ್ವೇತಾ ಶ್ರೀವಾತ್ಸವ್, ಅಮೃತಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು