News Kannada
Sunday, September 25 2022

ಮೈಸೂರು

ಅನ್ನ ಹಾಕಿದ ಮನೆಯ ಮಗುವಿಗೆ ದಾಳಿ ಮಾಡಿತು ಆ ಸಾಕು ನಾಯಿ…. - 1 min read

Photo Credit :

ಅನ್ನ ಹಾಕಿದ ಮನೆಯ ಮಗುವಿಗೆ ದಾಳಿ ಮಾಡಿತು ಆ ಸಾಕು ನಾಯಿ….

ಮೈಸೂರು: ಮನೆಯಲ್ಲಿ ಪ್ರೀತಿಯಿಂದ ಸಾಕಿದ ರಾಟ್ ವೇಲರ್ ಶ್ವಾನ ಮನೆಯ ಮಾಲೀಕನ ಪುತ್ರನ ಮೇಲೆ ದಾಳಿ ನಡೆಸಿದ್ದು ಇದರಿಂದ ನಾಲ್ಕು ವರ್ಷದ ಮಗುವಿನ ತಲೆಯ ಭಾಗಕ್ಕೆ ತೀವ್ರ ಗಾಯಗಳಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಿನ್ನೆ ಮಧ್ಯಾಹ್ನ ಅಮೋಷ ವರ್ಷ, ಮನೆಯ ಮುಂದಿನ ಆವರಣದಲ್ಲಿ ನಾಯಿಯೊಂದಿಗೆ ಆಟವಾಡುತ್ತಿದ್ದಾಗ ನಾಯಿ ಮಗುವಿನ ತಲೆಯನ್ನು ಬಲವಾಗಿ ಕಚ್ಚಿದೆ. ಕಿರುಚಾಟ ಕೇಳಿ ನೆರೆಯ ನಿವಾಸಿಗಳು, ಅಜಯ್ ಮತ್ತು ಅವರ ಕುಟುಂಬದವರನ್ನು ಕೂಗಿದ್ದಾರೆ. ತಕ್ಷಣ ಅವರು ಮಗುವನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ನಾಯಿ ಮಗುವನ್ನು ಬಿಡಲಿಲ್ಲ. ಕೊನೆಗೆ ದೊಣ್ಣೆಯಿಂದ ನಾಯಿಗೆ ಹೊಡೆದು ಮಗುವನ್ನು ಬಿಡಿಸಿಕೊಂಡು ತಕ್ಷಣ ಕುವೆಂಪು ನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಗರದ ದಟ್ಟಗಳ್ಳಿಯ ಯುನಿವರ್ಸಿಟಿ ಲೇಔಟ್ ನಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಬಡಾವಣೆ ನಿವಾಸಿ ಅಜಯ್ ಅವರ ಪುತ್ರ ನಾಲ್ಕು ವರ್ಷದ ಅಮೋಘ ವರ್ಷ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುವೆಂಪುನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಳಿಕ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮದುವೆಯಾಗಿ ಏಳು ವರ್ಷಗಳ ಬಳಿಕ ಹುಟ್ಟಿದ ಕಂದಮ್ಮನ ಸ್ಥಿತಿ ಕಂಡು ಹೆತ್ತವರು ಕಂಗಲಾಗಿದ್ದಾರೆ.

See also  ಅಕ್ಕಿ ವ್ಯಾಪಾರಿ ಹತ್ಯೆ ಪ್ರಕರಣ: ನಗರಸಭೆ ಮಾಜಿ ಸದಸ್ಯರಿಬ್ಬರ ಸಹಿತ 9 ಮಂದಿಗೆ ಜೀವಾವಧಿ ಶಿಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು