News Kannada
Sunday, September 25 2022

ಮೈಸೂರು

ಭಾಗಮಂಡಲ-ಶ್ರೀರಂಗಪಟ್ಟಣದಲ್ಲಿ ಭಕ್ತರ ಜಾತ್ರೆ! - 1 min read

Photo Credit :

ಭಾಗಮಂಡಲ-ಶ್ರೀರಂಗಪಟ್ಟಣದಲ್ಲಿ ಭಕ್ತರ ಜಾತ್ರೆ!

ಮೈಸೂರು: ಹನ್ನೆರಡು ವರ್ಷಕ್ಕೊಮ್ಮೆ ಜರುಗುವ ಕಾವೇರಿ ಪುಷ್ಕರ ಮೇಳ  ಸೆ.12ರಿಂದ ಆರಂಭಗೊಂಡಿದ್ದು, ಅಲ್ಲಿಂದ ಇಲ್ಲಿವರೆಗೆ ಕೊಡಗಿನ ತಲಕಾವೇರಿ, ಭಾಗಮಂಡಲ, ಶ್ರೀರಂಗಪಟ್ಟಣದ ಕಾವೇರಿ ನದಿ ತೀರಕ್ಕೆ ಆಗಮಿಸುವ ಭಕ್ತರ ದಂಡು ಹೆಚ್ಚಾಗಿದೆ.

ಸ್ಥಳೀಯರು ಮತ್ತು ರಾಜ್ಯದ ಭಕ್ತರಿಗಿಂತ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಕಾವೇರಿ ನದಿಯಲ್ಲಿ ಮಿಂದು ಪಾವನರಾಗುತ್ತಿದ್ದಾರೆ.

ಶನಿವಾರ ಮತ್ತು ಭಾನುವಾರ ರಜಾದಿನವಾಗಿದ್ದರಿಂದ ಶ್ರೀರಂಗಪಟ್ಟಣದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದು ಕಂಡು ಬಂತಲ್ಲದೆ, ಶ್ರೀರಂಗಪಟ್ಟಣದಲ್ಲಿ ಟ್ರಾಫಿಕ್ ಜಾಮ್ ಆಗಿ ಜನ ಪರದಾಡುವಂತಾಯಿತು. ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯ, ಗೋಸಾಯಿಘಾಟ್, ಪಶ್ಚಿಮವಾಹಿನಿ, ಕಾವೇರಿ ಸ್ನಾನಘಟ್ಟ ಸೇರಿದಂತೆ ಕಾವೇರಿ ನದಿ ತೀರದಲ್ಲಿ ಭಕ್ತರು ಎಲ್ಲೆಂದರಲ್ಲಿ ಸ್ನಾನ ಮಾಡಿ ಪೂಜಾದಿ ಕಾರ್ಯಗಳನ್ನು ನೆರವೇರಿಸುತ್ತಿದ್ದದ್ದು ಕಂಡುಬಂತು. ದಡದಲ್ಲಿ ಸ್ಥಳವಿಲ್ಲದೆ, ಸರತಿ ಸಾಲಿನಲ್ಲಿ ನಿಂತು ಸ್ನಾನ ಮಾಡುವಂತಹ ಪರಿಸ್ಥಿತಿ ಎದುರಾಗಿತ್ತು.

ಸಂಚಾರಿ ದಟ್ಟಣೆ ಹಾಗೂ ಭಕ್ತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಬಾರದೆಂಬ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸುವ ಮೂಲಕ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ನಿಮಿಷಾಂಭ, ಕಾವೇರಿ ಸ್ನಾನಘಟ್ಟ, ಗೋಸಾಯಿಘಾಟ್, ಪಶ್ಚಿಮವಾಹಿನಿಗಳಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದು ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು.

ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ತೊಂದರೆಯುಂಟಾಗಿತ್ತು. ಅಪಾಯ ಪ್ರದೇಶಗಳಿಗೆ ತೆರಳಬಾರದೆಂದು ಸೂಚಿಸುತ್ತಿದ್ದರೂ ಕೆಲವರು ಅದಕ್ಕೆ ಸೊಪ್ಪು ಹಾಕದೆ ತೆರಳುತ್ತಿದ್ದರಿಂದ ಅವರನ್ನು ಅಲ್ಲಿಂದ ಬೇರೆಡೆಗೆ ಕಳುಹಿಸುವಲ್ಲಿ ಪೊಲೀಸರು ಹೆಣಗಾಡಬೇಕಾಯಿತು.

ಪ್ರತಿ ದಿನವೂ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು ದೂರದಿಂದ ಬರುವ ಪ್ರವಾಸಿಗರು, ಭಕ್ತರು ಶ್ರೀರಂಗಪಟ್ಟಣದಲ್ಲಿ ಬೀಡು ಬಿಟ್ಟು ಪೂಜಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

 

ಕೊಡಗಿನಲ್ಲೂ ಭಕ್ತರು

ಕೊಡಗಿನ ಭಾಗಮಂಡಲದ ಸಂಗಮದಲ್ಲಿ ಸ್ನಾನ ಮಾಡಿದರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯೂ ಇದ್ದು, ಇದೀಗ ಕಾವೇರಿ ಪುಷ್ಕರ ನಡೆಯುತ್ತಿರುವ ಕಾರಣದಿಂದಾಗಿ ಇಲ್ಲಿಗೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಈ ವ್ಯಾಪ್ತಿಯ ಪ್ರದೇಶ ಕಲುಷಿತ ಗೊಳ್ಳುತ್ತಿದೆ.

ಎಲ್ಲೆಂದರಲ್ಲಿ ತಿಂದುಂಡು ಕಸ ಎಸೆಯುವುದು, ಮಲಮೂತ್ರ ವಿಸರ್ಜಿಸುತ್ತಿದ್ದು, ಗಬ್ಬೆದ್ದು ನಾರುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಮಳೆ ಬಂದರೆ ಎಲ್ಲ ತ್ಯಾಜ್ಯಗಳು ಕಾವೇರಿ ನದಿಯನ್ನು ಸೇರುತ್ತಿದ್ದು ನೀರು ಕಲುಷಿತ ಗೊಳ್ಳುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.

See also  ತಂದೆಗೆ ಸೇರಿದ ಹಣ ಕೊಡಿ ; ಶವ ಬೇಡ ಎಂಬ ಸುಪುತ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು