ಮೈಸೂರು: ಇದೊಂದು ಧರ್ಮಾತೀತ ಉತ್ಸವ, ಹಜ್ ಯಾತ್ರೆಯಲ್ಲಿ ಮುಸ್ಲಿಂರು ಮಾತ್ರ ಇರ್ತಾರೆ, ಕುಂಭಮೇಳದಲ್ಲಿ ಹಿಂದುಗಳು ಮಾತ್ರ ಭಾಗವಹಿಸ್ತಾರೆ. ಆದರೆ, ನಾಡಹಬ್ಬದಲ್ಲಿ ಧರ್ಮಾತೀತವಾಗಿ ಎಲ್ಲರೂ ಭಾಗವಹಿಸ್ತಾರೆ. ಇದೇ ನಾಡಹಬ್ಬ ದಸರಾದ ವಿಶೇಷ ಎಂದು ಪ್ರೊ.ಕೆ.ಎಸ್ ನಿಸಾರ್ ಅಹಮದ್ ದಸರಾ ಹಬ್ಬದ ವಿಶೇಷತೆಯನ್ನ ತಿಳಿಸಿದರು.
ಇಂದು ಚಾಮುಂಡಿ ಬೆಟ್ಟದಲ್ಲಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ನಾಡ ಹಬ್ಬ ದಸರಾಗೆ ಚಾಲನೆ ನೀಡಿ ಮಾತನಾಡಿದ ಪ್ರೊ.ಕೆ.ಎಸ್ ನಿಸಾರ್ ಅಹಮದ್, ತಮ್ಮ ಭಾಷಣಕ್ಕೂ ಆರಂಭಕ್ಕೂ ಮುನ್ನ ಬೇಂದ್ರೆಯವರ ಕವನ ಸಾಲು ಹೇಳಿದ ಪ್ರೊ.ನಿಸಾರ್ ಅಹಮದ್ ಉದ್ಘಾಟನೆ ಅವಕಾಶ ಮಾಡಿಕೊಟ್ಟ ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ಚಿರ ಋಣಿ ಎಂದರು.
ಇಂತಹ ಮಹಾನ್ ಕಾರ್ಯಕ್ರಮದ ಉದ್ಘಾಟನೆಯ ಭಾಗ್ಯ ದೊರೆತಿದ್ದು ನನ್ನ ಭಾಗ್ಯ ಈ ದೊಡ್ಡ ಸಮ್ಮೇಳನ ಉದ್ಘಾಟಿಸಿದ್ದು ನನಗೆ ಅತೀವ ಸಂತೋಷ ನೀಡಿದೆ ಎಂದರು. ನನಗೆ ಬಂದ ಸನ್ಮಾನಗಳೆಲ್ಲವಕ್ಕೂ ಇದು ತುಂಬಾ ದೊಡ್ಡ ಸನ್ಮಾನ. ದಸರಾ ಉತ್ಸವ ಚಾರಿತ್ರಿಕ ಮಹತ್ವ ಪಡೆದುಕೊಂಡಿದೆ. ವಿಶ್ವದಲ್ಲೇ ಇಂತಹ ಧರ್ಮ ನಿರಪೇಕ್ಷಿತ ಹಬ್ಬ ಮತ್ತೊಂದಿಲ್ಲ ಎಂದರು.
ಇನ್ನೂ ಕವಿಗಳ ಭಾಷಣ ಆಲಿಸದ ಸಿಎಂ ಸಿದ್ದರಾಮಯ್ಯನವರಿಗೆ ನನ್ನ ಮಾತು ಕೇಳಿಸಿಕೊಳ್ಳುವಂತೆ ಕಿವಿ ಮಾತು ಹೇಳಿದ ಕವಿಗಳು ನನ್ನ ಪುಸ್ತಕ ನಿನ್ನೆ ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಬಿಡುಗಡೆಯಾಗಿದೆ. ಇದು ಅಭಿನಂದಿಸುವ ಕೆಲಸ. ಸಾಂಸ್ಕೃತಿಕ ನಗರಿ ಮೈಸೂರು ತುಂಬಾ ಸಂಸ್ಕೃತಿಯಿಂದ ಕೂಡಿದೆ, ಬೆಂಗಳೂರು ಬೆರಕೆ ನಗರ ಎಂದರು.