News Kannada
Sunday, October 02 2022

ಮೈಸೂರು

ಮೈಸೂರು ದಸರಾಗೆ ಕಳೆ ಬಂದಿದೆ: ಸಿಎಂ - 1 min read

Photo Credit :

ಮೈಸೂರು ದಸರಾಗೆ ಕಳೆ ಬಂದಿದೆ: ಸಿಎಂ

ಮೈಸೂರು: ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಕೆರೆ ಕಟ್ಟೆಗಳು ತುಂಬಿ ಬರ ಮಾಯವಾಗಿ ಸಮೃದ್ಧವಾಗಿರುವುದರಿಂದ ನಾಡ ಹಬ್ಬ ಮೈಸೂರು ದಸರಾಗೆ ಕಳೆ ಬಂದಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅರಮನೆ ಆವರಣದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೆ ಮುನ್ನ ಸಂಪ್ರದಾಯದಂತೆ 2.15ಕ್ಕೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ಬಳಿಕ ಸಂದೇಶ ನೀಡಿದ ಅವರು ಮೈಸೂರು ದಸರಾ ಜನರ ಉತ್ಸವವಾಗಿದೆ ಇದರಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಸಂತೋಷವಾಗಿದೆ. ಅದಕ್ಕಿಂತ ಹೆಚ್ಚಾಗಿ ಕಳೆದ ಎರಡು ವರ್ಷಗಳಿಂದ ಕಾಡುತ್ತಿದ್ದ ಬರ ದೂರವಾಗಿದೆ. ರೈತರ ಸಂಕಷ್ಟ ಮರೆಯಾಗಿದ್ದಕ್ಕೆ ನೆಮ್ಮದಿಯಿದೆ. ಚಾಮುಂಡೇಶ್ವರಿಯ ಕೃಪಾಶೀರ್ವಾದದಿಂದ ಎಲ್ಲವೂ ಸುಗಮವಾಗಿ ನಡೆದಿದೆ ಎಂದರು.

1610ರಿಂದ ಆರಂಭವಾದ ದಸರಾವನ್ನು ಮಹಾರಾಜರು ನಡೆಸಿಕೊಂಡು ಬರುತ್ತಿದ್ದರಾದರೂ ಸ್ವಾತಂತ್ರ್ಯ ನಂತರ 1973ರಲ್ಲಿ ಸರ್ಕಾರ ಆಚರಣೆಯಾಗಿ ಮಾರ್ಪಾಡಾಯಿತು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ದೇಶ, ವಿದೇಶಗಳಿಂದ ಜನರು ದಸರಾ ವೀಕ್ಷಿಸಲು ಆಗಮಿಸಿರುವುದು ಸಂತಸ ತಂದಿದೆ ಎಂದರು. ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿತ್ತಾದರೂ ಜಂಬೂ ಸವಾರಿಗೆ ಮಳೆ ಬಿಡುವು ನೀಡಿರುವುದು ಶುಭಸಂಕೇತವಾಗಿದೆ. ಜತೆಗೆ ಇದುವರೆಗೆ ಉತ್ತಮ ಮಳೆಯಾಗಿ ರಾಜ್ಯಕ್ಕೆ ಸುಭೀಕ್ಷೆ ತಂದಿದೆ ಎಂದರು.

ಈ ವೇಳೆ ಮುಖ್ಯ ಮಂತ್ರಿಗಳೊಂದಿಗೆ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಚಿವೆ ಉಮಾಶ್ರೀ, ತನ್ವೀರ್ ಸೇಠ್ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದರು

See also  ಆಹಾರ ಅರಸಿ ನಾಡಿಗೆ ಬಂದ ಗಂಡಾನೆ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು