News Kannada
Friday, October 07 2022

ಮೈಸೂರು

ವಿಮಾನ ನಿಲ್ದಾಣದಲ್ಲಿ ಕೈ ಕಾರ್ಯಕರ್ತರ ಕಿತ್ತಾಟ… - 1 min read

Photo Credit :

ವಿಮಾನ ನಿಲ್ದಾಣದಲ್ಲಿ ಕೈ ಕಾರ್ಯಕರ್ತರ ಕಿತ್ತಾಟ…

ಮೈಸೂರು- ಸಿಎಂ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನವೇ ನಿಲ್ದಾಣದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.

ಏನಿದು ಘಟನೆ: ಇಂದು ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲು ಆಗಮಿಸುವ ಹಿನ್ನಲ್ಲೆಯಲ್ಲಿ ಅವರನ್ನ ಸ್ವಾಗತಿಸಲು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶ್ರೀರಾಂಪುರ ಕಾಂಗ್ರೆಸ್ ಮುಖಂಡ ಹಾಗೂ ಸದಸ್ಯರ ನಡುವೆ ಗಲಾಟೆ ನಡೆದಿದೆ.

ಸ್ಥಳೀಯ ಶ್ರೀರಾಂಪುರ ಗ್ರಾ.ಪಂಚಾಯಿತಿಯ ಹನುಮಂತ ರಾಜು ಅವರ ಕಾಲದಲ್ಲಿ ಅವ್ಯವಹಾರ ನಡೆದಿದ್ದು ಅವರನ್ನ ವರ್ಗಾವಣೆ ಮಾಡಬೇಕೆಂದು ಪ್ರತಿಭಟನೆಗಳು ನಡೆದಿದ್ದವು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಪಂಚಯತ್ ಸಿಇಓ ಪಿಡಿಓ ನನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ರವಿ ಕುಮಾರ್ ಎಂಬ ಪಿಡಿಓನನ್ನ ವರ್ಗಾಯಿಸಿದರು. ಆದರೆ ಹನುಮಂತರಾಜು ಚಾರ್ಚ್ ನೀಡದೆ ಶ್ರೀರಾಂಪುರ ಗ್ರಾ.ಪಂಚಾಯತಿಯಲ್ಲೇ ಮುಂದುವರೆದಿದ್ದರು.

ಈ ಹಿನ್ನೆಲೆಯಲ್ಲಿ ಕೋಪಗೊಂಡ 30 ಜನ ಗ್ರಾಮ ಪಂಚಯತ್ ಸದಸ್ಯರು ಸಿಎಂಗೆ ಮನವಿ ನೀಡಲು ವಿಮಾನ ನಿಲ್ದಾಣಕ್ಕೆ ಬಂದಾಗ 2 ಗುಂಪುಗಳ ನಡುವೆ ಗಲಾಟೆ ನಡೆದಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ವಿಮಾನ ನಿಲ್ದಾಣದ ಪೊಲೀಸರು ಇಬ್ಬರನ್ನ ಸಮಾಧಾನ ಪಡಿಸಿದ್ದಾರೆ.

See also  ಕಾಂಗ್ರೆಸ್ ಪಕ್ಷದ ಬಲವರ್ಧನೆ ನಮ್ಮ ಹೊಣೆ: ಸಚಿವ ತನ್ವೀರ್ ಸೇಠ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು