News Kannada
Thursday, September 29 2022

ಮೈಸೂರು

ಮನೆ ತೆರವಿಗೆ ಬಂದ ಅಧಿಕಾರಿಗಳಿಗೆ ಜನರ ವಿರೋಧ - 1 min read

Photo Credit :

ಮನೆ ತೆರವಿಗೆ ಬಂದ ಅಧಿಕಾರಿಗಳಿಗೆ ಜನರ ವಿರೋಧ

ಮೈಸೂರು: ಇಲ್ಲಿನ ಧರ್ಮಸಿಂಗ್ ಕಾಲನಿಯಲ್ಲಿರುವ ಸುಮಾರು 120 ಅನಧಿಕೃತ ಮನೆಗಳ ತೆರವಿಗೆ ಭಾನುವಾರ ಬೆಳಗ್ಗೆ ಸ್ಲಂಬೋರ್ಡ್ ಮತ್ತು ನಗರಪಾಲಿಕೆ ಅಧಿಕಾರಿಗಳು ಬಂದಾಗ ಜನರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.

ವಿಷಯ ತಿಳಿದ ಮಾಜಿ ಸಚಿವ ರಾಮದಾಸ್ ಸ್ಧಳಕ್ಕೆ ಆಗಮಿಸಿ ಮನೆಗಳ ತೆರವಿಗೆ ವಿರೋಧ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಅಧಿಕೃತವಾಗಿ ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರನ್ನು ಯಾವ ಆಧಾರದ ಮೇಲೆ ತೆರವುಗೊಳಿಸುತ್ತಿರುವಿರಿ. ಬೇರೆಡೆ ಯಾವ ಸ್ಕೀಂನಲ್ಲಿ ಮನೆ ಕೊಡುವಿರಿ. ಎಷ್ಟು ಜನ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದರಿಂದ ಅಧಿಕಾರಿಗಳು ವಿಚಲಿತರಾಗಿ ಸಮರ್ಪಕ ಉತ್ತರ ನೀಡಲು ವಿಫಲರಾದರು.

ವಿಶ್ವೇಶ್ವರ ನಗರದಲ್ಲಿರುವ ಧರ್ಮಸಿಂಗ್ ಕಾಲನಿಯಲ್ಲಿ 120 ಅನಧಿಕೃತ ಮನೆಗಳಲ್ಲಿ ಅಕ್ರಮವಾಗಿ ಜನರು ವಾಸಿಸುತ್ತಿದ್ದಾರೆ ಎಂಬುದು ಅಧಿಕಾರಿಗಳ ವಾದ. ಮನೆಗಳ ತೆರವು ಮಾಡುವಂತೆ ಇತ್ತೀಚೆಗೆ ಸೂಚನೆ ನೀಡಲಾಗಿತ್ತು. ಆದರೆ ಮನೆಗಳನ್ನು ತೆರವುಗೂಳಿಸಲು ನಿವಾಸಿಗಳು ನಿರಾಕರಿಸಿದ್ದರು. ಜನರ ಮತ್ತು ರಾಮ್ ದಾಸ್ ವಿರೋಧದ ಬಳಿಕ ಅಧಿಕಾರಿಗಳು ಬರಿಗೈಯಲ್ಲಿ ಹಿಂತಿರುಗಬೇಕಾಯಿತು.

ಸ್ಧಳೀಯರು ತಮ್ಮ ಕಷ್ಟಗಳನ್ನು ರಾಮದಾಸ್ ಅವರೊಂದಿಗೆ ಹಂಚಿಕೊಂಡು, ಮನೆಗಳನ್ನು ತೆರವಿಗೊಳಿಸಲು ನಿರಾಕರಿಸಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಾಳೆ ನಡೆಯುವ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನಕ್ಕೆ ಬರುವುದಾಗಿ ತಿಳಿಸಿ ಮನೆಗಳನ್ನು ತೆರವುಗಳಿಸದಂತೆ ತಾಕೀತು ಮಾಡಿದರು. ನಂತರ ಅಧಿಕಾರಿಗಳು ವಾಪಸ್ಸಾದರು.

See also  ಜನಸ್ಪಂದನ ಕಾರ್ಯಕ್ರಮಕ್ಕೆ ಕಂದಾಯ ಸಚಿವರ ತಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು