News Kannada
Monday, September 26 2022

ಮೈಸೂರು

ಮೈಸೂರಲ್ಲಿ ನಕಲಿ ಬಜಾಜ್ ಉತ್ಪನ್ನ ಮಾರಾಟ: ಮೂವರ ಬಂಧನ - 1 min read

Photo Credit :

ಮೈಸೂರಲ್ಲಿ ನಕಲಿ ಬಜಾಜ್ ಉತ್ಪನ್ನ ಮಾರಾಟ: ಮೂವರ ಬಂಧನ

ಮೈಸೂರು: ಪ್ರತಿಷ್ಠಿತ ಸಂಸ್ಥೆಯಾದ ಬಜಾಜ್ ಆಟೋ ಬ್ರಾಂಡ್ನ ಉತ್ಪನ್ನಗಳನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಲಷ್ಕರ್ ಠಾಣೆ ಪೊಲೀಸರು ಅಪಾರ ಪ್ರಮಾಣದ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.

ನಾಗೇಂದ್ರ, ಕೊಠಾರಿ ಜೈನ್ ಮತ್ತು ದಿನೇಶ್ ಬಂಧಿತರಾಗಿದ್ದಾರೆ. ಬಂಧಿತರು ಬಜಾಜ್ ಆಟೋ ಬ್ರಾಂಡ್ನ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಬಗ್ಗೆ ಲಷ್ಕರ್ ಪೊಲೀಸ್ ಠಾಣೆಗೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸರು ನಗರದ ಅಶೋಕ ರಸ್ತೆಯ (ಪಶ್ಚಿಮ) ಮೂರನೇ ಕ್ರಾಸ್ನಲ್ಲಿರುವ ದರ್ಶನ್ ಆಟೋ ಮೊಬೈಲ್ಸ್ ಮಳಿಗೆ ಮತ್ತು ದಾಸ್ತಾನು ಸಂಗ್ರಹ ಸ್ಥಳ ಹಾಗೂ ಕೊಠಾರಿ ಆಟೋ ಮೊಬೈಲ್ಸ್ ಮತ್ತು ಟೈರ್ ಹೌಸ್ ಮಳಿಗೆಗಳ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಬಜಾಜ್ ಬ್ರಾಂಡ್ ಹೆಸರಿನ ನಕಲಿ ಸ್ಪಾರ್ಕ್ ಪ್ಲಬ್ ಬಿಡಿಭಾಗಗಳು, ಬಜಾಕಿಟ್ ಪ್ಲೇಟ್ ಫ್ರಿಕ್ಷನ್ ಬಿಡಿಭಾಗಗಳು ಸಿಕ್ಕಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಮಾಲುಗಳನ್ನು ಅಂಗಡಿಯಲ್ಲಿ ಬಜಾಜ್ ಉತ್ಪನ್ನಗಳೆಂದು ನಂಬಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು.

ಇನ್ಸ್ಪೆಕ್ಟರ್ ವಿವೇಕಾನಂದ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದು, ಈ ಸಂಬಂಧ ಲಷ್ಕರ್ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಮೈಸೂರು ಜಿಲ್ಲೆಯಲ್ಲಿ ದಸರಾ ರಜೆ ದಿನಾಂಕ ಮಾರ್ಪಡಿಗೆ ಡಿಸಿ ಪತ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು