News Kannada
Friday, September 30 2022

ಮೈಸೂರು

ಮೈಸೂರಲ್ಲಿ ಸೆಲ್ಫಿ ವಿತ್ ಗುಂಡಿ ಅಭಿಯಾನ - 1 min read

Photo Credit :

ಮೈಸೂರಲ್ಲಿ ಸೆಲ್ಫಿ ವಿತ್ ಗುಂಡಿ ಅಭಿಯಾನ

ಮೈಸೂರು: ರಾಜ್ಯಾದ್ಯಂತ ಸುರಿದ ಮಳೆಗೆ ಬಹುತೇಕ ರಸ್ತೆಗಳು ಗುಂಡಿ ಬಿದ್ದಿದ್ದರೆ, ಮತ್ತೆ ಕೆಲವೆಡೆ ಕಳಪೆ ಕಾಮಗಾರಿಯಿಂದಲೂ ರಸ್ತೆಗಳು ದುಸ್ಥಿತಿ ಗೀಡಾಗಿದ್ದು, ಈ ರಸ್ತೆಗಳನ್ನು ದುರಸ್ತಿ ಪಡಿಸದೆ ಸರ್ಕಾರ ಮೌನಕ್ಕೆ ಜಾರಿರುವುದರಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನಸೆಳೆಯುವ ಸಲುವಾಗಿ ಮೈಸೂರು ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಅಗ್ರಹಾರದ ಜೆಎಸ್ಎಸ್ ಆಸ್ಪತ್ರೆ ಬಳಿ ಗುಂಡಿ ಬಿದ್ದ ರಸ್ತೆಯಲ್ಲಿ ಸೆಲ್ಫಿ ವಿತ್ ಗುಂಡಿ ಅಭಿಯಾನವನ್ನು ನಡೆಸಲಾಯಿತು.

ಮೈಸೂರು ರಕ್ಷಣಾ ವೇದಿಕೆಯ ಅಧ್ಯಕ್ಷ ಮೈ.ಕಾ. ಪ್ರೇಮ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಎಲ್ಲವನ್ನೂ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಹೀಗಿರುವಾಗ ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವಲ್ಲಿಯೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬಹುದು. ಹಾಗಾಗಿ ಗುಂಡಿ ಮುಕ್ತ ಕರ್ನಾಟಕಕ್ಕಾಗಿ ಸೆಲ್ಫಿ ವಿತ್ ಗುಂಡಿ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರು ತಮ್ಮ ಸುತ್ತಮುತ್ತ ಪ್ರದೇಶಗಳಲ್ಲಿನ ರಸ್ತೆ ಗುಂಡಿಗಳ ಜೊತೆ ಸೆಲ್ಫಿ ತೆಗೆದು ಸಾಧ್ಯವಿರುವ ಮಾಧ್ಯಮಗಳನ್ನು ಬಳಸಿಕೊಂಡು ಸರ್ಕಾರ ಮತ್ತು ಅಧಿಕಾರಿಗಳಗಮನ ಸೆಳೆಯಬೇಕೆಂದು ಈ ಅಭಿಯಾನ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಸಾಮಾನ್ಯ ಜನ ತಮ್ಮ ಕೆಲಸ-ಕಾರ್ಯ ಬದಿಗೊತ್ತಿ ಹೋರಾಟ ಮಾಡಲು ಸಾಧ್ಯವಿಲ್ಲ. ಹಾಗಾಗಿ ನೂತನ ವಿಶೇಷ ಅಭಿಯಾನ ಪ್ರಾರಂಭಿಸಲಾಗಿದೆ. ಜನ ಗುಂಡಿಗಳೊಂದಿಗೆ ಸೆಲ್ಫಿ ತೆಗೆದು ಪತ್ರಿಕೆಗಳಿಗೆ ಕಳುಹಿಸಬೇಕು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಕುಮಾರ್ ಗೌಡ, ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಮುಖಂಡರಾದ ವಿಕ್ರಮ್ ಅಯ್ಯಂಗಾರ್, ಶ್ರೀಧರಮೂರ್ತಿ, ಸಂದೇಶ್, ರಂಗನಾಥ್, ಮಿಲ್ ಮಹೇಶ್, ಶ್ರೀಕಾಂತ್ ಕಶ್ಯಪ್, ಕಡಕೊಳ ಜಗದೀಶ್, ಬೆಂಕಿಚಲುವರಾಜ್ ಪಾಲ್ಗೊಂಡಿದ್ದರು.

See also  ಯುವ ಸಮೂಹ ಗಾಂಧೀಜಿ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು: ಸಚಿವ ಜಿ.ಟಿ.ದೇವೇಗೌಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು