News Kannada
Friday, September 30 2022

ಮೈಸೂರು

ಅಮೃತ ಜಯಲಲಿತಾ ಮಗಳಲ್ಲ: ಸೋದರ ವಾಸುದೇವನ್ - 1 min read

Photo Credit :

ಅಮೃತ ಜಯಲಲಿತಾ ಮಗಳಲ್ಲ: ಸೋದರ ವಾಸುದೇವನ್

ಮೈಸೂರು: ಜಯಲಲಿತಾ ಮಗಳೆಂದು ಹೇಳಿಕೊಂಡು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವ ಮಹಿಳೆ ಜಯಲಲಿತಾ ತಂಗಿಯ ಮಗಳು ಎಂದು ಜಯಲಲಿತಾ ಸೋದರ ಸಂಬಂಧಿ ವಾಸುದೇವನ್ ಸ್ಪಷ್ಟಪಡಿಸಿದ್ದಾರೆ.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ರಂಗರಾಜಪುರದಲ್ಲಿ ವಾಸವಿರುವ ಜಯಲಲಿತಾ ತಂದೆಯ ಮೊದಲ ಹೆಂಡತಿಯ ಮಗ ವಾಸುದೇವನ್ ಇಂದು ಸುಪ್ರೀಂ ಕೋರ್ಟ್ ನಲ್ಲಿ ಜಯಲಲಿತಾ ಮಗಳೆಂದು ಆಸ್ತಿಗಾಗಿ ಡಿಎನ್ ಎ ಪರೀಕ್ಷೆಗೂ ಸಿದ್ದವಿರುವ ಮಹಿಳೆ ಬಗ್ಗೆ ವಾಸುದೇವನ್ ಅವರಲ್ಲಿ ದೂರವಾಣಿಯಲ್ಲಿ ಮಾತನಾಡಿಸಿದಾಗ, ಆ ಮಹಿಳೆ ಜಯಲಲಿತಾ ಸೋದರಿ ಶೈಲಜಾ ಮಗಳು. ಈಕೆ ಜಯಲಲಿತಾ ಮಗಳಲ್ಲ. ಆಸ್ತಿಗಾಗಿ ಈ ರೀತಿ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಈ ಸಂದರ್ಭದಲ್ಲಿ ಹೆಚ್ಚು ಹೇಳುವುದಿಲ್ಲ. ಜಯಲಲಿತಾ ಅವರಿಗೆ ಒಬ್ಬಳೇ ಮಗಳಿದ್ದು, ಅವಳು ಈಗ ಮದುವೆಯಾಗಿ ಹೈದಾರಬಾದ್ ಅಥವಾ ಅಮೆರಿಕಾದಲ್ಲಿರಬಹುದು. ಅದರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ ಎಂದರು.

ಜಯಲಲಿತಾ ಆಸ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ಸರಿಯಾದ ತೀರ್ಪು ನೀಡುವ ಬಗ್ಗೆ ನನಗೆ ವಿಶ್ವಾಸವಿದ್ದು, ಅವರ ಆಸ್ತಿಯನ್ನು ಸರಿಯಾದ ವ್ಯಕ್ತಿಗೆ ನೀಡಬೇಕೆಂದು ರಾಷ್ಟ್ರಪತಿ, ಪ್ರಧಾನಿ ಹಾಗೂ ಸುಪ್ರೀಂ ಕೋರ್ಟ್ ಗೆ ಅರ್ಜಿ ಬರೆದಿದ್ದೇನೆ ಎಂದು ಹೇಳಿದ ವಾಸುದೇವನ್, ಜಯ ಸಾವು ಹಲವಾರು ಸಂಶಯಗಳಿಗೆ ಕಾರಣವಾಗಿರುವುದರಿಂದ ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಗೃಹ ಇಲಾಖೆಗೆ ಪತ್ರ ಬರೆದಿದ್ದೇನೆ. ಈ ಪತ್ರಕ್ಕೆ ಗೃಹ ಇಲಾಖೆಯಿಂದ ಪತ್ರ ಬಂದಿದ್ದು, ಸಿಬಿಐ ತನಿಖೆ ನಡೆಸುತ್ತಿದ್ದೇವೆ ಎಂಬ ಉತ್ತರ ಬಂದಿದೆ ಎಂದು ಹೇಳಿದರು.

See also  ಲೋಕಾಯುಕ್ತ ಅಧಿಕಾರಿಯಿಂದ ಖಡಕ್ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು