News Kannada
Thursday, September 29 2022

ಮೈಸೂರು

ಬೈಕ್- ಕಾರು ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು - 1 min read

Photo Credit :

ಬೈಕ್- ಕಾರು ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಮೈಸೂರು: ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಣಸೂರಿನ ಬನ್ನಿಕುಪ್ಪೆ ಗೇಟ್ ಬಳಿ ಸೋಮವಾರ ನಡೆದಿದೆ.

ಹಿರೀಕ್ಯಾತನಹಳ್ಳಿ ಗ್ರಾಮದ ಅನುದಾನಿತ ಶ್ರೀ ವೇಣುಗೋಪಾಲ ವಿದ್ಯಾಸಂಸ್ಥೆಯ ಸಹಶಿಕ್ಷಕ ಮಹೇಶ್(35) ಮೃತಪಟ್ಟ ದುರ್ದೈವಿ. ಇವರು ಹುಣಸೂರು ತಾಲೂಕು ಕೊತ್ತೇಗಾಲ ಗ್ರಾಮದ ಸ್ವಾಮಿಗೌಡ ಎಂಬುವರ ಪುತ್ರರಾಗಿದ್ದಾರೆ.

ಮಹೇಶ್ ಅವರು ಕಳೆದ ಹತ್ತು ವರ್ಷದಿಂದ ಶ್ರೀ ವೇಣುಗೋಪಾಲ ವಿದ್ಯಾಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸೋಮವಾರ ಇಲವಾಲದಲ್ಲಿರುವ ಅವರ ಪತ್ನಿ ಮನೆಗೆ ತೆರಳಲು ತಮ್ಮ ಬೈಕ್ (ಕೆಎ-09 ಇಎಫ್-3990)ನಲ್ಲಿ ಬೆಳಿಗ್ಗೆ 8.30ರ ಸಮಯದಲ್ಲಿ ಮಂಗಳೂರು ಮೈಸೂರು ರಾಜ್ಯ ಹೆದ್ದಾರಿಯ ಬನ್ನಿಕುಪ್ಪೆ ಗೇಟ್ ಬಳಿ ತೆರಳುತ್ತಿದ್ದ ಸಂದರ್ಭ ಕಾರೊಂದು (ಕೆಎ-18 ಪಿ -3914) ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು. ಮೃತ ಮಹೇಶ್ ಪತ್ನಿ ಹಾಗೂ ಮೂರು ವರ್ಷದ ಗಂಡು ಮಗುವನ್ನು ಅಗಲಿದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

See also  ಮಡಿಕೇರಿ: ಕೊಡಗಿನ ಅತಿವೃಷ್ಟಿ ಹಾನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು