News Kannada
Tuesday, December 06 2022

ಮೈಸೂರು

2ನೇ ಮಹಾಯುದ್ಧದಲ್ಲಿ ಭಾಗವಹಿಸಿದ ಸೈನಿಕರ ಕುಟುಂಬಗಳ ಕಡೆಗಣನೆ

Photo Credit :

2ನೇ ಮಹಾಯುದ್ಧದಲ್ಲಿ ಭಾಗವಹಿಸಿದ ಸೈನಿಕರ ಕುಟುಂಬಗಳ ಕಡೆಗಣನೆ

ಹುಣಸೂರು: 2ನೇ ಮಹಾಯುದ್ಧದಲ್ಲಿ ಭಾಗವಹಿಸಿದ ಮಾಜಿ ಸೈನಿಕರ ಕಡೆಗಣಿಸಿದ್ದಲ್ಲದೆ ಕುಟುಂಬಕ್ಕೆ ಉಳಿಕೆ ಭೂಮಿ ನೀಡದೆ ವಂಚಿಸುತ್ತಿರುವುದರ ವಿರುದ್ಧ ಸತ್ಯ ಎಂ.ಎ.ಎಸ್ ಫೌಂಡೇಶನ್ ಆಶ್ರಯದಲ್ಲಿ ಮಾಜಿ ಸೈನಿಕರ ಕುಟುಂಬದವರು ತಾಲೂಕು ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು.

ರತ್ನಪುರಿ ಗ್ರಾಮದಲ್ಲಿರುವ ಸಂಘದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವ ಮುನ್ನ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ರಾವ್ ಖರಾಡೆ ಅವರ ಅಧ್ಯಕ್ಷತೆಯಲ್ಲಿ ಕುಂದುಕೊರತೆಗಳ ಸಭೆ ನಡೆದು ಸಂಘದ ಅಧ್ಯಕ್ಷರು ಮಾಜಿ ಸೈನಿಕರಿಗೆ ಮೀಸಲಿಟ್ಟ ಉಳಿಕೆ ಭೂಮಿಯನ್ನು ಸೈನಿಕರ ಕುಟುಂಬಕ್ಕೆ ತಾಲೂಕು ಆಡಳಿತ ಮಂಜೂರು ಮಾಡದೆ ಅನ್ಯ ವ್ಯಕ್ತಿಗಳು ಭೂಮಿಯನ್ನು ಉಳುತ್ತಿರುವುದು ಗೊತ್ತಿದ್ದೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸತ್ಯ ಎಂ.ಎ.ಎಸ್ ಫೌಂಡೇಶನ್ ಅಧ್ಯಕ್ಷರಾದ ಸತ್ಯಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸರ್ಕಾರ 1952ನೇ ಇಸವಿಯಲ್ಲಿ 2ನೇ ಮಹಾಯುದ್ಧದಲ್ಲಿ ಭಾಗವಹಿಸಿದ 350 ಸೈನಿಕ ಕುಟುಂಬಗಳಿಗೆ 5000 ಎಕರೆ ಭೂಮಿಯನ್ನು ಮೈಸೂರು ರಾಜ್ಯದೊಂದಿಗೆ ಒಡಂಬಡಿಕೆ ಮಾಡಿಕೊಂಡು ಖರೀದಿ ಮಾಡಲಾಗಿತ್ತು. ಪ್ರತಿ ಕುಟುಂಬಕ್ಕೆ 10 ಎಕರೆಯಂತೆ ಮತ್ತು 2 ಕಾಲೋನಿಗಳಾದ ರತ್ನಪುರಿ 1 ಮತ್ತು ರತ್ನಪುರಿ 2 (ಚೌಡಿಕಟ್ಟೆ) ನಿರ್ಮಿಸಿ ಪ್ರತಿ ಕುಟುಂಬಕ್ಕೆ 8 ಎಕರೆಯಂತೆ 284 ಕುಟುಂಬಗಳಿಗೆ ಹಂಚಲಾಗಿದ್ದು, ಉಳಿಕೆ ಭೂಮಿ ಮಾಜಿ ಸೈನಿಕರಿಗೆ ಮಂಜೂರು ಮಾಡದೆ ಬೇನಾಮಿ ವ್ಯಕ್ತಿಗಳು ಭೂಮಿಯನ್ನು ವ್ಯವಸಾಯ ಮಾಡಿಕೊಂಡು ಹೋಗುತ್ತಿರುವುದು ತಾಲೂಕು ಆಡಳಿತದ ಗಮನದಲ್ಲಿದ್ದರೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಜನವರಿ 9, 2017ರಂದು ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಸೈನಿಕ ಕುಟುಂಬ ಮತ್ತು ನಮ್ಮ ಸಂಸ್ಥೆಯು ಉಳಿಕೆ ಭೂಮಿ ನೀಡಲು ಸರ್ಕಾರಕ್ಕೆ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರು 2 ಬಾರಿ ಆಯ್ಕೆಯಾಗಿದ್ದರೂ, ಹಾಲಿ ಸಂಸದರು ಈ ವಿಚಾರವಾಗಿ ಚಕಾರವೆತ್ತದೆ ಮೌನವಹಿಸಿರುವುದು ಸೈನಿಕರಿಗೆ ಮಾಡಿರುವ ದ್ರೋಹವಾಗಿದೆ. ಮುಂದಿನ ಹೋರಾಟವನ್ನು ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಾಡಬೇಕೆಂದು ಕರೆ ನೀಡಿದರು.

ಸಂಘದ ಉಪಾಧ್ಯಕ್ಷರಾದ ಡಿ.ಕೆ.ಸೋಮಣ್ಣರವರು ಮಾತನಾಡಿ, ಸೈನಿಕರ ಕುಟುಂಬ ಸಂಕಷ್ಟದಲ್ಲಿದ್ದು, ಒಂದು ಮನೆಯಲ್ಲಿ 8ರಿಂದ 10 ಮಂದಿ ಇದೇ ಭೂಮಿಯನ್ನು ನಂಬಿಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಉಳಿಕೆ ಭೂಮಿಯನ್ನು ಮಂಜೂರಾತಿ ಮಾಡಬೇಕೆಂದು ಹೇಳಿದರು.

ಈ ಸಂಬಂಧ ನಡೆದ ಸಭೆಯಲ್ಲಿ ಕಾರ್ಯದರ್ಶಿ ಜೋಸೆಫ್, ಗೌರವಾಧ್ಯಕ್ಷ ಬಾಲಸುಬ್ರಹ್ಮಣ್ಯಂ, ಖಜಾಂಚಿ ಸತೀಶ್ ಸೇರಿದಂತೆ 100ಕ್ಕೂ ಹೆಚ್ಚು ಸೈನಿಕ ಕುಟುಂಬದವರು ಭಾಗವಹಿಸಿದ್ದರು.

See also  ಬಟ್ಟೆ ಅಂಗಡಿ ತೆರೆಯಲು ಅವಕಾಶ ನೀಡಿ ; ವ್ಯಾಪಾರಿಗಳ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು