News Kannada
Tuesday, December 06 2022

ಮೈಸೂರು

ಬಂಡೀಪುರದಲ್ಲಿ ಹುಲಿ ಗಣತಿ ಅಂತ್ಯ

Photo Credit :

ಬಂಡೀಪುರದಲ್ಲಿ ಹುಲಿ ಗಣತಿ ಅಂತ್ಯ

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿದ್ದ ಹುಲಿ ಗಣತಿ ಶನಿವಾರ ಅಂತ್ಯಗೊಂಡಿದ್ದು, ಗಣತಿದಾರರಿಗೆ 20ಕ್ಕೂ ಹೆಚ್ಚು ಹುಲಿಗಳಿರುವುದು ಗೋಚರವಾಗಿದೆ.

12 ವಲಯದ 112 ಗಸ್ತಿನಲ್ಲಿ ಸುಮಾರು 66 ಸ್ವಯಂಸೇವಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಗಣತಿಯನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ಹುಲಿಗಳು ಗಣತಿದಾರರ ಕಣ್ಣಿಗೆ ಕಂಡಿವೆ. ಬಂಡೀಪುರ, ಹೆಡಿಯಾಲ, ಮೂಲೆಹೊಳೆಯಲ್ಲಿ ತಲಾ ಎರಡು ಹುಲಿಗಳು, ಎನ್. ಬೇಗೂರಿನಲ್ಲಿ 6 ಹುಲಿಗಳು, ಕುಂದಕೆರೆ ಹಾಗೂ ಗುಂಡ್ರೆಯಲ್ಲಿ ತಲಾ 3 ಹುಲಿ, ಮದ್ದೂರು ಹಾಗೂ ಮೊಳೆಯೂರು ತಲಾ 1 ಹುಲಿಗಳು ಕಾಣಲು ಸಿಕ್ಕಿವೆ.

ಬೆಳಿಗ್ಗೆ 6ರಿಂದ 9 ಗಂಟೆಯವರೆಗೆ ನಡೆದ ಗಣತಿಯಲ್ಲಿ ಒಂದೊಂದು ತಂಡವು ಕಾಲುನಡಿಗೆಯಲ್ಲಿ ತಮ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಗಣತಿ ನಡೆಸಿದವು. ಇನ್ನೂ ಮೂರು ದಿನ ಟ್ರಾನ್ಸಕ್ಷನ್ ಲೈನ್ ನಲ್ಲಿ ಗಣತಿ ಮಾಡಿದರು. ಈ ಸಂದರ್ಭದಲ್ಲಿ ಹುಲಿಯ ಹೆಜ್ಜೆ ಗುರುತಿನ ಜಾಡು ಹಿಡಿದು ಆವುಗಳ ಆವಾಸ ಸ್ಥಾನದ ವ್ಯಾಪ್ತಿ ಪತ್ತೆ ಮಾಡಲಾಯಿತು. ಹೆಜ್ಜೆಯ ಉದ್ದ-ಅಗಲವನ್ನು ಅಳತೆ ಮಾಡಲಾಯಿತು. ಹುಲಿ ಗಣತಿಯೊಂದಿಗೆ ಕಾಡಿನ ಇತರೆ ಪ್ರಾಣಿಗಳಾದ ಆನೆ, ಚಿರತೆ, ಕಾಡಮ್ಮೆ, ಜಿಂಕೆ ಮುಂತಾದ ಪ್ರಾಣಿಗಳು ಗಣತಿದಾರರಿಗೆ ದರ್ಶನ ಕೊಟ್ಟವು. ವಿವಿಧ ವಲಯದಲ್ಲಿ 5 ಚಿರತೆ, 43 ಸೀಳು ನಾಯಿಗಳು, 176 ಆನೆಗಳು, 38 ಕಾಡೆಮ್ಮೆಗಳನ್ನು ಗಣತಿಯಲ್ಲಿ ದಾಖಲಿಸಿಕೊಳ್ಳಲಾಗಿದೆ.

ಹುಲಿ ಗಣತಿ ವೇಳೆ ಸ್ವಯಂ ಸೇವಕರು ಬಹಳ ಪ್ರೀತಿ ಪೂರಕವಾಗಿ, ಬದ್ಧತೆಯಿಂದ ಕಾಡಿನ ನಿಯಮಕ್ಕೆ ಯಾವುದೇ ತೊಂದರೆ ನೀಡದೆ ಗಣತಿ ನಡೆಸಿದರು. ಅವರಿಗೆ ತುಂಬಾ ಅಬಾರಿಯಾಗಿದ್ದೇವೆ ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದ್ದಾರೆ.

See also  ಮಣ್ಣಲ್ಲಿ ಮಣ್ಣಾದ ರಾಕೇಶ್ : ಕಾಟೂರಿನ ಫಾರಂ ಹೌಸ್ ನಲ್ಲಿ ಅಂತ್ಯಕ್ರಿಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು