News Kannada
Thursday, December 08 2022

ಮೈಸೂರು

ದಲಿತ ಮಹಿಳೆ ಅಡುಗೆ: ಊಟ ಮಾಡದ ವಿದ್ಯಾರ್ಥಿಗಳು

Photo Credit :

ದಲಿತ ಮಹಿಳೆ ಅಡುಗೆ: ಊಟ ಮಾಡದ ವಿದ್ಯಾರ್ಥಿಗಳು

ಪಿರಿಯಾಪಟ್ಟಣ: ಅಕ್ಷರ ದಾಸೋಹದಡಿ ಮುಖ್ಯ ಅಡುಗೆಯವರಾಗಿ ಕಾರ್ಯನಿರ್ವಹಿಸುತ್ತಿರುವ ದಲಿತ ಮಹಿಳೆಗೆ ಸವರ್ಣೀಯರು ಕೆಲಸ ಬಿಡುವಂತೆ ಕಿರುಕುಳ ನೀಡುತ್ತಿರುವ ಘಟನೆ ತಾಲೂಕಿನ ಚಿಕ್ಕಬೇಲಾಳು ಗ್ರಾಮದ ಸ.ಕಿ.ಪ್ರಾ. ಶಾಲೆಯಲ್ಲಿ ಬೆಳಕಿಗೆ ಬಂದಿದೆ.

ಚಿಕ್ಕಬೇಲಾಳು ಗ್ರಾಮದ ಸ.ಕಿ.ಪ್ರಾ.ಶಾಲೆಯ ಅಕ್ಷರದಾಸೋಹ ಯೋಜನೆಯ ಮುಖ್ಯ ಅಡುಗೆಯವರಾದ ಛಾಯಾ ಮಹದೇವ್ ಎಂಬುವರೇ ಕಿರುಕುಳಕ್ಕೊಳಗಾದ ಮಹಿಳೆ. ಇವರು ಕಳೆದ ಎರಡು ವರ್ಷಗಳಿಂದ ಮುಖ್ಯ ಅಡುಗೆಯವರಾಗಿ ನೇಮಕವಾಗಿದ್ದಾರೆ. ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಸುಮಾರು 37 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮಹದೇವ್ ಅವರಿಗೆ ನೀಡುತ್ತಿದ್ದ 2500 ರೂ. ಸಂಭಾವನೆಯಲ್ಲಿ ಮತ್ತೊಬ್ಬ ಮಹಿಳೆಯಾದ ಹೇಮ ಎಂಬುವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡು ಅವರಿಂದ ಅಡುಗೆ ಸಿದ್ದಪಡಿಸಿ ಊಟ ಬಡಿಸಲಾಗುತ್ತಿತ್ತು.

ಆದರೆ ಸಮೀಪದ ದೊಡ್ಡಬೇಲಾಳು ಗ್ರಾಮದಲ್ಲಿ 5ರಿಂದ 10ನೇ ತರಗತಿಯವರೆಗೆ ಪ್ರೌಢಶಾಲೆ ಆರಂಭವಾದ ನಂತರ 1ರಿಂದ 4ನೇ ತರಗತಿ ವಿದ್ಯಾರ್ಥಿಗಳನ್ನು ಉಳಿಸಿಕೊಂಡು ಎಲ್ಲರನ್ನೂ ದೊಡ್ಡಬೇಲಾಳಿಗೆ ವರ್ಗಾಯಿಸಲಾಗಿದೆ, ಆದ್ದರಿಂದ ಈ ಶಾಲೆಯಲ್ಲಿ ಕೇವಲ 9 ವಿದ್ಯಾರ್ಥಿಗಳು ಮಾತ್ರ ಉಳಿದುಕೊಂಡಿದ್ದಾರೆ.

ಇದರಿಂದ ಮುಖ್ಯಶಿಕ್ಷಕ ಗಿರೀಶ್ ಮತ್ತು ಅಡುಗೆಯವರಾದ ಛಾಯಾ ಮಹದೇವ್ ಮಾತ್ರವಿದ್ದು, ಗ್ರಾಮದಲ್ಲಿ ಶಾಲೆಗೆ ದಾಖಲಾಗಿರುವ ಸವರ್ಣೀಯರ ಮಕ್ಕಳು ಛಾಯಾ ಸಿದ್ದಪಡಿಸಿದ ಊಟವನ್ನು ಮಾಡದೆ ಮನೆಗೆ ತೆರಳುತ್ತಿದ್ದವು ಎನ್ನಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ ದಲಿತ ಮಹಿಳೆ ಅಡುಗೆ ಮಾಡುತ್ತಿರುವುದರಿಂದ ಯಾರೂ ಊಟ ಮಾಡಬೇಡಿ ಎಂದು ಪೋಷಕರು ಹೇಳಿದ್ದಾರೆ ಎಂಬುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕರೀಗೌಡ ಮತ್ತು ತಾ.ಪಂ. ಅಕ್ಷರದಾಸೋಹ ಸಹಾಯಕ ನಿರ್ದೇಶಕ ಶಿವರಾಜ್, ಸಿಆರ್ ಪಿ ವಸಂತಕುಮಾರ್, ಮುಖ್ಯೋಪಾಧ್ಯಾಯ ಗಿರೀಶ್ ಅವರಿಗೆ ಬಹಿರಂಗಪಡಿಸಿದ್ದಾರೆ. ಇದು ಗ್ರಾಮದಲ್ಲೀಗ ಸಂಚಲನವನ್ನುಂಟು ಮಾಡಿದೆ.

ಕಳೆದ 2 ವರ್ಷಗಳಿಂದ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಳ್ಳದ ತಾ.ಪಂ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವರಾಜ್ ಮತ್ತು ಸಿಆರ್ ಪಿ ವಸಂತಕುಮಾರ್, ಮುಖ್ಯೋಪಾಧ್ಯಾಯ ಗಿರೀಶ್ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೋಷಕರನ್ನು ಬುಧವಾರ ಶಾಲೆಗೆ ಕರೆಯಿಸಿ ನಮ್ಮ ಮಕ್ಕಳು ಅಕ್ಷರದಾಸೋಹದಡಿಯಲ್ಲಿ ಊಟ ಮಾಡಲು ಯಾವುದೇ ಅಭ್ಯಂತರವಿಲ್ಲ ಎಂದು ಪತ್ರ ಬರೆಸಿ ಸಹಿ ಹಾಕಿಸಿಕೊಂಡು ಈ ವಿಷಯಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.

ಕಳೆದ 6 ದಿನಗಳ ಹಿಂದೆ ತಾಲೂಕು ಮತ್ತು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಿತರಕ್ಷಣಾ ಸಮಿತಿ ಸಭೆಯಲ್ಲಿ ತಾ.ಪಂ.ಸದಸ್ಯ ಟಿ.ಈರಯ್ಯರವರು ಈ ವಿಷಯವನ್ನು ಪ್ರಸ್ತಾಪಿಸಿದ ಪರಿಣಾಮ ವಿಷಯ ಬಹಿರಂಗಗೊಂಡು ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿ ಹಾಕಲು ಭಾರೀ ಕಸರತ್ತು ನಡೆಸುತ್ತಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ಅಕ್ಷರದಾಸೋಹದ ಬಗ್ಗೆ ಯಾವುದೇ ರೀತಿ ಜಾಗೃತಿಗೊಳಿಸದೆ ಪೋಷಕರನ್ನು ಅಸ್ಪೃಶ್ಯತೆ ಆಚರಿಸಲು ಶಿಕ್ಷಣ ಅಧಿಕಾರಿಗಳೇ ಬೆಂಬಲ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವರಾದ ತನ್ವೀರ್ ಸೇಠ್ ಅವರ ತವರುಜಿಲ್ಲೆ ಹಾಗೂ ಬಿಡಿಎ ಅಧ್ಯಕ್ಷ ಕೆ.ವೆಂಕಟೇಶ್ ಅವರ ಸ್ವಕ್ಷೇತ್ರದಲ್ಲಿ ತಲೆತಗ್ಗಿಸುವಂತಹ ಆಚರಣೆಯಾಗುತ್ತಿರುವುದು ದುರದೃಷ್ಟಕರವಾಗಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ದಲಿತ ಸಂಘಟನೆಗಳು ಆಗ್ರಹಿಸಿವೆ.

See also  ಗೃಹಿಣಿಯ ಅಪಹರಿಸಿ ಸಾಮೂಹಿಕ ಅತ್ಯಾಚಾರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು