News Kannada
Saturday, November 26 2022

ಮೈಸೂರು

ಕೋಮುವಾದಿಗಳನ್ನು ಒದ್ದು ಓಡಿಸೋಣಾ: ಪ್ರಕಾಶ ರೈ - 1 min read

Photo Credit :

ಕೋಮುವಾದಿಗಳನ್ನು ಒದ್ದು ಓಡಿಸೋಣಾ: ಪ್ರಕಾಶ ರೈ

ಮೈಸೂರು: ನಾವೆಲ್ಲರೂ ಬದುಕಿಗೆ ಅರ್ಥವನ್ನು ಕಂಡುಕೊಳ್ಳೋಣ, ಶಾಂತಿಯನ್ನ ಹರಡೋಣ, ಈ ಕೋಮುವಾದಿಗಳನ್ನ ಇಲ್ಲಿಂದ ಓಡಿಸೋಣಾ ಎಂದು ಚಿತ್ರ ನಟ ಪ್ರಕಾಶ ರೈ ಸೌಹರ್ಥತೆಗಾಗಿ ಮಾನ ಸರಪಳಿ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ವಿಡಿಯೋ ಮಾಡಿ ಸಾರ್ವಜನಿಕರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.

ವಿಡಿಯೋದಲ್ಲಿ ಏನಿದೆ: ಇವತ್ತಿನ ನಮ್ಮ ಸಮಾಜದಲ್ಲಿ ಜಾತಿಯನ್ನ ಹೇಳುತ್ತಾ, ಕೋಮು ಗಲಭೆಯನ್ನ ಸೃಷ್ಟಿ ಮಾಡುತ್ತಾ, ಮನುಷ್ಯ ಮನುಷ್ಯರ ನಡುವೆ ಗೋಡೆಗಳನ್ನ ಕಟ್ಟುತ್ತಾ, ತುಂಬಾ ಆಶಾಂತಿಯನ್ನ ಹಬ್ಬಿಸುತ್ತಿರುವಂತಹ ಕೆಲಸಗಳು, ಪೈಶಾಚಿಕ ಕ್ರಿಯೆಗಳು ನಡೆಯುತ್ತಿವೆ. ಮೃಗೀಯ ಮನಸ್ಸುಗಳು ಕೆಲಸ ಮಾಡುತ್ತಿವೆ. ಇವತ್ತಿನ ಈ ಕ್ಷಣದಲ್ಲಿ ನಾವೆಲ್ಲರೂ ಮನುಷ್ಯರು, ವಿಚಾರವಂತರೂ ಪ್ರೀತಿಸುವವರು, ಮಾನವೀಯ ಗುಣವುಳ್ಳವರು, ನಾವೆಲ್ಲರು ನಮ್ಮ ಸಮಾಜದ ಹಿತಾಶಕ್ತಿಯಿಂದ, ನಮ್ಮ ಭವಿಷ್ಯದ ಹಿತಾಶಕ್ತಿಯಿಂದ ಈ ಕೋಮುವಾದಿಗಳ ವಿರುದ್ದ ನಮ್ಮ ಧ್ವನಿಯನ್ನ ಎತ್ತಬೇಕಾಗಿದೆ.

ಆ ನಿಟ್ಟಿನಲ್ಲಿ ಈ ಮಾನವ ಸರಪಳಿ. ಬನ್ನಿ ನಾವೆಲ್ಲರೂ ಮನುಷ್ಯರು, ಮಾನವೀಯ ಗುಣವುಳ್ಳ ಮನುಷ್ಯರು ಒಂದಾಗಿ ಈ ಸರಪಳಿಯಲ್ಲಿ ಒಂದಾಗೋಣಾ, ನಾನು ಈ ಮಾಹನ್ ಸರಪಳಿಯ ಒಂದು ಕೊಂಡಿಯಾಗಿ ಮೈಸೂರಿನಲ್ಲಿ ನಿಮ್ಮ ಜತೆಯಾಗಿರುತ್ತೇನೆ. ಜನವರಿ 30ರಂದು ನಿಮ್ಮೊಂದಿಗೆ ಇರುವುದು ನನ್ನ ಬದುಕಿಗೆ ಹೊಸ ಅರ್ಥವನ್ನು ಕೊಡುವ ವಿಷಯ.

ನಾವೆಲ್ಲರೂ ಬದುಕಿಗೆ ಅರ್ಥವನ್ನ ಕಂಡುಕೊಳ್ಳೊಣಾ, ಶಾಂತಿಯನ್ನ ಹರಡೋಣ, ಈ ಕೋಮು ವಾದಿಗಳನ್ನ ಒದ್ದು ಓಡಿಸೋಣಾ ಬನ್ನಿ ಮಾನವ ಸರಪಳಿ ಭಾಗವಹಿಸೋಣ ಎಂದು ಇಂದು ನಡೆಯುವ ಮೈಸೂರಿನ ಪುರಭವನದ ಬಳಿ ನಡೆಯುವ ಸೌಹರ್ಥತೆಗಾಗಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಕೋರಿದ್ದಾರೆ.

See also  ಶೆಟ್ಟಹಳ್ಳಿಯಲ್ಲಿ ಭಯಹುಟ್ಟಿಸಿರುವ ಹುಲಿ ಓಡಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು