News Kannada
Friday, December 09 2022

ಮೈಸೂರು

ನಕಲಿ ವೈದ್ಯರಿದ್ದಾರೆ ಎಚ್ಚರವಾಗಿರಿ!

Photo Credit :

ನಕಲಿ ವೈದ್ಯರಿದ್ದಾರೆ ಎಚ್ಚರವಾಗಿರಿ!

ಮೈಸೂರು: ಕ್ಲಿನಿಕ್ ತೆರೆದು ರೋಗಿಗಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಹಣ ಮಾಡುವ ದಂಧೆಗೆ ಕೆಲವರು ಇಳಿದಿದ್ದು, ನಕಲಿ ವೈದ್ಯರ ಸಂಖ್ಯೆ ಇದೀಗ ಎಲ್ಲೆಡೆ ಹೆಚ್ಚಾಗುತ್ತಿದೆ.

ಮೈಸೂರು ನಗರ ಸೇರಿದಂತೆ ಹಲವೆಡೆ ನಕಲಿ ವೈದ್ಯರು ಹೆಚ್ಚಿರುವುದು ಕಂಡು ಬರುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಿಸಿಮುಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಹುಣಸೂರಿನಲ್ಲಿ ನಕಲಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ಹೀಗಾಗಿ ಹುಣಸೂರು ತಾಲೂಕು ಆರೋಗ್ಯಾಧಿಕಾರಿಗಳ ತಂಡ ಕೆಲವು ದಿನಗಳ ಹಿಂದೆ ಎರಡು ಖಾಸಗಿ ಕ್ಲಿನಿಕ್ ಗಳ ಮೇಲೆ ದಿಢೀರ್ ದಾಳಿ ನಡೆಸಿ ಇಬ್ಬರು ನಕಲಿ ವೈದ್ಯರನ್ನು ಪತ್ತೆ ಹಚ್ಚಿದ್ದಾರೆ.

ಹುಣಸೂರು ತಾಲೂಕಿನ ರತ್ನಪುರಿ ಮತ್ತು ಕೊಯಂಬತ್ತೂರು ಕಾಲೋನಿ ಗ್ರಾಮಗಳಲ್ಲಿ ದಾಳಿ ಮಾಡಿದಾಗ ವೈದ್ಯರು ಮತ್ತು ನಕಲಿ ಔಷಧಿ ಹಾಗೂ ಅವಧಿ ಮೀರಿದ ಔಷಧಿ ದೊರೆತಿದೆ. ರತ್ನಪುರಿ ಕಾಲೋನಿಯಲ್ಲಿ ಕೃಷ್ಣ ಕ್ಲಿನಿಕ್ ಎಂಬ ಹೆಸರಿನಲ್ಲಿ ಸುಮಾರು 5 ವರ್ಷಗಳಿಂದ ಡಾ. ವಲ್ಲಿ ಎಂಬಾತ ಆಯುರ್ವೇದ ಪ್ರಮಾಣ ಪತ್ರ ಪಡೆದುಕೊಂಡು ಅಲೋಪತಿ(ಇಂಗ್ಲೀಷ್ )ಔಷಧಿಗಳನ್ನು ಸಾರ್ವಜನಿಕರಿಗೆ ನೀಡುತ್ತಿರುವುದ್ದು ಪತ್ತೆಯಾಗಿದೆ. ಕೊಯಂಬತ್ತೂರ್ ಕಾಲೋನಿ ಗ್ರಾಮದಲ್ಲಿ ನಾಮ ಫಲಕವಿಲ್ಲದೇ, ವೈದ್ಯಕೀಯ ಪ್ರಮಾಣ ಪತ್ರವಿಲ್ಲದೆ, ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ಡಾ.ಹೇಮಾ ಎಂಬುವವರು ಕ್ಲಿನಿಕ್ ನಡೆಸುತ್ತಿರುವುದು ಪತ್ತೆಯಾಗಿತ್ತು.

ಹೇಮಾ ಬಿಎಸ್ಸಿ ಪದವೀಧರೆಯಾಗಿದ್ದು 2012 ರಲ್ಲಿ ಬೆಂಗಳೂರಿನಲ್ಲಿ ಪಾರಂಪರಿಕ ವೈದ್ಯ ಪರಿಷತ್ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರಮಾಣ ಪತ್ರವನ್ನಿಟ್ಟುಕೊಂಡು ವೈದ್ಯೆ ಎಂದು ಜನರನ್ನು ನಂಬಿಸಿ 5 ವರ್ಷದಿಂದ ಕ್ಲಿನಿಕ್ ನಡೆಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಅವರ ಬಳಿ ಯಾವುದೇ ಪ್ರಮಾಣ ಪತ್ರವಿಲ್ಲದ ಕಾರಣ ಕ್ಲಿನಿಕ್ ಮುಚ್ಚಿಸಿ ಅವರಿಗೆ ನೊಟೀಸ್ ನೀಡಲಾಗಿದೆ.

ದಾಳಿಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ದೇವತಾಲಕ್ಷ್ಮಿ, ಡಾ.ಶ್ರೀನಿವಾಸ್, ಹಿರಿಯ ಆರೋಗ್ಯ ಸಂಘಟಕ ಪುಟ್ಟಸ್ವಾಮಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

See also  ಅಮ್ಮನಿಗೆ ಸ್ಕೂಟರ್‌ ನಲ್ಲೆ ಭಾರತ ದರ್ಶನ ಮಾಡಿಸಿದ ಪುತ್ರನಿಗೆ ಮಹೀಂದ್ರಾ ಕಾರ್‌ ಗಿಫ್ಟ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು