News Kannada
Friday, December 09 2022

ಮೈಸೂರು

ಮಹಶೀರ್ ಗೆ ಕುತ್ತು ತಂದ ಅವೈಜ್ಞಾನಿಕ ಮೀನುಗಾರಿಕೆ

Photo Credit :

ಮಹಶೀರ್ ಗೆ ಕುತ್ತು ತಂದ ಅವೈಜ್ಞಾನಿಕ ಮೀನುಗಾರಿಕೆ

ಮೈಸೂರು: ಅವೈಜ್ಞಾನಿಕ ಮೀನುಗಾರಿಕೆಯಿಂದಾಗಿ ಅಪರೂಪದ ಪ್ರಬೇಧದ ಮಹಶೀರ್ ಮೀನುಗಳು ವಿನಾಶದಂಚಿಗೆ ಸಾಗುತ್ತಿವೆ ಎಂದು ಮಹಶೀರ್ ಟ್ರಸ್ಟ್ ಮುಖ್ಯಸ್ಥ ಸ್ಟೀವ್ ಲಾಕೆಟ್ ಹೇಳಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಮಹಶೀರ್ ಪ್ರಬೇಧದ ಜಾಗೃತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಟ್ಲಾ ಇನ್ನಿತರ ಮೀನುಗಳ ಜತೆ ಸೆಣಸಾಟ ನಡೆಸಲು ಸಾಧ್ಯವಾಗದೆ ಅವು ಸಾವನ್ನಪ್ಪುತ್ತಿವೆ. ಇದು ಮುಂದುವರಿದರೆ ಸಂತತಿಯೇ ನಾಶವಾದರೂ ಅಚ್ಚರಿಪಡಬೇಕಾಗಿಲ್ಲ ಎಂದರು.

ಕಾವೇರಿ ನದಿ ಹರಿಯುವ ಕೊಡಗು ಮತ್ತು ತಮಿಳುನಾಡಿನಲ್ಲಿ ಮಹಶೀರ್ ಮೀನು ಅನೇಕ ಕಾರಣಗಳಿಂದಾಗಿ ನಶಿಸುತ್ತಿರುವುದು ಕಂಡು ಬರುತ್ತಿದ್ದು, ಅವುಗಳ ರಕ್ಷಣೆಗಾಗಿ ಸಂಬಂಧಪಟ್ಟ ಇಲಾಖೆಗಳು ಮುಂದಾಗಬೇಕಾಗಿದೆ. ಮಹಶೀರ್ ಮೀನಿನ ಬಗ್ಗೆ ಸುಮಾರು 50ಕ್ಕೂ ಹೆಚ್ಚು ಪ್ರಬಂಧಗಳು ಮಂಡನೆಯಾಗಿದ್ದರೂ ಅವುಗಳ ಸಂರಕ್ಷಣೆ ಕುರಿತಂತೆ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಟ್ರಸ್ಟ್ ಮೂಲಕ ಈ ಮೀನುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅಧ್ಯಯನ ಮಾಡಿ ಸಂಬಂಧಿತ ಇಲಾಖೆಗಳಿಗೆ ಸಂರಕ್ಷಣೆ ಕುರಿತಂತೆ ಮಾಹಿತಿ ನೀಡುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು.

ಕೈಗಾರಿಕಾ, ವಸತಿ ಮಾಲಿನ್ಯ, ಮರಳು ಗಣಿಗಾರಿಕೆ, ರಾಸಾಯನಿಕ ತ್ಯಾಜ್ಯಗಳು ನದಿಗೆ ಸೇರುವುದರಿಂದ ಮೀನುಗಳು ಸಾವನ್ನಪ್ಪುತ್ತಿವೆ. ಜತೆ ನೀರಿನ ಕೊರತೆಯೂ ಸಂತಾನೋತ್ಪತ್ತಿಗೆ ಅಡಚಣೆಯಾಗುತ್ತಿದೆ. ರಾಜ್ಯದಲ್ಲಿ ಮಹಶೀರ್ ಮೀನು ಕಂಡು ಬಾರದ ಕಾರಣ ಮಹರಾಷ್ಟ್ರದಿಂದ ತಂದು ಮಾರಾಟ ಮಾಡಲಾಗುತ್ತಿದೆ.

ಹಾರಂಗಿ ಜಲಾಶಯ ಮೊದಲಾದ ಕಡೆ ಇರುವ ಬೇರೆ ಮೀನುಗಳನ್ನು ಸಂಪೂರ್ಣ ತೆರವುಗೊಳಿಸಿ, ಮಹಶೀರ್ ಮೀನುಗಳನ್ನು ಅಲ್ಲಿಗೆ ಬಿಟ್ಟು ಅವುಗಳ ವೃದ್ಧಿಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಇದೇ ವೇಳೆ ಸಲಹೆ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಕಾರ್ಯದರ್ಶಿ ಲೋಕೇಶ್ ಬಾಬು, ಡಾ. ಮನೋಹರ್ ಇನ್ನಿತರರು ಇದ್ದರು.

See also  ಸುಳ್ವಾಡಿಯ ಸಂತ್ರಸ್ತರಿಗೆ ಹೆಚ್ಚಿನ ನೆರವು ನೀಡಲು ಒತ್ತಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು