News Kannada
Tuesday, September 27 2022

ಮೈಸೂರು

ಗಿರಿಜನ ಹಾಡಿಯಲ್ಲಿ ನೀರಿಗಾಗಿ ಪರದಾಟ - 1 min read

Photo Credit :

ಗಿರಿಜನ ಹಾಡಿಯಲ್ಲಿ ನೀರಿಗಾಗಿ ಪರದಾಟ

ಮೈಸೂರು: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಅಲ್ಲಲ್ಲಿ ನೀರಿನ ಹಾಹಾಕಾರ ಆರಂಭವಾಗಿದ್ದು, ಕೆಲವೆಡೆ ಅಂತರ್ಜಲ ಕುಸಿತದ ಪರಿಣಾಮ ಕೊಳವೆ ಬಾವಿಗಳಲ್ಲಿ ನೀರೇ ಬರದಂತಾಗಿದ್ದು, ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಭಾರತವಾಡಿ ಗಿರಿಜನ ಹಾಡಿಯಲ್ಲಿ ನೀರು ಇಲ್ಲದ ಕಾರಣ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದ ಅನಿವಾರ್ಯತೆ ಎದುರಾಗಿದೆ.

ದೊಡ್ಡಹೆಜ್ಜೂರು ಗ್ರಾ.ಪಂ.ವ್ಯಾಪ್ತಿಯ ಭಾರತವಾಡಿ ಗಿರಿಜನ ಹಾಡಿಯಲ್ಲಿ ಕಳೆದ ಆರು ತಿಂಗಳಿನಿಂದ ಕಿರು ನೀರು ಸರಬರಾಜು ಯೋಜನೆಯು ಅಂತರ್ಜಲ ಕುಸಿತದಿಂದ ಸ್ಥಗಿತಗೊಂಡಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ನೀರಿಗಾಗಿ ಪರದಾಡುವಂತಾಗಿದ್ದು, ನೀರನ್ನು ಹುಡುಕಿಕೊಂಡು ಅಕ್ಕಪಕ್ಕದ ಪಂಪ್ ಸೆಟ್ ಹಾಗೂ ಕೆರೆ-ಕಟ್ಟೆಯತ್ತ ತೆರಳುವಂತಾಗಿದೆ. ಹಾಡಿಜನರ ಸಮಸ್ಯೆಯನ್ನು ಮನಗಂಡು ಗ್ರಾ.ಪಂ. ಅಧ್ಯಕ್ಷೆ ಮಹದೇವಿ ಬಾಲರಾಜ್ ಅವರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗ್ರಾಪಂ ಪಿಡಿಓ ಶಿವಣ್ಣ ಅವರು ನೀರಿನ ಸಮಸ್ಯೆ ಗಮನದಲ್ಲಿದ್ದು, ಟ್ಯಾಂಕರ್ ಮೂಲಕ ಹಾಡಿ ಜನತೆಗೆ ನೀರು ಪೂರೈಸಿ, ಕೂಡಲೇ 14ನೇ ಹಣಕಾಸು ಯೋಜನೆಯಲ್ಲಿ ಹೊಸ ಬೋರ್ವೆಲ್ ಕೊರೆಯಿಸಿ ನೀರು ಪೂರೈಸಲು ಕ್ರಮವಹಿಸಲಾಗುವುದಲ್ಲದೆ, ಎರಡು ಕೈಪಂಪ್ ಗಳ ಪುನಶ್ಚೇತನಗೊಳಿಸಲಾಗುವುದು. ಅಲ್ಲಿಯವರೆಗೆ ನಿರಂತರವಾಗಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದಾಗಿ ಹೇಳಿದ್ದಾರೆ.

ಈ ನಡುವೆ ಭರತವಾಡಿ ಗ್ರಾ.ಪಂ.ಸದಸ್ಯ ಮಹದೇವ್ ಸೇರಿದಂತೆ ನಿವಾಸಿಗಳು ಶೀಘ್ರವೇ ಹೊಸ ಬೋರ್ವೆಲ್ ಕೊರೆಯಿಸಿ ನೀರು ಪೂರೈಸಬೇಕು, ಕೈಪಂಪ್ ನ ಬೋರ್ವೆಲ್ ಗಳನ್ನು ಇನ್ನಷ್ಟು ಆಳಕ್ಕೆ ಕೊರೆಯಿಸಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

See also  ಗಜಪಡೆಗಳಿಗೆ ಸಿಡಿಮದ್ದಿನ ತಾಲೀಮು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು