News Kannada
Thursday, December 01 2022

ಮೈಸೂರು

ಹೆಚ್ ಡಿಕೆ, ಬಿಎಸ್ ವೈ ಸಿಎಂ ಕನಸು ಕಾಣುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

Photo Credit :

ಹೆಚ್ ಡಿಕೆ, ಬಿಎಸ್ ವೈ ಸಿಎಂ ಕನಸು ಕಾಣುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ

ಮೈಸೂರು: ಚುನಾವಣೆಯಲ್ಲಿ 25 ಸೀಟುಗಳನ್ನು ಗೆಲ್ಲದ ಜೆಡಿಎಸ್ ನವರು ಹಾಗೂ ಬುರುಡೆ ಬಿಡುತ್ತಾ ತಿರುಗುತ್ತಿರುವ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ವರುಣಾ ಕ್ಷೇತ್ರದ ಮೆಲ್ಲಹಳ್ಳಿ, ಹುನಗನಹಳ್ಳಿ, ಮಾದೇಗೌಡನಹುಂಡಿ, ರಂಗಸಮುದ್ರ, ಹಿಟ್ಟುವಳ್ಳಿ, ತುಂಬಲ, ಕುಪ್ಯಾ, ಯಡದೊರೆ, ಗರ್ಗೇಶ್ವರಿಗಳಲ್ಲಿ ರೋಡ್ಶೋ ಹಾಗೂ ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ನನ್ನ ಮೆಲ್ಲಹಳ್ಳಿ ಗ್ರಾಮದ ಸಂಬಂಧ 40 ವರ್ಷಗಳದ್ದು, ಎಲ್ಲಿಂದಲೋ ಬಂದವರು ಚುನಾವಣೆ ಮುಗಿದ ನಂತರ ನಾಪತ್ತೆಯಾಗುತ್ತಾರೆ. ಸುಳ್ಳು ಹೇಳಿ, ಬುರುಡೆ ಹೊಡೆದು ಹೋಗುತ್ತಾರೆ ಅಂತಹವರ ಬಗ್ಗೆ ಎಚ್ಚರದಿಂದಿರಿ ಎಂದರು.

ನಾನು ಮುಖ್ಯಮಂತ್ರಿಯಾದ ಮೇಲೆ ಕಳೆದ 5 ವರ್ಷದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ಜನಾಂಗದವರ ಅಭಿವೃದ್ಧಿಗೆ 88 ಸಾವಿರ ಕೋಟಿ ಖರ್ಚು ಮಾಡಿದ್ದೇನೆ. ಗುತ್ತಿಗೆಯಲ್ಲಿ 1 ಕೋಟಿ ರೂ.ವರೆಗೆ ಮೀಸಲಾತಿ ಮಾಡಿದ್ದೇವೆ. ವಿಧಾನಸೌಧದ ಆವರಣದಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪಿಸಿದ್ದೇನೆ. ಪರಿವಾರ, ತಳವಾರ, ಜನಾಂಗವನ್ನು ಎಸ್ಟಿಗೆ ಸೇರಿಸಲು ವ್ಯವಸ್ಥಿತವಾಗಿ ಶಿಫಾರಸ್ಸು ಮಾಡಿ ಕೇಂದ್ರಕ್ಕೆ ಕಳಿಸಿದ್ದೇವೆ. ನಾನು ಸಾಮಾಜಿಕ ನ್ಯಾಯದ ಪರವಾಗಿದ್ದು, ಎಲ್ಲ ಜನಾಂಗದ ಮಹಾಪುರುಷರ ಜಯಂತಿಗಳನ್ನು ಮಾಡಿದ್ದೇವೆ. ವಾಲ್ಮೀಕಿ ಜಯಂತಿ, ಭಗೀರಥ ಜಯಂತಿ, ಕೆಂಪೇಗೌಡರ ಜಯಂತಿ ಮಾಡಿದ್ದೇವೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದೇವೆ. ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರನ್ನು ಮಾದರಿ ಗ್ರಾಮ ಮಾಡಿದ್ದೇವೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿದ್ದೇವೆ ಎಂದ ಅವರು, ರಾಜಕಾರಣ ಎಂದರೆ ಜಾತಿ ಮಾಡುವುದಲ್ಲ, ಯಾವುದೋ ಒಂದು ವರ್ಗದ ಜನರನ್ನು ಮಾತ್ರ ಅಭಿವೃದ್ಧಿ ಮಾಡುವುದಲ್ಲ. ಸರ್ವಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕು, ಸರ್ವಜನಾಂಗಕ್ಕೂ ಕಾರ್ಯಕ್ರಮ ನೀಡಬೇಕು. ನನಗೆ ಮುಖ್ಯಮಂತ್ರಿಯಾಗಿ ಕೆಲಸಮಾಡುವ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಪಡಿಸಿಕೊಂಡಿದ್ದೇನೆ. ನನ್ನನ್ನು ಆಯ್ಕೆಮಾಡಿದ ಮತದಾರರಿಗೆ ಅಗೌರವ ತರುವ ಕೆಲಸ ಮಾಡಿಲ್ಲ, ಮಾಡೋದು ಇಲ್ಲ ಎಂದರು.

ಈ ಚುನಾವಣೆಯ ನಂತರ ಎಂದೂ ಚುನಾವಣೆಗೆ ನಿಲ್ಲುವುದಿಲ್ಲ ಆದರೆ ರಾಜಕೀಯದಲ್ಲಿರುತ್ತೇನೆ. ನಮ್ಮ ನಿಮ್ಮ ಸಂಬಂಧ ಶಾಶ್ವತವಾದುದು. ನನ್ನನ್ನು 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ಅದಕ್ಕಿಂತಲು ಹೆಚ್ಚಿನ ಅಂತರದಿಂದ ಡಾ. ಯತೀಂದ್ರರವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಾನೇ ಮುಖ್ಯಮಂತ್ರಿ ಆಗುವ ಅವಕಾಶವಿದೆ ಎಂದರು.

See also  ಪ್ರಧಾನಿ ಹೇಳಿಕೆಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು