News Kannada
Saturday, November 26 2022

ಮೈಸೂರು

ಸಿಎಂಗೆ ಕ್ಲಾಸ್ ತೆಗೆದುಕೊಂಡ ಮರಿಸ್ವಾಮಿಗೆ ಕುಮಾರಸ್ವಾಮಿ ಸನ್ಮಾನ - 1 min read

Photo Credit :

ಸಿಎಂಗೆ ಕ್ಲಾಸ್ ತೆಗೆದುಕೊಂಡ ಮರಿಸ್ವಾಮಿಗೆ ಕುಮಾರಸ್ವಾಮಿ ಸನ್ಮಾನ

ಮೈಸೂರು: ಸಿಎಂ ರೋಡ್ ಶೋ ವೇಳೆ ಕ್ಲಾಸ್ ತೆಗೆದುಕೊಂಡಿದ್ದ ಗ್ರಾಮ ಪಂಚಾಯತಿ ಸದಸ್ಯನಿಗೆ ಹೆಚ್.ಡಿ ಕುಮಾರಸ್ವಾಮಿ ಸನ್ಮಾನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ, ನಿನ್ನೆ ಸಿಎಂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮರಿಸ್ವಾಮಿ ಅವರನ್ನ ಕಂಡು ಏರು ಧ್ವನಿಯಲ್ಲಿ ಏ ಮರಿಸ್ವಾಮಿ ಬಾಯಿಲ್ಲಿ ಎಂದಾಗ, ನಾನು ಬರಲ್ಲ. ಜಿ.ಟಿ ದೇವೇಗೌಡರನ್ನ ಗೆಲ್ಲಿಸುತ್ತೇವೆ ಎಂದು ಬಹಿರಂಗವಾಗಿಯೇ ಸಿಎಂ ಕ್ಲಾಸ್ ತೆಗೆದುಕೊಂಡಿದರು.

ಈ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಮರಿಸ್ವಾಮಿ ಅವರಿಗೆ ಹಾರ ಹಾಕಿ, ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಮರಿಸ್ವಾಮಿ ಧೈರ್ಯ ಮೆಚ್ಚುವಂತದ್ದು. ಮರಿಸ್ವಾಮಿ ಹೇಳಿಕೆಯಿಂದ ಕಾರ್ಯಕರ್ತರಿಗೆ ಧೈರ್ಯ ಬಂದಿದೆ. ಮರಿಸ್ವಾಮಿ ಇರೋದನ್ನೇ ಬಹಿರಂಗವಾಗಿ ಸಿಎಂಗೆ ಹೇಳಿದ್ದಾರೆ ಎಂದರು.

ಇನ್ನೂ ಬಿಜೆಪಿಗೆ ನಿಕಟವರ್ತಿಗಳು ಅಂದ್ರೆ ಕಾಂಗ್ರೆಸ್ ನವರು. ಜಾತಿ ಬಲ, ಹಣ ಬಲದಿಂದ ಮತ್ತೆ ಅಧಿಕಾರಕ್ಕೆ ಬರೋ ಕನಸು ಸಿದ್ದರಾಮಯ್ಯ ಅವರದ್ದು. ಆದ್ರೆ ಈ ಬಾರಿ ಸಿದ್ದರಾಮಯ್ಯ ಆಟ ನಡೆಯಲ್ಲ. ಸಿದ್ದರಾಮಯ್ಯ ಯಾರ್ಯಾರ ಕಾಲನ್ನು ಹಿಡಿದುಕೊಂಡು ಕಾಂಗ್ರೆಸ್ ಸೇರಿ ಅಧಿಕಾರಕ್ಕೆ ಬಂದರು ಅನುವುದು ಗೊತ್ತಿದೆ. ಚಾಮುಂಡೇಶ್ಚರಿ ಕ್ಷೇತ್ರದಲ್ಲಿ ಗೆಲ್ಲಲ್ಲ ಅಂತಾ ಬಾದಾಮಿಗೆ ಹೋಗಿದ್ದಾರೆ. ಪ್ರಾದೇಶಿಕ ಅಸಮತೋಲನವನ್ನು ಸರಿಮಾಡಲು ಬಾದಾಮಿಗೆ ಹೊರಟಿದ್ದಾರೆ. ಜಾತಿ ಗುಂಪಿನ ನಾಯಕರನ್ನು ಚುನಾವಣೆಗೆ ನೇಮಕಮಾಡಿ ಜಾತಿ ವಾದವನ್ನು ಸಿಎಂ ಮಾಡಿದ್ದಾರೆ.

ಅದ್ಯಾರ ಜೊತೆ ಸಿಎಂ ವರುಣಾದಲ್ಲಿ ಒಪ್ಪಂದ ಮಾಡಿಕೊಂಡರೋ ಏನೋ? ವಿಜಯೇಂದ್ರ ಕಣದಿಂದ ಹಿಂದೆ ಸರಿಯಲು ಯಾರು ಕಾರಣ? ವರುಣಾ ಬಿಜೆಪಿ ಕಾರ್ಯಕರ್ತರಿಗೆ ಸಿಎಂ ಚಾಕು ಹಾಕಿದ್ದಾರೆ. ನಾವು ವರುಣಾದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಸ್ಟ್ಯಾಟರ್ಜಿ ಮಾಡುತ್ತೇನೆ. ಇವತ್ತು ಜಾತಿ ಭೇದ ಮರೆತು ಒಟ್ಟಾಗಿ ಜೆಡಿಎಸ್ ಬೆಂಬಲ ನೀಡಬೇಕಿದೆ. ಮೈಸೂರು ಜಿಲ್ಲೆಯನ್ನ ಸಿಎಂ ಅನಾಗರಿಕವಾಗಿ ನಡೆಸಿಕೊಂಡಿದ್ದಾರೆ ಎಂದು ಸಿಎಂ ವಿರುದ್ದ ವಾಗ್ದಾಳಿ ನಡೆಸಿದರು.

See also  ಅಕ್ರಮವಾಗಿ ಗೂಬೆ ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು