News Kannada
Sunday, November 27 2022

ಮೈಸೂರು

ಕುಮಾರಸ್ವಾಮಿ ಸಿಎಂ ಆಗಲು ಪ್ರಾರ್ಥಿಸಿ ಉರುಳು ಸೇವೆ - 1 min read

Photo Credit :

ಕುಮಾರಸ್ವಾಮಿ ಸಿಎಂ ಆಗಲು ಪ್ರಾರ್ಥಿಸಿ ಉರುಳು ಸೇವೆ

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಿ.ಎಸ್.ಪುಟ್ಟರಾಜು, ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯ ಗೆಲುವು ಸಾಧಿಸಿ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕೆಂದು ಪ್ರಾರ್ಥಿಸಿ ಅಭಿಮಾನಿಯೊಬ್ಬ ಪಟ್ಟಣದ ಬನ್ನಾರಿಯಮ್ಮನ ದೇವಸ್ಥಾನದ ಮುಂಭಾಗ ಉರುಳು ಸೇವೆ ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.

ಶ್ರೀರಂಗಪಟ್ಟಣದ ಪುರಸಭೆಯ ಮಾಜಿ ಅಧ್ಯಕ್ಷ, ಜೆಡಿಎಸ್ ರಾಜ್ಯ ಪೌರ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಆರ್.ಕೃಷ್ಣ ಎಂಬ ವ್ಯಕ್ತಿಯೇ ಉರುಳು ಸೇವೆ ಮಾಡಿ ಪ್ರಾರ್ಥನೆ ಸಲ್ಲಿಸಿದವರು.

ಉರುಳು ಸೇವೆಗೂ ಮುನ್ನ ಮಾತನಾಡಿದ ಆರ್.ಕೃಷ್ಣ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕು, ಸಿ.ಎಸ್.ಪುಟ್ಟರಾಜು ಅವರು ಗೆದ್ದು ಮಂತ್ರಿಯಾಗಬೇಕು, ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ರವೀಂದ್ರಶ್ರೀಕಂಠಯ್ಯ ಜಯಗಳಿಸಬೇಕೆಂದು ಆಶಿಸಿ ಬನ್ನಾರಿಯಮ್ಮನ ದೇವಸ್ಥಾನದಲ್ಲಿ ಉರುಳು ಸೇವೆ ಮಾಡುತ್ತಿದ್ದೇನೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಆಗುವುದರ ಜತೆಗೆ ರೈತರ ರಕ್ಷಣೆಯಾಗಲಿದೆ. ಜತೆಗೆ ದಲಿತ ಸಮುದಾಯದವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲೆಂದು ಉರುಳು ಸೇವೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಉರುಳು ಸೇವೆ ಬಳಿಕ ಬರಿಗಾಲಿನಲ್ಲಿ ಶ್ರೀರಂಗಪಟ್ಟಣದವರೆಗೂ ಪಾದಯಾತ್ರೆಯ ಮೂಲಕ ತೆರಳಿ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆಸಲ್ಲಿಸಿ 101 ತೆಂಗಿನ ಕಾಯಿ ಒಡೆಯುವುದಾಗಿ ಹೇಳಿದರು.

ಸೋಮವಾರ ಕುಟುಂಬ ಸಹಿತ ಹಾಗೂ ಜೆಡಿಎಸ್ ಕಾರ್ಯಕರ್ತರೊಂದಿಗೆ ತಮಿಳುನಾಡಿನ ಬನ್ನಾರಿಯಮ್ಮನ ದೇವಸ್ಥಾನಕ್ಕೆ ತೆರಳಿ ದೇವರಿಗೆ ಮೊದಲ ವಿಶೇಷ ಪೂಜೆಯನ್ನು ಸಲ್ಲಿಸುವುದಾಗಿ ಹೇಳಿದ್ದಾರೆ.

See also  ಶಾಲೆಯಿಂದ ಮರಳುತ್ತಿದ್ದ ವೇಳೆ ರಿಕ್ಷಾದಿಂದ ಆಯತಪ್ಪಿ ಬಿದ್ದು ಮಗು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು