News Kannada
Saturday, December 03 2022

ಮೈಸೂರು

ನೀರು ಕೊಟ್ಟಿದ್ದರೆ ನಿಮ್ಮ ಜೋಳಿಗೆ ನಾವೇ ತುಂಬಿಸುತ್ತಿದ್ದೆವು: ಸಿಎಂಗೆ ಟಾಂಗ್ ನೀಡಿದ ಎಚ್.ಡಿ. ದೇವೇಗೌಡ

Photo Credit :

ನೀರು ಕೊಟ್ಟಿದ್ದರೆ ನಿಮ್ಮ ಜೋಳಿಗೆ ನಾವೇ ತುಂಬಿಸುತ್ತಿದ್ದೆವು: ಸಿಎಂಗೆ ಟಾಂಗ್ ನೀಡಿದ ಎಚ್.ಡಿ. ದೇವೇಗೌಡ

ಬನ್ನೂರು: ಅನ್ನಕೊಟ್ಟಿದ್ದೇವೆ ಎನ್ನುವ ಸಿದ್ದರಾಮಯ್ಯ ಅವರ ತಿಳುವಳಿಕೆಗೆ ಇಂದಿರಾ ಕ್ಯಾಂಟಿನ್ಗೆ ಯಾರು ಹೋಗುತ್ತಾರೆ. ಬೆರಳೆನಿಕೆಯಷ್ಟು ಮಂದಿ ಮಾತ್ರ ಅಲ್ಲಿಗೆ ಹೋಗುತ್ತಾರೆ. ಸಿಎಂ ಸರಿಯಾಗಿ ನೀರಿನ ವ್ಯವಸ್ಥೆಯನ್ನು ಮಾಡುತ್ತಿದ್ದರೆ ನಿಮ್ಮ ಜೋಳಿಗೆಗೆ ಭತ್ತ ಹಾಕಿ ತುಂಬಿಸುತ್ತಿದ್ದೆವು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ಬನ್ನೂರು ಪಟ್ಟಣದ ಹಾಲಿನ ಡೈರಿಯ ಮುಂಭಾಗದಲ್ಲಿ ತಿ. ನರಸೀಪುರ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್. ಅಶ್ವಿನ್ ಕುಮಾರ್ ಪರವಾಗಿ ಮತಯಾಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಮಗೆ ದೇಶದ ರೈತರ ಇಂದಿನ ಸ್ಥಿತಿಯನ್ನು ಕಂಡು ಬಹಳಷ್ಟು ಮರುಕವಿದೆ. ನಾವು ಪಕ್ಕದ ತಮಿಳುನಾಡಿನ ಜನರನ್ನು ನೋಡಿ ನಾವು ಸಾಕಷ್ಟು ಕಲಿಯಬೇಕಿದೆ. ಅಲ್ಲಿ ಅಣ್ಣಾ ಡಿಎಂಕೆ ಮತ್ತು ಡಿಎಂಕೆಯಂತಹ ಪ್ರಾದೇಶಿಕ ಪಕ್ಷದ ಆಡಳಿತವಿದೆಯೇ ವಿನಃ ಕಾಂಗ್ರೆಸ್, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದ ಆಡಳಿತ ಇಲ್ಲ. ಇದರಿಂದ ಅಸ್ತಿತ್ವಕ್ಕೆ ಬರುವ ಯಾವುದೇ ಕೇಂದ್ರ ಸರ್ಕಾ ರವು ತಮಿಳುನಾಡಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುತ್ತಾರೆ.

ಕಾವೇರಿ ವಿಚಾರದಲ್ಲಿ ಟ್ರಿಬನಲ್ ಮಂಡಳಿಯು ವಾರಕ್ಕೆ, ತಿಂಗಳಿಗೆ ತಮಿಳುನಾಡಿಗೆ ನೀರು ಬಿಡಬೇಕೆಂದು ತಿಳಿಸುತ್ತದೆ. ಕಾವೇರಿ ಅಣೆಕಟ್ಟನ್ನು ರಾಜ್ಯದ ಜನತೆಯ ಹಣದಿಂದ ಕಟ್ಟಿದ್ದೇವೆಯೇ ಹೊರತು ತಮಿಳುನಾಡಿನ ಹಣದಿಂದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ತಮಿಳುನಾಡಿನಲ್ಲಿ ಶಾಸಕರು, ಸಂಸದರೆಲ್ಲರೂ ಸೇರಿ ನೀರಿಗಾಗಿ ಧರಣಿ ಕೂರುವ ವ್ಯವಸ್ಥೆ ನಮ್ಮಲ್ಲಿ ಏಕೆ ಇಲ್ಲ. ರೈತರ ಬಗ್ಗೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದರು.

ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಅದರ ಬಗ್ಗೆ ಮಾತನಾಡದೇ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಅದು ಜ್ಞಾಪಕವಾಗಿದೆ ಎಂದು ವ್ಯಂಗ್ಯವಾಡಿದರು.

ಇಡೀ ದೇಶದಲ್ಲಿ ಮುಸ್ಲಿಂರ ಪರವಾಗಿ ಹೋರಾಟ ಮಾಡಿದ ವ್ಯಕ್ತಿ ಇದ್ದರೇ ಅದು ದೇವೇಗೌಡ ಮಾತ್ರ ಎಂದು ತಿಳಿಸಿದ ಅವರು ಬಿಎಸ್ಪಿ ಪಕ್ಷದ ಮಾಯಾವತಿಯವರಿಗೆ ಹಿಂದುಳಿದ ವರ್ಗದ ಜನರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದು, ಅವರು ರಾಜ್ಯದಲ್ಲಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಬೇಕೆಂದು ಆಶಿಸಿ ನಮ್ಮೊಂದಿಗೆ ಕೈ ಜೋಡಿಸಿದ್ದು, ಅದನ್ನು ಲೋಕಸಭೆಯಲ್ಲೂ ಮುಂದುವರೆಸುವುದಾಗಿ ತಿಳಿಸಿದರು.

See also  ನಾವು ಯಾರ ಮೇಲೂ ದಾಳಿ ನಡೆಸಿದ ಇತಿಹಾಸವಿಲ್ಲ: ವೆಂಕಯ್ಯ ನಾಯ್ಡು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು