News Kannada
Saturday, September 24 2022

ಮೈಸೂರು

ನಿಫಾ ವೈರಸ್: ಮೈಸೂರು ಮೃಗಾಲಯದಲ್ಲಿ ಔಷಧಿ ಸಿಂಪಡಣೆ - 1 min read

Photo Credit :

 ನಿಫಾ ವೈರಸ್: ಮೈಸೂರು ಮೃಗಾಲಯದಲ್ಲಿ ಔಷಧಿ ಸಿಂಪಡಣೆ

ಮೈಸೂರು: ಮಾರಕ ನಿಫಾ ವೈರಸ್ ನಿಂದ ಮೃಗಾಲಯದ ಪ್ರಾಣಿಗಳನ್ನ ರಕ್ಷಣೆ ಮಾಡಲು ಮೃಗಾಲಯದಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲಾಗಿದ್ದು, ಪ್ರಾಣಿಗಳಿಗೆ ಸೊಂಕು ತಗಲದಂತೆ ಔಷಧಿಯನ್ನು ಸಿಂಪಡಿಸಲಾಗುತ್ತಿದೆ.

ಕೇರಳದಲ್ಲಿ ಮಾರಕ ನಿಫಾ ವೈರಸ್ ನಿಂದ ಈಗಾಗಲೇ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನಿಫಾ ವೈರಸ್ ಹೆಚ್ಚಾಗಿ ಬಾವಲಿಗಳಿಂದ ಮತ್ತು ಹಂದಿಗಳಿಂದ ಹರಡುತ್ತದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಾಣಿಗಳು ನಿಫಾ ವೈರಸ್ ನಿಂದ ಸಾವು ಸಂಭವಿಸಲ್ಲವಾದರೂ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಬಾವಲಿಗಳು ನೇತಾಡುತ್ತಿರುವ ಸುತ್ತ ಮಾವು ಮತ್ತು ಹಲಸಿನ ಮರಗಳಿದ್ದು, ಮುನ್ನಚ್ಚರಿಕೆ ಕ್ರಮವಾಗಿ ಬಾವಲಿಗಳು ನೇತಾಡುತ್ತಿರುವ ಮರಗಳ ಕೆಳಗೆ ವೈರಾಣುಗಳನ್ನ ನಾಶಪಡಿಸುವ ಔಷಧಿಗಳನ್ನ ಸಿಂಪಡಿಸುವ ಕಾರ್ಯ ನಡೆಯುತ್ತಿದೆ.

ಮಣ್ಣಿನಲ್ಲಿಯೇ ರೋಗಾಣುಗಳ ನಾಶವಾಗುವಂತೆ ಔಷಧಿ: ನಗರದ ಮೃಗಾಲಯಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಹಿನ್ನಲ್ಲೆಯಲ್ಲಿ ನಿಫಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಳ್ಳಲಾಗಿದ್ದು, ಮರದಲ್ಲಿ ನೇತಾಡುವ ಬಾವಲಿಗಳಿಂದ ಕೆಳಗೆ ಮಣ್ಣಿನ ಮೇಲೆ ಬೀಳುವ ಅವುಗಳ ಮಲಮೂತ್ರಗಳಲ್ಲಿರುವ ರೋಗಾಣುಗಳು ಮಣ್ಣಿನಲ್ಲಿಯೇ ನಾಶವಾಗುವಂತೆ ಔಷಧಿಗಳನ್ನು ಸಿಂಪಡಿಸಿ ವೈರಾಣುಗಳು ಮಣ್ಣಿನಲ್ಲಿ ನಾಶವಾಗುವಂತೆ ಕ್ರಮಕೈಗೊಳ್ಳಲಾಗಿದೆ. ಇನ್ನೂ ಮರಗಳಲ್ಲಿ ಬಿಟ್ಟಿರುವ ಮಾವು ಮತ್ತು ಹಲಸಿನ ಹಣ್ಣುಗಳನ್ನ ಈಗಾಗಲೇ ಕೀಳಲಾಗುತ್ತಿದ್ದು, ಬಾವಲಿಗಳು ಈ ಹಣ್ಣುಗಳನ್ನು ತಿಂದರೆ ಸೋಂಕು ಹರಡಬಾರದೆಂದು ಈ ಕ್ರಮ ಕೈಗೊಳ್ಳಲಾಗಿದೆ.

ಹಂದಿ ಸತ್ತರೆ ಮಾಹಿತಿ ನೀಡುವಂತೆ ಸೂಚನೆ: ಮೈಸೂರು ಜಿಲ್ಲೆಯಲ್ಲಿ ಇಲ್ಲಿಯವರೆಗೂ ನಿಫಾ ವೈರಸ್ ಬಗ್ಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೂ ಜಿಲ್ಲೆಯಲ್ಲಿ ಹಂದಿ ಸಾಕಣೆದಾರರಿಗೆ ಯಾವುದಾದರೂ ಹಂದಿಗೆ ರೋಗ ತಗಲಿದರೆ ಇಲ್ಲವೇ ಸತ್ತರೆ ಕೂಡಲೇ ತಿಳಿಸುವಂತೆ ಸೂಚಿಸಲಾಗಿದ್ದು, ಈ ಕುರಿತು ಪಶು ವೈದ್ಯರಿಗೂ ಮಾಹಿತಿ ನೀಡಲಾಗಿದೆ ಎನ್ನುತ್ತಾರೆ ಮೈಸೂರು ಜಿಲ್ಲಾ ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಪಿ.ಎಂ ಪ್ರಸಾದ್ ಮೂರ್ತಿ.

ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳಿಗೆ ನಿಫಾ ವೈರಾಣು ತಗಲುವ ಬಗ್ಗೆ ಈವರೆಗೂ ಯಾವುದೇ ಪ್ರಕರಣ ವರದಿಯಾಗಿಲ್ಲ. ಪ್ರಾಣಿಗಳಿಗೆ ನಿಫಾ ವೈರಾಣು ತಗಲುವ ಸಾಧ್ಯತೆಯ ಬಗ್ಗೆಯೂ ಮೃಗಾಲಯದ ಅಧಿಕಾರಿಗಳಿಗೆ ಈವರೆಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಭಾರ ಕಾರ್ಯನಿರ್ವಾಹಕ ನಿರ್ಧೇಶಕ ಸಿ.ರವಿಶಂಕರ್ ತಿಳಿಸಿದ್ದಾರೆ.

 

 

See also  ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಕಾಮುಕನಿಗೆ ಏಳು ವರ್ಷ ಜೈಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು