News Kannada
Tuesday, February 07 2023

ಮೈಸೂರು

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ನೇಮಕ

Photo Credit :

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ನೇಮಕ

ಬೆಂಗಳೂರು: ಜೆಡಿಎಸ್ ನೂತನ ರಾಜ್ಯಾಧ್ಯಕ್ಷರಾಗಿ ಹುಣಸೂರು ಶಾಸಕ ಅಡಗೂರು ಎಚ್.ವಿಶ್ವನಾಥ್ ಅವರನ್ನು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ನೇಮಕ ಮಾಡಿದ್ದಾರೆ.

ರಾಜ್ಯಾಧ್ಯಕ್ಷರಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ನೂತನ ಅಧ್ಯಕ್ಷರಿಗೆ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದ್ದು, ಜೆಡಿಎಸ್ ನ ರಾಜ್ಯದ ಸಾರಥ್ಯವನ್ನು ಇನ್ನು ಮುಂದೆ ಎಚ್. ವಿಶ್ವನಾಥ್ ವಹಿಸಿಕೊಳ್ಳಲಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನು ವಿಶ್ವನಾಥ್ ಅವರಿಗೆ ನೀಡಲಾಗುತ್ತದೆ ಎಂಬ ಮಾತುಗಳು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಭಾನುವಾರ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಹಾಗೆ ನೋಡಿದರೆ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ನಲ್ಲಿ ಕಾರ್ಯನಿರ್ವಹಿಸಿದ ಅವರು ಮಂತ್ರಿಯಾಗಿ, ಸಂಸದರಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿ ಅನುಭವ ಹೊಂದಿದವರು. ನೇರ, ನಿಷ್ಠುರ ನಡೆಯ ಅವರು ತಮ್ಮ ವಾಗ್ದಾಳಿಯ ಮೂಲಕವೇ ಗಮನ ಸೆಳೆದಿದ್ದು ಹೆಚ್ಚು.

ಇವರು ಕಾಂಗ್ರೆಸ್ ನಲ್ಲಿದ್ದಾಗಲೇ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ತಂದಿದ್ದು ಆ ನಂತರ ಅವರ ವಿರುದ್ಧವೇ ತಿರುಗಿ ಬಿದ್ದಿದ್ದು ಎಲ್ಲರಿಗೂ ಗೊತ್ತಿರುವಂತಹದ್ದೇ.

1997ರಲ್ಲಿ ಮೊದಲಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (ಐ)ನಿಂದ ಸ್ಫರ್ಧಿಸಿ ಗೆಲುವು ಸಾಧಿಸಿದರು. ಮತ್ತೊಮ್ಮೆ 1983, 1985ರಲ್ಲಿಯೂ ಕಾಂಗ್ರೆಸ್ ನಿಂದ ಕಣಕ್ಕಿಳಿದು ಸೋಲನ್ನುಂಡರು. ಇದಾದ ಬಳಿಕ 1989ರಲ್ಲಿ ಕಾಂಗ್ರೆಸ್ ನಿಂದ ಹ್ಯಾಟ್ರಿಕ್ ಗೆಲುವು ಬಾರಿಸಿದರು. 1994ರಲ್ಲಿ ಕೈ ಪಾಳಯದಿಂದ ಸೋಲು, 1999ರಲ್ಲಿ ಗೆಲುವಿನ ನಗೆ ಬೀರಿದರು. ನಂತರ 2004 ಹಾಗೂ 2008ರ ಚುನಾವಣೆಯಲ್ಲಿಯೂ ಸೋಲು ಕಂಡರು. 2009ರಲ್ಲಿ ಲೋಕಸಭೆಗೆ ಆಯ್ಕೆಯಾದ ಕಾರಣ 2013ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. 2014ರಲ್ಲಿ ಲೋಕಸಭೆಗೆ ಪುನರಾಯ್ಕೆ ಬಯಸಿದ್ದ ಅವರು ಪ್ರತಾಪಸಿಂಹ ಎದುರು ಸೋತಿದ್ದು ಇತಿಹಾಸ.

ಆ ನಂತರ ಅವರ ಪಾಲಿಗೆ ಐದು ವರ್ಷ ಅಜ್ಞಾತವಾಸದ ದಿನಗಳು ಕಾಂಗ್ರೆಸ್ ನಾಯಕರು ಇವರನ್ನು ಹತ್ತಿರ ಬಿಟ್ಟುಕೊಳ್ಳಲೇ ಇಲ್ಲ. ಒಂದು ಕಾಲದ ಗೆಳೆಯ ಕಾಂಗ್ರೆಸ್ ನಲ್ಲಿ ರಾಜಕೀಯ ಭವಿಷ್ಯ ಕಾಣಲು ನೆರವಾಗಿದ್ದ ಸಿದ್ದರಾಮಯ್ಯ ಕೂಡ ಸೊಪ್ಪು ಹಾಕಲಿಲ್ಲ. ಹೀಗಾಗಿ ಬೇಸತ್ತ ಅವರು ಜೆಡಿಎಸ್ ಸಖ್ಯ ಬೆಳೆಸಿದರು. ಪರಿಣಾಮ 2018 ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದಾರೆ.

ಇದೀಗ ಜೆಡಿಎಸ್ ಪಕ್ಷದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಮುಂದೆ ಸ್ಥಳೀಯ ಮತ್ತು ಲೋಕ ಸಭಾ ಚುನಾವಣೆಗಳು ಹತ್ತಿರ ಬರುತ್ತಿವೆ. ವಿಶ್ವನಾಥ್ ಅವರ ನಿರ್ಧಾರಗಳು ಹೇಗಿರುತ್ತವೆ? ಮತ್ತು ಮೈತ್ರಿ ಸರ್ಕಾರಕ್ಕೆ ತೊಂದರೆಯಾಗದಂತೆ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂಬ ಪ್ರಶ್ನೆಗಳು ಎಲ್ಲರನ್ನು ಕಾಡುತ್ತಿವೆ.

See also  ಕಾರಿನ ಮೇಲೆ ದಾಳಿ ಮಾಡಲು ಬಂದು ವಾಪಾಸ್‌ ಹೋದ ಕರಡಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು