News Kannada
Friday, October 07 2022

ಮೈಸೂರು

ಕಾಯಕಲ್ಪಕ್ಕೆ ಕಾದಿರುವ ನಾಗಮಂಗಲದ ಅಮ್ಮನಕಟ್ಟೆ - 1 min read

Photo Credit :

ಕಾಯಕಲ್ಪಕ್ಕೆ ಕಾದಿರುವ ನಾಗಮಂಗಲದ ಅಮ್ಮನಕಟ್ಟೆ

ಮಂಡ್ಯ: ಹಳ್ಳಿ, ಪಟ್ಟಣ, ನಗರಗಳಲ್ಲಿದ್ದ ಹಲವು ಕೆರೆಗಳು ಈಗಾಗಲೇ ಒತ್ತುವರಿಯಾಗಿ ಬಡಾವಣೆಗಳಾಗಿ ಮಾರ್ಪಾಡಾಗಿದ್ದರೆ ಬಹಳಷ್ಟು ಕೆರೆಗಳು ಒತ್ತುವರಿಯಾಗಿವೆ. ಮತ್ತೆ ಕೆಲವು ತ್ಯಾಜ್ಯ ಸುರಿಯುವ ಕಸದ ತೊಟ್ಟಿಗಳಾಗಿ ಗಬ್ಬೆದ್ದು ನಾರುತ್ತಿವೆ.

ಇತ್ತೀಚೆಗಿನ ದಿನಗಳಲ್ಲಿ ಕಸಗಳು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದು, ಅವುಗಳನ್ನು ಖಾಲಿ ಜಾಗಗಳಲ್ಲೆಲ್ಲ ಸುರಿದು ಹಗುರವಾಗುವ ಮನೋಭಾವ ಹೆಚ್ಚಾಗಿದೆ. ಹೀಗಾಗಿ ಕೆರೆ, ರಸ್ತೆಗಳ ಸಮೀಪ ಕಸದ ರಾಶಿಗಳು ಕಂಡು ಬರುತ್ತಿವೆ. ಇದಕ್ಕೆ ನಾಗಮಂಗಲ ಪಟ್ಟಣದ ಮಂಡ್ಯ ರಸ್ತೆ ಮತ್ತು ಅಮ್ಮನಕಟ್ಟೆ ಕೆರೆ ಸಾಕ್ಷಿಯಾಗಿದೆ.

ಅಮ್ಮನಕಟ್ಟೆ ಕೆರೆ ನಾಗಮಂಗಲ ಪಟ್ಟಣಕ್ಕೆ ಹೊಂದಿಕೊಂಡಂತೆ ಇದ್ದು ಇದನ್ನು ದುರಸ್ತಿಗೊಳಿಸಿ ಪುಟ್ಟದಾದ ಉದ್ಯಾನ ಮಾಡಿ, ಬೋಟ್ ವ್ಯವಸ್ಥೆ ಸೇರಿದಂತೆ ಒಂದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇ ಆದರೆ ಪ್ರವಾಸಿ ತಾಣವಾಗಿ ಪ್ರವಾಸಿಗರನ್ನು ಸೆಳೆಯುವುದಲ್ಲದೆ ಒಂದಷ್ಟು ಆದಾಯವನ್ನು ಪಡೆಯಲು ಸಾಧ್ಯವಾಗಲಿದೆ. ಅದ್ಯಾಕೋ ಸಂಬಂಧಿಸಿದ ಪುರಸಭೆಯ ಅಧಿಕಾರಿಗಳು ಸೇರಿದಂತೆ ಸದಸ್ಯರಿಗೆ ಇದರ ಮೇಲೆ ನಿರ್ಲಕ್ಷ್ಯ ಮನೋಭಾವ. ಹೀಗಾಗಿ ಇದೇ ರೀತಿ ಮುಂದುವರೆದರೆ ಸುತ್ತಮುತ್ತಲಿನವರಿಗೆ ಕಸ ಸುರಿಯುವ ತಾಣವಾದರೂ ಅಚ್ಚರಿಪಡಬೇಕಾಗಿಲ್ಲ. ಕೆರೆಯ ಮತ್ತು ರಸ್ತೆ ಬದಿಗಳಲ್ಲಿ ಕಸ ಸುರಿಯದಂತೆ ಮನವಿ ಮಾಡಿದರೂ ಅದಕ್ಕೆ ವಿರಾಮ ಬಿದ್ದಿಲ್ಲ.

ರಸ್ತೆ ಪಕ್ಕ ಕೊಳೆತ ಹಣ್ಣು, ಕೋಳಿ ತ್ಯಾಜ್ಯ, ಬೇಡವಾದ ಆಹಾರ ಪದಾರ್ಥ, ಕಸಗಳನ್ನೆಲ್ಲ ಎಸೆಯುತ್ತಿದ್ದು ಅವುಗಳನ್ನು ಪುರಸಭೆ ಸಕಾಲದಲ್ಲಿ ಅಲ್ಲಿಂದ ಬೇರೆಡೆಗೆ ವಿಲೇವಾರಿ ಮಾಡದ ಕಾರಣ ಗಬ್ಬೆದ್ದು ನಾರುವುದು ಮಾಮೂಲಿಯಾಗಿದೆ. ಇಂತಹ ಸಂದರ್ಭಗಳಲ್ಲಿ ಇಲ್ಲಿನವರು ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತದೆ.

ಅಮ್ಮನಕಟ್ಟೆ ಕೋಡಿ ಬಳಿ ಪಟ್ಟಣದ ವ್ಯಾಪಾರಸ್ಥರು ಮತ್ತು ನಾಗರಿಕರು ಕಸ, ತ್ಯಾಜ್ಯಗಳನ್ನೆಲ್ಲ ತಂದು ಸುರಿದು ಹೋಗುತ್ತಾರೆ. ಅದನ್ನು ಪುರಸಭೆಯವರು ತಕ್ಷಣ ವಿಲೇವಾರಿ ಮಾಡುವುದಿಲ್ಲ. ಹೀಗಾಗಿ ಅದು ಕೊಳೆತು ನಾರುತ್ತದೆ. ಇದರಿಂದ ಈ ಭಾಗದ ಜನ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ನಾಗಮಂಗಲ ಪಟ್ಟಣದಲ್ಲಿರುವ ಹಿರಿಕೆರೆ ಏರಿಯಲ್ಲಿ ಪಾರ್ಕ್ ನಿರ್ಮಿಸಲಾಗಿದೆ. ಅದರಂತೆ ಅಮ್ಮನಕಟ್ಟೆ ಏರಿಯನ್ನೂ ಅಭಿವೃದ್ಧಿ ಪಡಿಸಿ ಪಾರ್ಕ್ ನಿರ್ಮಾಣ ಮಾಡಿ, ವಿಹಾರಕ್ಕಾಗಿ ಬೋಟ್ ವ್ಯವಸ್ಥೆ ಮಾಡಿದರೆ ಸುಂದರ ತಾಣವಾಗಿ ಮಾರ್ಪಡಿಸಲು ಸಾಧ್ಯವಿದೆ. ಆದರೆ ಇದು ಸಾಧ್ಯವಾಗಬೇಕಾದರೆ ಸ್ಥಳೀಯ ಶಾಸಕರಾದ ಶಾಸಕ ಸುರೇಶ್‍ ಗೌಡರು ಇದರತ್ತ ಗಮನಹರಿಸಬೇಕಿದೆ. ಜತೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೊದಲಿಗೆ ಪಟ್ಟಣದ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.

See also  ಮಹಾದಾಯಿ ಹೋರಾಟ: ಸರ್ಕಾರಕ್ಕೆ 48 ಗಂಟೆ ಗಡುವು ನೀಡಿದ ಹೆಚ್ ಡಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು