News Kannada
Tuesday, October 04 2022

ಮೈಸೂರು

ದಸರಾ ಜಂಬೂಸವಾರಿಗೆ ಡ್ರೋಣ್ ಕ್ಯಾಮರಾದ ಹದ್ದಿನಕಣ್ಣು - 1 min read

Photo Credit :

ದಸರಾ ಜಂಬೂಸವಾರಿಗೆ ಡ್ರೋಣ್ ಕ್ಯಾಮರಾದ ಹದ್ದಿನಕಣ್ಣು

ಮೈಸೂರು: ದಸರಾ ಜಂಬೂಸವಾರಿ ವೇಳೆ ಯಾವುದೇ ಅಹಿತಕಾರಿ ಘಟನೆ ನಡೆಯದಂತೆ ನೋಡಿಕೊಳ್ಳುವ ಮೂಲಕ ಸಾಂಗವಾಗಿ ನಡೆಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದ್ದು, ಇದಕ್ಕೆ ಡ್ರೋಣ್ ಕ್ಯಾಮರಾ ಬಳಸಲು ಮುಂದಾಗಿದೆಯಲ್ಲದೆ, ಮಾರ್ಗದುದ್ದಕ್ಕೂ ಸುಮಾರು 60 ಸಿಸಿ ಕ್ಯಾಮರಾ ಅಳವಡಿಸಲು ತೀರ್ಮಾನ ಕೈಗೊಂಡಿದೆ.

ಡ್ರೋಣ್ ಕ್ಯಾಮರಾ ಮೂಲಕ ಪೊಲೀಸರು ತಕ್ಷಣದ ವಿದ್ಯಮಾನವನ್ನು ಕಲೆಹಾಕುವ ಮೂಲಕ ಎಲ್ಲೆಲ್ಲಿ ಏನೇನು ನಡೆಯುತ್ತಿದೆ ಎಂಬುದರ ಬಗ್ಗೆಯೂ ನಿಗಾವಹಿಸಲಿದ್ದಾರೆ. ಇದಕ್ಕೆ ನುರಿತ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಪೊಲೀಸ್ ಮೂಲಗಳ ಪ್ರಕಾರ ಸುಮಾರು ನಾಲ್ಕು ಡ್ರೋಣ್ ಕ್ಯಾಮರಾಗಳನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಅರಮನೆಯಿಂದ ಬನ್ನಿ ಮಂಟಪದವರೆಗೂ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಡ್ರೋಣ್ ಕ್ಯಾಮರಾಗಳು ಕಾರ್ಯ ನಿರ್ವಹಿಸಲಿವೆ. ಆದರೆ ಇವುಗಳ ನಿರ್ವಹಣೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಂಟ್ರೋಲ್ ರೂಂ ನಿಂದಲೇ ನಡೆಯಲಿದೆ.

ಡ್ರೋಣ್ ಕ್ಯಾಮರಾಗಳು 30ರಿಂದ 50 ಅಡಿ ಎತ್ತರದಲ್ಲಿ ಹಾರಾಟ ಮಾಡುತ್ತಾ ಎಲ್ಲ ದೃಶ್ಯಗಳನ್ನು ಸೆರೆಹಿಡಿಯಲಿವೆ. ಇದರಿಂದ ಅಪರಾಧ ತಡೆಗೆ ಸಾಧ್ಯವಾಗಲಿದೆ. ಜಂಬೂಸವಾರಿ ಸಾಗುವ ಹಾದಿಯಲ್ಲಿ ಜನಜಂಗುಳಿಯಿರುವುದರಿಂದ ಅದರ ಲಾಭ ಪಡೆದು ಕೆಲವು ಜೇಬುಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದರೆ, ಪುಂಡಪೋಕರಿಗಳು ಮಹಿಳೆಯರು ಮತ್ತು ಯುವತಿಯರಿಗೆ ಕಿರುಕುಳ ನೀಡುತ್ತಾರೆ. ಇಂತಹವರ ಮೇಲೆ ಕ್ರಮ ಕೈಗೊಳ್ಳಲು ಡ್ರೋಣ್ ಕ್ಯಾಮರಾ ಉಪಯೋಗವಾಗಲಿದೆ.

ಮೈಸೂರು ನಗರದ ಎಲ್ಲ್ಲ ಪೊಲೀಸ್ ಠಾಣೆಗಳಲ್ಲಿರುವ ಸಿಬ್ಬಂದಿಗಳೊಂದಿಗೆ ಬೇರೆ ಜಿಲ್ಲೆಗಳಿಂದ ಎರಡು ಸಾವಿರ ಐನೂರರಿಂದ ಮೂರು ಸಾವಿರ ಪೊಲೀಸರನ್ನು ದಸರಾ ಭದ್ರತೆಗೆ ಎರಡು ಹಂತಗಳಲ್ಲಿ ಕರೆಸಿಕೊಳ್ಳಲಾಗುತ್ತಿದ್ದು, ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುವುದಕ್ಕೆ ಅಗತ್ಯವಾದ ಎಲ್ಲಾ ಭದ್ರತೆಯನ್ನು ಒದಗಿಸಲಾಗುತ್ತಿದೆ. ಹೆಚ್ಚುವರಿಯಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅಲ್ಲದೆ ಈ ಬಾರಿ ಜಂಬೂಸವಾರಿಯ ವೇಳೆ ಮೆರವಣಿಗೆಯುದ್ದಕ್ಕೂ 4 ಡ್ರೋಣ್ ಕ್ಯಾಮರ ಹಾಗೂ 60 ಸಿಸಿ ಕ್ಯಾಮರಗಳನ್ನು ಬಳಸಿಕೊಳ್ಳಲಾಗುತ್ತಿರುವುದಾಗಿ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದ್ದಾರೆ.

 

See also  ಹೆಚ್‌ಡಿಕೆ ಪರ ಪ್ರತಾಪ ಸಿಂಹ ಬ್ಯಾಟಿಂಗ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು