ಮೈಸೂರು: ಕರ್ತವ್ಯನಿರತ ಇನ್ಸ್‌ಪೆಕ್ಟರ್ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ನಾಲ್ವರೂ ಆರೋಪಿಗಳನ್ನ ಸರಸ್ವತಿಪುರಂ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.
ಬಂದಿತರನ್ನ ಕಿರಣ್ (30), ಕೀರ್ತಿ (35), ಕಿರಣ್ ಕುಮಾರ್ (34), ಮಂಜುನಾಥ್ (32), ಇವರು ಫೆ.2ರಂದು ಬೋಗಾದಿ ಚೆಕ್ ಪೋಸ್ಟ್ ಬಳಿ ರಾತ್ರಿ 12:30 ರ ಸಮಯಕ್ಕೆ ಕಾರಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡಿದ್ದಾರೆ.
ಅನುಮಾನಗೊಂಡ ಕುವೆಂಪುನಗರ ಠಾಣೆಯ ಇನ್ಸ್‌ಪೆಕ್ಟರ್ ರಾಜು ವಿಚಾರಣೆಗೆ ಯತ್ನಿಸಿದಾಗ ಕಾರನ್ನು ನಿಲ್ಲಿಸದೆ ವೇಗವಾಗಿ ಕಾರಿನಲ್ಲಿ ಹೋಗಲು ಯತ್ನಿಸಿದಾಗ ಇವರನ್ನು ಬೆನ್ನತ್ತಿದ ಇನ್ಸ್‌ಪೆಕ್ಟರ್ ಮೇಲೆ ಕಾರನ್ನು ಹತ್ತಿಸಲು ಯತ್ನಿಸಿದ್ದು ತಕ್ಷಣ ಇವರನ್ನ ಗಸ್ತಿನಲ್ಲಿದ್ದ ಸರಸ್ವತಿಪುರಂ ಠಾಣಾ ಪೊಲೀಸರು ಬಂದಿಸಿದ್ದು, ಬಂಧಿತರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ