News Kannada
Tuesday, September 27 2022

ಮೈಸೂರು

ಮೈಸೂರಿನಲ್ಲಿ ಕಲಾಪ್ರಿಯರನ್ನು ಆಕರ್ಷಿಸುವ ಕರಕುಶಲ ಪ್ರದರ್ಶನ - 1 min read

Photo Credit :

ಮೈಸೂರಿನಲ್ಲಿ ಕಲಾಪ್ರಿಯರನ್ನು ಆಕರ್ಷಿಸುವ ಕರಕುಶಲ ಪ್ರದರ್ಶನ

ಮೈಸೂರು: ಇದೀಗ ಮೈಸೂರಿಗೆ ಜನಮನ ಸೆಳೆಯುವ ಕರಕುಶಲ ವಸ್ತುಗಳು ಬಂದಿದ್ದು, ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಅರ್ಬನ್ ಹಾತ್‍ನಲ್ಲಿ ಸಂಗಮಗೊಂಡು ಕರಕುಶಲ ಪ್ರದರ್ಶನವಾಗಿ ಕಲಾಪ್ರಿಯರನ್ನು ಆಕರ್ಷಿಸುತ್ತಿವೆ.

ಇಲ್ಲಿ ದೇಶದ ವಿವಿಧ ರಾಜ್ಯಗಳ, ಕರಕುಶಲ ವಸ್ತುಗಳು, ನವನವೀನ ಉಡುಪುಗಳು, ಅಲಂಕಾರಿಕ ವಸ್ತುಗಳು ಇಲ್ಲಿ ಮೈದಳೆದಿದ್ದು ಭೇಟಿ ನೀಡುವವರನ್ನು ತನ್ನತ್ತ ಸೆಳೆಯತೊಡಗಿದೆ.

ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ಕರಕುಶಲ ಇಲಾಖೆ ಸಹಯೋಗದಲ್ಲಿ ಈ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಫೆ. 17ರವರೆಗೆ ಕರಕುಶಲ ವಸ್ತುಪ್ರದರ್ಶನ ನಡೆಯಲಿದೆ.

ಈ ಕರಕುಶಲ ಪ್ರದರ್ಶನದೊಳಗೆ ಹೆಜ್ಜೆ ಹಾಕುತ್ತಾ ಹೋದರೆ ಮಣ್ಣಿನಿಂದಲೇ ತಯಾರಿಸಿರುವ ದೇವರ ವಿಗ್ರಹಗಳು, ಆಲಂಕಾರಿಕ ವಸ್ತುಗಳು, ದೀಪಗಳು, ವಿವಿಧ ಗಾತ್ರದ, ಬಗೆಬಗೆಯ ವಿನ್ಯಾಸದ ಗಣಪತಿ ಮೂರ್ತಿಗಳು, ಸಾಮಾನ್ಯ ದೀಪಗಳು, ಮ್ಯಾಜಿಕ್ ದೀಪಗಳು, ಉಯ್ಯಾಲೆಯಲ್ಲಿ ಪವಡಿಸಿರುವ ಗಣಪತಿಯ ವಿಗ್ರಹಗಳು ಹೀಗೆ ಒಂದೆ ಎರಡೇ ಹಲವಾರು ವಿಗ್ರಹಗಳು ಗಮನಸೆಳೆಯುತ್ತವೆ.

ಹಾಗೆಯೇ ವೀಕ್ಷಿಸುತ್ತಾ ಮುನ್ನಡೆದರೆ ಇಲವಾಲದ ಹೈಟೆಕ್ ಫರ್ನಿಚರ್ ನ ಎಲ್ಲೂ ಕಂಡಿರದ ವಿನ್ಯಾಸ, ರೂಪದ ವಿವಿಧ ಪೀಠೋಪಕರಗಳ ಸಂಗ್ರಹದ ಮಳಿಗೆ ಗಮನಸೆಳೆಯುತ್ತದೆ. ಇಲ್ಲಿ ವಿಶಿಷ್ಟ ಬಗೆಯ ಈಝಿ ಚೇರ್ ಗಳು, ವಾಡ್ರೋರ್ಬ್‍ಗಳು, ಮಂಚಗಳು, ಡೈನಿಂಗ್ ಟೇಬಲ್ ಟಿಪಾಯಿಗಳು, ಸೇರಿದಂತೆ ವೈವಿಧ್ಯತೆಯ ಪೀಠೋಪಕರಣಗಳ ಭಂಡಾರ ನಮ್ಮ ಮುಂದೆ ನಿಲ್ಲುತ್ತದೆ.

ಇದಲ್ಲದೆ ಪಶ್ಚಿಮ ಬಂಗಾಳದ ಕುಶಲಕರ್ಮಿಗಳ ಕೈಚಳಕದಲ್ಲಿ ಮೂಡಿರುವ ಸೆಣಬಿನ ಬ್ಯಾಗ್, ಡ್ರೆಸ್ ಮೆಟೀರಿಯಲ್, ಸೀರೆಗಳು, ಪಂಜಾಬ್ ಲೂಧಿಯಾನದ ವಿವಿಧ ವಿನ್ಯಾಸದ, ಆಕರ್ಷಕ ಚಪ್ಪಲಿಗಳು, ರಾಜಸ್ಥಾನದ ಕುಶಲಕರ್ಮಿಗಳು ಚರ್ಮದಿಂದ ತಯಾರಿಸಿರುವ ಕ್ಯಾಪ್ ಗಳು, ಬ್ಯಾಗ್ ಗಳು, ಪರ್ಸ್ ಗಳು, ವಾಲೆಟ್ ಗಳು, ಕೇರಳ ಕಲಾವಿದರು ತಯಾರಿಸಿರುವ ಆಲಂಕಾರಿಕ ವಸ್ತುಗಳು, ಸಾಂಪ್ರದಾಯಿಕ ಪರಿಕರಗಳು, ತೆಂಗಿನ ನಾರಿನಿಂದ ತಯಾರಿಸಿರುವ ಮ್ಯಾಟ್ ಗಳು ಒಂದೆಡೆಯಾದರೆ ಇನ್ನೊಂದೆಡೆ ತಮಿಳುನಾಡಿನ ಚಿತ್ರ ಕಲಾವಿದರ ಮಳಿಗೆಯಲ್ಲಿ ವಾಟರ್ಕಲರ್, ಅಕ್ರಿಲಿಕ್, ಆಯಿಲ್ ಪೇಂಟಿಂಗ್ ಮಾಧ್ಯಮದ ಮೂಲಕ ಮೂಡಿಬಂದಿರುವ ವಿವಿಧ ಚಿತ್ರಕಲಾಕೃತಿಗಳು ಗಮನಸೆಳೆಯುತ್ತವೆ. ಕಾಶ್ಮೀರದ ಸೀರೆಗಳು, ಸಾವಯವ ಕಾಟನ್ ನಿಂದ ತಯಾರಿಸಿರುವ ಮಕ್ಕಳ ಬಟ್ಟೆಗಳ ಸಂಗ್ರಹ ಇಲ್ಲಿದೆ.

ಮಧುಬನಿ ಸೀರೆಗಳು, ರೇಷ್ಮೆ ಸೀರೆಗಳು, ಕಾಂಜೀವರಂ ಸೀರೆಗಳು, ಬಿದಿರು, ಮರದಿಂದ ತಯಾರಿಸಿರುವ ವಿವಿಧ ಆಲಂಕಾರಿಕ ವಸ್ತುಗಳು, ಹೂದಾನಿಗಳು, ಹೀಗೆ ಹಲವು ವಸ್ತುಗಳು ಆಕರ್ಷಿಸುತ್ತವೆ. ಪ್ರದರ್ಶನದಲ್ಲಿ ಸುಮಾರು 50 ಮಳಿಗೆಗಳಿದ್ದು. ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಕರಕುಶಲಕರ್ಮಿಗಳು ಭಾಗವಹಿಸಿರುವುದು ವಿಶೇಷವಾಗಿದೆ.

ಕಣ್ಣಿಗೆ ತಂಪು ನೀಡುವ ಕರಕುಶಲವಸ್ತುಗಳಲ್ಲದೆ, ಬಾಯಲ್ಲಿ ನೀರೂರಿಸುವ ಹಲವು ಖಾದ್ಯಗಳನ್ನು ಸವಿಯಲು ಅವಕಾಶ ಮಾಡಿಕೊಡಲಾಗಿದ್ದು, ಅದಕ್ಕಾಗಿಯೇ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಆಹಾರ ಮೇಳದಲ್ಲಿ ವಿಶಿಷ್ಟ ಬಗೆಯ ದೋಸೆಗಳು, ದಕ್ಷಿಣ ಭಾರತದ ತಿಂಡಿ ತಿನಿಸುಗಳು, ಉತ್ತರ ಭಾರತದ ಖಾದ್ಯಗಳು, ಚಾಟ್ಸ್, ಐಸ್ಕ್ರೀಂ ಸೇರಿದಂತೆ ವಿವಿಧ ಬಗೆಯ ಆಹಾರ ಮಾರಾಟದ ಮಳಿಗೆಗಳನ್ನು ಕೂಡ ತೆರೆಯಲಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕರಕುಶಲ ಪ್ರದರ್ಶನ ಸರ್ವ ರೀತಿಯಲ್ಲಿಯೂ ಗಮನಸೆಳೆಯುತ್ತಿರುವುದಂತು ಸತ್ಯ.

See also  9 ದಿನಗಳ ಕಾಲ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗ ನಿರ್ಬಂಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು