News Kannada
Tuesday, November 29 2022

ಮೈಸೂರು

ಮಂಡ್ಯದಲ್ಲಿ ನಿಖಿಲ್, ಸುಮಲತಾ ವಿರುದ್ಧ ಪ್ರತಿಭಟನೆ - 1 min read

Photo Credit :

ಮಂಡ್ಯದಲ್ಲಿ ನಿಖಿಲ್, ಸುಮಲತಾ ವಿರುದ್ಧ ಪ್ರತಿಭಟನೆ

ಮಂಡ್ಯ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಅವರನ್ನು ಅಭ್ಯರ್ಥಿಗಳೆಂದು ಬಿಂಬಿಸುತ್ತಿರುವುದಕ್ಕೆ ಕರ್ನಾಟಕ ಜನಶಕ್ತಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯ ನಗರದ ರೈತ ಸಭಾಂಗಣದ ಮುಂಭಾಗದಲ್ಲಿರುವ ಸಚಿವ ಕೆ.ವಿ.ಶಂಕರಗೌಡರ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು, ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಾಲತಾರವರಿಗೆ ಮಂಡ್ಯದ ಸ್ಥಿತಿಗತಿಗಳ ಬಗ್ಗೆ ಸ್ವಲ್ಪವೂ ಅರಿವಿಲ್ಲ. ಅಂತಹವರು ನಮ್ಮ ಕ್ಷೇತ್ರಕ್ಕೆ ಅಭ್ಯರ್ಥಿಯಾಗುವುದು ಬೇಡ ಎಂದರು.

ಈ ವೇಳೆ ಮಾತನಾಡಿದ ಪತ್ರಕರ್ತ ಎನ್.ನಾಗೇಶ್, ಕೆ.ವಿ.ಶಂಕರಗೌಡರಂತಹ ಮುತ್ಸದ್ದಿ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಕಾಣಿಕೆ ನೀಡಿದ್ದಾರೆ. ಅಂತಹ ಮಹನೀಯ ವ್ಯಕ್ತಿ ಗೆದ್ದಿರುವ ಮಂಡ್ಯ ಕ್ಷೇತ್ರಕ್ಕೆ ಇಂದು ಸಿನಿಮಾ ತಾರೆಯರು ಮಂಡ್ಯ ಜನರ ಬದುಕಿನ ಬಗ್ಗೆ ಸ್ವಲ್ಪವೂ ತಿಳಿಯದವರು ಸ್ಪರ್ಧಿಸುತ್ತಿರುವುದು ನೋವಿನ ಸಂಗತಿ. ಮಂಡ್ಯದಲ್ಲೇ ರೈತರ ಆತ್ಮಹತ್ಯೆಗಳು ಹೆಚ್ಚಾಗಿರುವುದೇಕೆ? ನಿರುದ್ಯೋಗಿ ಯುವಕರಿಗೆ ಇರುವ ಅವಕಾಶಗಳೇನು? ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಮತ್ತು ಬಾಲ್ಯವಿವಾಹ ನಡೆಯುತ್ತಿದೆ. ಸ್ಲಂ ಜನರ ಸಮಸ್ಯೆಗಳೇನು. ಅವುಗಳನ್ನು ಪರಿಹರಿಸುವ ಮಾರ್ಗಗಳೇನು ಎಂಬ ಬಗ್ಗೆ ನಿಖಿಲ್ ಹಾಗೂ ಸುಮಲತಾ ಅವರಿಗೆ ಗೊತ್ತಿಲ್ಲ. ಇಂತಹವರು ಅಭ್ಯರ್ಥಿಗಳಾಗುತ್ತಿರುವುದು ವಿಷಾದನೀಯ ಎಂದರು.

ಕರ್ನಾಟಕ ಜನಶಕ್ತಿಯ ಸಿದ್ದರಾಜು ಮಾತನಾಡಿ, ದೇವೇಗೌಡರ ಕುಟುಂಬದಲ್ಲಿ ಈಗಾಗಲೇ ಎಂಪಿ, ಸಿಎಂ, ಇಬ್ಬರು ಸಚಿವರು, ಇಬ್ಬರು ಶಾಸಕರು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಏಳು ಜನರು ಅಧಿಕಾರ ಅನುಭವಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರ ಇಬ್ಬರು ಮೊಮ್ಮಕ್ಕಳು ಕಣಕ್ಕಿಳಿಯುವುದು ಖಚಿತವಾಗಿದೆ. ಮಂಡ್ಯ ಜಿಲ್ಲೆಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಎಷ್ಟು ಸರಿ. ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ಜನರ ಸಮಸ್ಯೆಗಳನ್ನು ಬಗೆಹರಿಸುವ ಯಾವ ಮಹತ್ವದ ಗುಣವನ್ನು ನೀವು ನಿಖಿಲ್ ಕುಮಾರಸ್ವಾಮಿಯಲ್ಲಿ ಕಂಡಿದ್ದೀರಾ ಎಂಬ ಬಗ್ಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿರುವ ಎಂಟು ಶಾಸಕರು ತಿಳಿಸಬೇಕೆಂದು ಆಗ್ರಹಿಸಿದರಲ್ಲದೆ, ತಮ್ಮ ಆಕ್ರೋಶವನ್ನು ಹೊರ ಹಾಕಿದರು.

See also  ಇನ್ಮುಂದೆ ಮೈಸೂರು ವಸ್ತುಪ್ರದರ್ಶನ ಪ್ರವಾಸಿ ತಾಣ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು