News Kannada
Friday, October 07 2022

ಮೈಸೂರು

ಬಸ್‌ನಲ್ಲಿ ಮಹಿಳೆಯ ಚಿನ್ನದ ಸರ ಎಗರಿಸುತ್ತಿದ್ದ ಕಳ್ಳಿಯ ಸೆರೆ - 1 min read

Photo Credit :

ಬಸ್‌ನಲ್ಲಿ ಮಹಿಳೆಯ ಚಿನ್ನದ ಸರ ಎಗರಿಸುತ್ತಿದ್ದ ಕಳ್ಳಿಯ ಸೆರೆ

ಮೈಸೂರು: ಬಸ್ ನಿಲ್ದಾಣದಲ್ಲಿ ಹೊಂಚು ಹಾಕಿ ಬಸ್ಸನ್ನೇರುವ ನೆಪದಲ್ಲಿ ಚಿನ್ನಾಭರಣ ಧರಿಸಿದ ಮಹಿಳೆಯರ ಕತ್ತಿಗೆ ಕೈ ಹಾಕಿ ಚಿನ್ನದ ಸರಗಳನ್ನು ಎಗರಿಸುತ್ತಿದ್ದ ಅಂತರಾಜ್ಯ ಕಳ್ಳಿಯೊಬ್ಬಳನ್ನು ನಗರದ ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿಯ ಬಾಪೂನಗರದ ಮಂಗರವಾಡಿಯ ನಿವಾಸಿ ಅಮಿತ್ ಕುಮಾರ್ ಎಂಬಾತನ ಪತ್ನಿ ನರಸಮ್ಮ ಎಂಬಾಕೆಯೇ ಚಿನ್ನದ ಸರ ಕಳ್ಳತನ ಮಾಡಿ ಸಿಕ್ಕಿ ಬಿದ್ದಕಳಿ. ಈಕೆ ಚಾಲಾಕಿ ಕಳ್ಳಿಯಾಗಿದ್ದು, ಬೇರೆ, ಬೇರೆ ಕಡೆಗಳಲ್ಲಿ ಪ್ರಯಾಣಿಕಳಂತೆ ತೆರಳಿ ಸಮಯ ಸಾಧಿಸಿ ಚಿನ್ನದ ಸರವನ್ನು ಎಗರಿಸುತ್ತಿದ್ದಳು.

ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಲ್ಲಿಯೂ ಕಳ್ಳತನ ಮಾಡುತ್ತಿದ್ದಳು. ಈ ನಡುವೆ ಮೈಸೂರಿಗೆ ಬಂದಿದ್ದ ಈಕೆ ನಗರದ ಬಸ್ ನಿಲ್ದಾಣದಲ್ಲಿ ವಯಸ್ಸಾದ ಮಹಿಳೆಯೊಬ್ಬರು ಬಸ್ ಹತ್ತುವಾಗ ಅವರ ಕತ್ತಿನಲ್ಲಿದ್ದ 27 ಗ್ರಾಂ ಚಿನ್ನದ ಸರವನ್ನು ಕಸಿದು ಅಲ್ಲಿಂದ ಪರಾರಿಯಾಗುವ ಯತ್ನ ಮಾಡಿದ್ದಾಳೆ. ವಿಷಯ ತಿಳಿದು ಚಿನ್ನದ ಸರ ಕಳೆದುಕೊಂಡ ವಯಸ್ಸಾದ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಈ ವೇಳೆ ಸಾರ್ವಜನಿಕರು ಎಚ್ಚೆತ್ತುಕೊಂಡು ಕಳ್ಳಿ ನರಸಮ್ಮನನ್ನು ಹಿಡಿದು ದೇವರಾಜ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಶಕ್ಕೆ ಪಡೆದುಕೊಂಡ ದೇವರಾಜ ಪೊಲೀಸ್ ಠಾಣೆಯ ಪೊಲೀಸರು ವಿಚಾರಣೆಗೊಳಪಡಿಸಿ ತನಿಖೆ ನಡೆಸಿದಾಗ ಆಕೆ ವಿವಿಧೆಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಈಕೆಯಿಂದ ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಒಟ್ಟು ನಾಲ್ಕು ಪ್ರಕರಣಗಳಿಗೆ ಸಂಬಂಧಪಟ್ಟಂತೆ, 2,37,000 ರೂ ಬೆಲೆ ಬಾಳುವ 79 ಗ್ರಾಂನ 4 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವಳೊಂದಿಗೆ ಇನ್ನು ಕೆಲವರಿದ್ದು, ಎಲ್ಲರೂ ಸೇರಿ ರಾಜ್ಯ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿ ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ, ಜನಸಂದಣಿ ಇರುವ ಪ್ರದೇಶಗಳಲ್ಲಿ ಕೈಚಳಕ ತೋರಿಸಿ ಚಿನ್ನದ ಸರಗಳನ್ನು ಎಗರಿಸುತ್ತಿರುವುದು ಗೊತ್ತಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದು ಇನ್ನಷ್ಟು ಪ್ರಕರಣ ಬೆಳಕಿಗೆ ಬರುವ ಸಾಧ್ಯತೆಯಿದೆ.

See also  ಮೈಸೂರು ದಸರಾ: ಅರಮನೆ ಆವರಣದಲ್ಲಿ ಸಂಗೀತ ರಸದೌತಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು