News Kannada
Thursday, October 06 2022

ಮೈಸೂರು

ಶಾಲಾ ಕಾಲೇಜುಗಳಲ್ಲಿ ಬಸವ ಬೆಳಕಿನ ಅಭಿಯಾನ - 1 min read

Photo Credit :

ಶಾಲಾ ಕಾಲೇಜುಗಳಲ್ಲಿ ಬಸವ ಬೆಳಕಿನ ಅಭಿಯಾನ

ಮೈಸೂರು: ವಿದ್ಯಾರ್ಥಿಗಳಲ್ಲಿ  ಬಸವ ತತ್ವವನ್ನು ತುಂಬಿ ಮಾನವೀಯ ಪ್ರಜ್ಞೆ ಮೂಡಿಸಲು ಶಾಲಾ ಕಾಲೇಜುಗಳಲ್ಲಿ ಬಸವ ಬೆಳಕಿನ ಅಭಿಯಾನವನ್ನು ಮೈಸೂರು ಆರ್ಟ್ ಗ್ಯಾಲರಿಯಿಂದ ಪ್ರಸಿದ್ಧ ಚಿತ್ರಕಲಾವಿದ ಎಲ್. ಶಿವಲಿಂಗಪ್ಪನವರು ಆರಂಭಿಸಿದ್ದಾರೆ.

ಇದರ ಅಂಗವಾಗಿ ನಗರದ ಅಗ್ರಹಾರದ ಹೊಸಮಠದ ಶ್ರೀ ನಟರಾಜ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಬಸವಣ್ಣನ ಭಾವಚಿತ್ರಗಳಿಗೆ ಬಣ್ಣತುಂಬುವ ಸ್ಪರ್ಧೆ ಮತ್ತು ಬಹುಮಾನ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಬನ್ನೂರು ರಾಜು ಅವರು, ಮನುಷ್ಯ ಮನುಷ್ಯರ ನಡುವೆ ಮಾನವೀಯ ಮೌಲ್ಯಗಳನ್ನು ಬೆಳೆಸಲು ಬಸವ ಬೆಳಕಿನ ಪ್ರಭೆಯಲ್ಲಿ ಹನ್ನೆರಡನೆಯ  ಶತಮಾನದಲ್ಲಿ ಸಾಮಾಜಿಕ ಆಂದೋಲನವಾಗಿ ಹುಟ್ಟಿಕೊಂಡದ್ದೇ ವಚನ ಸಾಹಿತ್ಯ ಎಂದರು.

ಬಸವಣ್ಣನೆಂದರೆ ಸಮ ಸಮಾಜದ ನಿರ್ಮಾಪಕ. ಜಾತಿ, ಧರ್ಮ, ಮತ, ಮೌಢ್ಯಗಳ ಕತ್ತಲೆಯಲ್ಲಿ ಸಿಲುಕಿ ತತ್ತರಿಸುತ್ತಿದ್ದ ಮಾನವ ಕುಲವನ್ನು ಬೆಳಕಿನತ್ತ ಕರೆದೊಯ್ಯಲು ಕಲ್ಯಾಣ ಚಳವಳಿ ನಡೆಸಿ ಜಗಜ್ಯೋತಿಯಾದವ. ಆ ಸಂದರ್ಭದಲ್ಲಿ ಬಸವಾದಿ ಶರಣರಿಂದ ವಚನಗಳು ಹುಟ್ಟಿದವು. ಪ್ರಪಂಚದ ಮೊದಲ ಸಂಸತ್ತು ಎಂದು ಕರೆಸಿಕೊಂಡ ಅನುಭವಮಂಟಪವನ್ನು ಸೃಷ್ಠಿಸಿದವು. ಇದರ ಕೇಂದ್ರ ಬಿಂದು ಬಸವಣ್ಣನವರು ವಚನಗಳ ಸುಗ್ಗಿಯನ್ನೇ ತಂದಿತ್ತರು. ಇವರಿಂದ ಸ್ಫೂರ್ತಿಗೊಂಡವರಂತೆ ಶರಣ ಶರಣೆಯರೆಲ್ಲಾ ವಚನಗಳ ರಚನೆಗೆ ಮುಂದಾದರು. ಈ ವಚನಗಳ ಮೂಲಕವೇ ಸಮಾಜ ಸುಧಾರಣೆಗಾಗಿ ವಚನ ಚಳವಳಿ ನಡೆಯಿತು. ಬಸವಣ್ನನ ವಚನಗಳಂತೂ ಕಾರ್ಗತ್ತಲಲ್ಲಿ ಕಾಣುವ ಬೆಳಕಿನ ಹನಿಗಳಂತೆ ಮಿನುಗಿ ಮನುಷ್ಯತ್ವದ ದೀಪ ಬೆಳಗಿಸಿದವು. ಹಿಂದಿಗಿಂತಲೂ ಇಂದು ಬಸವಾದಿ ಶರಣರ ವಚನಗಳು ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಇವುಗಳನ್ನು ಓದಿ ತಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಂಡು ಗೋಡೆಗಳಿಲ್ಲದ ಮನುಷ್ಯ ಸಮಾಜವನ್ನು ಕಟ್ಟಬೇಕಿದೆ. ನೋಡಲು ಕಣ್ಣು, ಕಿವಿ, ಮೂಗು, ಕೈಕಾಲು, ಎಲ್ಲವೂ ಮನುಷ್ಯರಂತಿದ್ದು, ಆಕಾರದಲ್ಲಿ ಮನುಷ್ಯರಾಗಿದ್ದರೆ ಸಾಲದು. ಮನುಷ್ಯತ್ವವುಳ್ಳವರಾಗಬೇಕು. ಆಗ ಮಾತ್ರ ನಿಜವಾದ ಮಾನವರಾಗುತ್ತೇವೆ ಎಂದ ಅವರು ಇದಕ್ಕಾಗಿ ಬಸವಣ್ಣನ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಹೊಸಮಠದ ಪೂಜ್ಯ ಶ್ರೀ ಚಿಂದಾನಂದಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಟರಾಜ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಾರದಾ ಅವರು ವಹಿಸಿದ್ದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಶಿಕ್ಷಣ ತಜ್ಞ ಎ. ಸಂಗಪ್ಪ, ನಟರಾಜ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಸತ್ಯಸುಲೋಚನ, ನಟರಾಜ ಕಾನ್ವೆಂಟ್‍ನ ಮುಖ್ಯ ಶಿಕ್ಷಕಿ ಗ್ರೇಸಿಮೇರಿ, ಶಿಕ್ಷಕ ಹೆಚ್.ಎನ್. ರವಾರ್ಣಿಕರ್, ವಾತ್ಸಲ್ಯ ಬಿಎಡ್ ಕಾಲೇಜಿನ ಚಿತ್ರಕಲಾ ಉಪನ್ಯಾಸಕ ಮನೋಹರ್ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲೆಯಿಂದ ಬಿಎಡ್ ಕಾಲೇಜಿನವರೆಗೆ ಎಲ್ಲಾ ವಿದ್ಯಾರ್ಥಿಗಳೂ ಬಸವಣ್ಣನ ಭಾವಚಿತ್ರಕ್ಕೆ ಬಣ್ಣ ಹಚ್ಚುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾರಂಭದಲ್ಲಿ ಚಿತ್ರಕಲಾವಿದ ಎಲ್. ಶಿವಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಆಶಯವನ್ನು ತಿಳಿಸಿದರು.

See also  ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಸರ್ವ ಸಜ್ಜು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು