News Kannada
Friday, December 02 2022

ಮೈಸೂರು

ಮೈಸೂರಿನ ಮಾಗಿ ಉತ್ಸವಕ್ಕೆ ಇಂದು ತೆರೆ

Photo Credit :

ಮೈಸೂರಿನ ಮಾಗಿ ಉತ್ಸವಕ್ಕೆ ಇಂದು ತೆರೆ

ಮೈಸೂರು: ಮೈಸೂರಿನ ಅರಮನೆ ಆವರಣದಲ್ಲಿ ಡಿಸೆಂಬರ್ 24 ರಿಂದ ಆರಂಭಗೊಂಡು ಲಕ್ಷಾಂತರ ಜನರ ಮನಸೆಳೆದ ಮಾಗಿ ಉತ್ಸವಕ್ಕೆ ತೆರೆಬೀಳಲಿದೆ.

ಪೇಜಾವರಶ್ರೀ ಅವರು ಕೃಷ್ಣೈಕ್ಯರಾದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆಯಿದ್ದ ಕಾರಣದಿಂದ ಅರಮನೆ ಆವರಣದಲ್ಲಿ ನಡೆಯಬೇಕಾಗಿದ್ದ ಮಾಗಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು. ಹೀಗಾಗಿ ಹೊಸವರ್ಷಾರಣೆ ವೇಳೆ ತೆರೆ ಬೀಳ ಬೇಕಾಗಿದ್ದ ಮಾಗಿ ಉತ್ಸವ ಮುಂದುವರೆದಿದ್ದು ಇಂದು ತೆರೆ ಬೀಳಲಿದೆ. ಉತ್ಸವದ ಹಿನ್ನಲೆಯಲ್ಲಿ ಬುಧವಾರ ರಾತ್ರಿ

ಅರಮನೆ ಆವರಣದ ಬಾನಂಗಳದಲ್ಲಿ ಬಾಣಬಿರುಸು ಬಣ್ಣಬಣ್ಣದ ಚೆಲುವಿನ ಚಿತ್ತಾರ ಮೂಡಿಸಿದವು.

ಇನ್ನು ಮೈಸೂರು ಅರಮನೆ ಆಡಳಿತ ಮಂಡಳಿಯು ಹೊಸ ವರ್ಷಾಚರಣೆ ಪ್ರಯುಕ್ತ ಅರಮನೆ ಅಂಗಳದಲ್ಲಿ ಸಾರ್ವಜನಿಕರು, ಪ್ರವಾಸಿಗರಿಗೆ ಹಮ್ಮಿಕೊಂಡಿದ್ದ ಮನರಂಜನೆ ಕಾರ್ಯಕ್ರಮವೂ ಮಜಾ ಕೊಟ್ಟಿತು. ರಾತ್ರಿ 9 ಗಂಟೆಗೆ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬಣ್ಣಬಣ್ಣದ ಪಟಾಕಿಗಳನ್ನು ಸಿಡಿಸಲಾಯಿತು. 15 ರಿಂದ 20 ನಿಮಿಷಗಳ ಕಾಲ ಸಿಡಿದ ಶಬ್ದ ರಹಿತ ವಿವಿಧ ಬಣ್ಣದ ಪಟಾಕಿಗಳು ಆಗಸದಲ್ಲಿ ವಿವಿಧ ರೀತಿಯ ಚಿತ್ತಾರಗಳನ್ನು ಮೂಡಿಸಿ ಗಮನಸೆಳೆಯುವಂತೆ ಮಾಡಿತು.

ಇದೇ ವೇಳೆ ಅಂಬಾವಿಲಾಸ ಅರಮನೆ ವೇದಿಕೆಯಲ್ಲಿ ನಡೆದ ಕರ್ನಾಟಕ ಪೊಲೀಸ್ ಬ್ಯಾಂಡ್ ಸಂಗೀತ ವಾದ್ಯ ಕಲಾರಸಿಕರು ತಲೆದೂಗುವಂತೆ ಮಾಡಿತು. ದೃಶ್ಯಕಾವ್ಯ ನೃತ್ಯ ರೂಪಕ ಕಾರ್ಯಕ್ರಮ ವೀಕ್ಷಕರ ಕಣ್ಮನ ಸೆಳೆಯಿತು.

 

See also  ಹುಲಿ ಚರ್ಮ ಮಾರಾಟಕ್ಕೆ ಯತ್ನ: ಆರೋಪಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು