News Kannada
Wednesday, November 30 2022

ಮೈಸೂರು

ಮೈಸೂರಿನಲ್ಲಿ ಬೀದಿನಾಯಿಗಳ ಹಸಿವು ನೀಗಿಸುವ ಪ್ರಾಣಿ ಪ್ರಿಯರು - 1 min read

Photo Credit :

ಮೈಸೂರಿನಲ್ಲಿ ಬೀದಿನಾಯಿಗಳ ಹಸಿವು ನೀಗಿಸುವ ಪ್ರಾಣಿ ಪ್ರಿಯರು

ಮೈಸೂರು: ಕೊರೊನಾ ಸೋಂಕು ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿದ ಕಾರಣದಿಂದಾಗಿ ಹಲವರು ಹಲವು ರೀತಿಯ ತೊಂದರೆಗಳನ್ನು ಅನುಭವಿಸುವಂತಾಗಿದ್ದಂತು ಸತ್ಯ. ಇಂದಿಗೂ ಪರಿಸ್ಥಿತಿ ಸರಿಹೋಗಿಲ್ಲ. ಆದರೆ ಬಡವರ ಪಾಲಿಗೆ ಹಲವರು ದೇವರಾಗಿ ಬಂದು ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಈ ಪೈಕಿ ಕೆಲವರು ಪ್ರಾಣಿಗಳತ್ತ ದಯೆ ತೋರಿದ್ದು ಅವು ಉಪವಾಸದಿಂದ ಬಳಲಬಾರದೆಂದು ಬಿಸ್ಕೆಟ್ ಹಾಲು, ಅನ್ನ ಆಹಾರ ನೀಡಿದ್ದಾರೆ.

ಬೀದಿ ನಾಯಿಗಳು ಮನೆಗಳಲ್ಲಿ ಹಾಕುವ ಆಹಾರ ಪದಾರ್ಥವಲ್ಲದೆ, ಮಾಂಸದ ಅಂಗಡಿ, ಹೋಟೆಲ್, ಮುಂತಾದ ಕಡೆಯಿಂದ ತಂದು ಎಸೆಯುವ ತ್ಯಾಜ್ಯಗಳನ್ನು ತಿಂದು ಬದುಕುತ್ತವೆ. ಆದರೆ ಲಾಕ್ ಡೌನ್ ಆಗಿದ್ದರಿಂದ ಅವುಗಳು ಆಹಾರಕ್ಕಾಗಿ ಪರದಾಡುವಂತಾಗಿತ್ತು. ಇದನ್ನು ಮನಗಂಡ ಬಹಳಷ್ಟು ಮಂದಿ ಅವುಗಳಿಗೆ ಬಿಸ್ಕೆಟ್ ಸೇರಿದಂತೆ ಬ್ರೆಡ್, ಬನ್ನು ಮೊದಲಾದವುಗಳನ್ನು ನೀಡಿ ಹಸಿವಿನಂದ ಮುಕ್ತವಾಗುವಂತೆ ನೋಡಿಕೊಂಡಿದ್ದಾರೆ.

ಮೈಸೂರಿನ ಚಾಮುಂಡಿಪುರಂ ನಿವಾಸಿಗಳಾದ ಸಂದೀಪ್ ಮತ್ತು ಧರ್ಮೇಂದ್ರ ಅವರುಗಳು ನಗರದೆಲ್ಲೆಡೆ ಓಡಾಡಿ ಬೀದಿನಾಯಿಗಳನ್ನು ಹುಡುಕಿ ಅವುಗಳಿಗೆ ಬಿಸ್ಕೆಟ್‍ಗಳನ್ನು ಹಾಕಿದ್ದಾರೆ. ಲಾಕ್ ಡೌನ್ ಆರಂಭದಿಂದ ಇಲ್ಲಿಯವರೆಗೆ ಅದೇ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಮನುಷ್ಯರಾದರೆ ತಮಗೆ ಸಿಗದಿದ್ದಾಗ ಕೇಳಿ ಪಡೆದುಕೊಳ್ಳುತ್ತಾರೆ. ಆದರೆ ಮೂಕ ಪ್ರಾಣಿಗಳು ತಾನೆ ಏನು ಮಾಡಲು ಸಾಧ್ಯ? ಇದನ್ನು ಮನಗಂಡು ಸಂದೀಪ್ ಮತ್ತು ಧರ್ಮೇಂದ್ರ ಬೀದಿ ನಾಯಿಗಳಿಗೆ ಹಾಲು ಬಿಸ್ಕೆಟ್‍ನ್ನು ರಾತ್ರಿ ಹಗಲೆನ್ನದೆ ನೀಡುತ್ತಾ ಬಂದಿದ್ದು, ಆ ಮೂಲಕ ಮಾನವೀಯತೆ ಮೆರೆದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

See also  ಮೈಸೂರಿನಲ್ಲಿ ರಿಮೋಟ್‌ ಸೆಲ್‌ ನುಂಗಿ ಮಗು ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು