News Kannada
Monday, October 03 2022

ಮೈಸೂರು

ಪರೀಕ್ಷೆ ಮಾಢಧೇ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವಂತೆ ವಾಟಾಳ್ ನಾಗರಾಜ್ ಎಚ್ಚರಿಕೆ - 1 min read

Photo Credit :

ಪರೀಕ್ಷೆ ಮಾಢಧೇ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವಂತೆ ವಾಟಾಳ್ ನಾಗರಾಜ್ ಎಚ್ಚರಿಕೆ

ಮೈಸೂರು; ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ  ಲಾಕ್‌ ಡೌನ್‌ ಮಾಡಿರುವುದರಿಂದ ಎಸ್ ಎಸ್ ಎಲ್ ಸಿ, ಪ್ರಥಮ, ದ್ವಿತೀಯ, ಅಂತಿಮ ಡಿಗ್ರಿ, ಇಂಜಿನಿಯರಿಂಗ್ ಪರೀಕ್ಷೆಗಳು ಸೇರಿದಂತೆ ಎಲ್ಲಾ ಪದವಿ   ವಿದ್ಯಾರ್ಥಿಗಳನ್ನು ಪರೀಕ್ಷೆಗಳಿಲ್ಲದೆ  ತೇರ್ಗಡೆ  ಮಾಡಿ   ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ  ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

 

ಎಸ್ ಎಸ್ ಎಲ್ ಸಿ ಹಾಗೂ ಎಲ್ಲಾ ಪದವಿಯ ಅಂತಿಮ ಪರೀಕ್ಷೆಗಳನ್ನು ರದ್ದು ಮಾಡಿ ಪಾಸ್ ಮಾಡುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

 

ನಗರದ ಆರ್ ಗೇಟ್ ಬಳಿ ಇಂದು ಪ್ರತಿಭಟನೆ ನಡೆಸಿದ ಅವರು ಮಾತನಾಡಿ ಮುಂಬೈ ಐಐಟಿ ಅಂತಿಮ ಪರೀಕ್ಷೆ ಹೊರತು ಪಡಿಸಿ ಎಲ್ಲ ಪರೀಕ್ಷೆಗಳನ್ನು ರದ್ದುಮಾಡಿದೆ. ಗೋವಾ ವಿಶ್ವವಿದ್ಯಾಲಯ ಎಲ್ಲಾ ಪದವಿಯ ಅಂತಿಮ ಪರೀಕ್ಷೆ ಹೊರತುಪಡಿಸಿ ಪರೀಕ್ಷೆಗಳನ್ನು ರದ್ದು ಮಾಡಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿದ್ದಾರೆ. ಐಐಟಿ ಕಾನ್ಪುರ್ ಕೊರೋನಾ ಕಾರಣದಿಂದ ಎಲ್ಲಾ ಪದವಿಯ ಪರೀಕ್ಷೆಗಳನ್ನು ರದ್ದು ಮಾಡಿದೆ. ಅಂತಿಮ  ಇಂಜಿನಿಯರ್ಸ್ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸದೇ ಉತ್ತೀರ್ಣರನ್ನಾಗಿಸಲೇಬೇಕು. ಶೇಕಡ 20 ರಷ್ಟು ಪಾಠಗಳು ಮಾತ್ರ ನಡೆದಿವೆ. ಉಳಿದ ಪಾಠ ಪ್ರವಚನಗಳನ್ನು ಆನ್ ಲೈನ್ ಮೂಲಕ ನಡೆಸುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಅರ್ಥವಾಗುವುದಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆನ್ ಲೈನ್ ಪಾಠ ಸಾಧ್ಯವೇ ಇಲ್ಲ. ಆನ್ ಲೈನ್ ಕ್ಲಾಸ್ ಬೇಕಾದರೆ ಸ್ಮಾರ್ಟ್ ಫೋನ್ ಕೊಳ್ಳಲೇ ಬೇಕು. ಸ್ಮಾರ್ಟ್ ಫೋನ್ ಗಳಿಗೆ ಅನೇಕ ಗ್ರಾಮಗಳಲ್ಲಿ ನೆಟ್ ವರ್ಕ್ ಸಿಗುವುದಿಲ್ಲ. ವಿದ್ಯಾರ್ಥಿಗಳಿಗೆ ಇದೊಂದು ದೊಡ್ಡ ನರಕವಾಗಿದೆ. ಸ್ಮಾರ್ಟ್ ಫೀನ್ ಸಿಗದೇ ಅನೇಕ ದುರಂತಗಳು ನಡೆದಿವೆ. ತರಗತಿಯಲ್ಲಿ ವಿದ್ಯಾರ್ಥಿಗಳು ಕಲಿಕಾ ಮಾನದಂಡಕ್ಕೆ ಅನುಗುಣವಾಗಿ ತೇರ್ಗಡೆ ಮಾಡಬಹುದು. ಫೇಸ್ ಬುಕ್ ಟ್ವೀಟರ್ ಸೆರಿದಂತೆ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮೋಟ್ ಡಿಗ್ರಿ ಸ್ಟೂಡೆಂಟ್ಸ್ ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳಿಂದ ಬಾರಿ ಹೋರಾಟ ನಡೆಯುತ್ತಿದೆ ಎಂದರು.

 

 

ಪರೀಕ್ಷೆ ಯಾವಾಗ ಅಂತ ಗೊತ್ತಿಲ್ಲ. ಆನ್ ಲೈನ್ ಅರ್ಥವಾಗುತ್ತಿಲ್ಲ. ಹಳ್ಳಿಗಳಲ್ಲಿ ಆನ್ ಲೈನ್ ಗೆ ನೆಟ್ ವರ್ಕ್ ಸಿಗುತ್ತಿಲ್ಲ. ಹಳ್ಳಿಗಳಲ್ಲಿ ಸರಿಯಾಗಿ ವಿದ್ಯುಚ್ಛಕ್ತಿ ಸರಿಯಾಗಿ ಪೂರೈಕೆಯಾಗುವುದಿಲ್ಲ. ಎಲ್ಲೆಲ್ಲೂ ಕೊರೋನಾ , ಪರೀಕ್ಷೆ ನಡೆಸಿ ಬಿಟ್ಟರೆ ಗತಿಯೇನು? ವಿದ್ಯಾರ್ಥಿಗಳಿಗೆ    ದಿಕ್ಕೇ ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

See also  ಮಕ್ಕಳ ವರ್ಗಾವಣೆ ಪತ್ರಕ್ಕಾಗಿ ಪೋಷಕರ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು