News Kannada
Tuesday, October 04 2022

ಮೈಸೂರು

ಹೊರ ರಾಜ್ಯಗಳ ಸಂಚಾರ ನಿರ್ಬಂಧಕ್ಕೆ ಆಗ್ರಹ - 1 min read

Photo Credit :

ಹೊರ ರಾಜ್ಯಗಳ ಸಂಚಾರ ನಿರ್ಬಂಧಕ್ಕೆ ಆಗ್ರಹ

ಮೈಸೂರು: ಮೈಸೂರಿನ ಜಿಲ್ಲಾಡಳಿತ ಲಾಕ್ ಡೌನ್ ಸಮಯದಲ್ಲಿ ಶ್ರಮವಹಿಸಿ ಕೋವಿಡ್-19ನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರೂ ಇದೀಗ ಆದರೆ ಲಾಕ್ಡೌನ್ ಸಡಿಲಗೊಂಡ ನಂತರ ಯಾವುದೇ ಸರಿಯಾದ ಕ್ರಮ ಕೈಗೊಳ್ಳದ ಕಾರಣ ಕೊರೋನಾ ಸೋಂಕು ನಿಯಂತ್ರಣ ಮೀರಿ ಜನರನ್ನು ಬಾಧಿಸುತ್ತಿದೆ ಎಂದು ಮೈಸೂರು ರಕ್ಷಣಾ ವೇದಿಕೆಯ ಯುವ ಘಟಕ ಆರೋಪಿಸಿದೆ.

ಅನ್ಯ ರಾಜ್ಯ ಹಾಗೂ ಊರುಗಳಿಂದ ಜನರು ಯಾವುದೇ ನಿಯಂತ್ರಣವಿಲ್ಲದೇ ಪ್ರವೇಶ ಮಾಡುತ್ತಿರುವುದರಿಂದ ಸೋಂಕು ಹರಡುತ್ತಿದ್ದು, ರಾಜಧಾನಿ ಬೆಂಗಳೂರಿನಿಂದ ಓಡಾಟ ನಡೆಸುವ ಜನರನ್ನು ನಿಯಂತ್ರಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ. ಆದರೆ ಸರಕಾರ ಅವೈಜ್ಞಾನಿಕವಾಗಿ ರಾತ್ರಿ 8 ರಿಂದ ಬೆಳಿಗ್ಗೆ 5ರವರೆಗೆ ಮತ್ತು ಪ್ರತಿ ಭಾನುವಾರ ಲಾಕ್ಡೌನ್ ಘೋಷಿಸಿರುವುದು ಜನರ ಜೀವವಲ್ಲದೇ ಜೀವನವನ್ನು ಸಹ ಹಾಳು ಮಾಡುತ್ತಿದೆ ಎಂದು ದೂರಿದರು.

ಕಳೆದ ನಾಲ್ಕು ತಿಂಗಳುಗಳಿಂದ ಸಂಪಾದನೆಯಿಲ್ಲದೇ ಲಕ್ಷಾಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಆಯ್ದ ಕೆಲ ಕಾಯಕಗಳಿಗೆ ಮಾತ್ರ ಆದ್ಯತೆ ನೀಡಿ ಸಹಾಯಧನ ನೀಡಿ ಬಹುತೇಕರನ್ನು ಕಡೆಗಣಿಸಿದೆ. ಬಟ್ಟೆ ವ್ಯಾಪಾರ, ಮದುವೆ ಸಂಬಂಧಿತ ಉದ್ಯಮಗಳು ಸೇರಿದಂತೆ ಅನೇಕ ವ್ಯಾಪಾರಿಗಳಿಗೆ ಭಾನುವಾರ ಪ್ರಮುಖ, ಆಷಾಢ ಮಾಸ ಕಳೆದ ಮೇಲಾದರೂ ಸಂಪಾದನೆ ಕಾಣಬಹುದು ಎಂದು ಛತ್ರ, ಫೋಟೋ, ವೀಡಿಯೋ, ಅಡಿಗೆಯವರು ಸೇರಿದಂತೆ ಅನೇಕರು ಕಾಯುತ್ತಿದ್ದರು, ಭಾನುವಾರ ಲಾಕ್ ಡೌನ್ ನಿಂದ ಈಗ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬಂತಾಗಿದೆ.

ಮೈಸೂರಿನಂಥ ನಗರದಲ್ಲಿ ಲಾಕ್ ಡೌನ್ ಮಾಡದೇ ಅಂತಾರಾಜ್ಯ ಮತ್ತು ಅಂತರ್ಜಿಲ್ಲಾ ಜನರ ಓಡಾಟವನ್ನು ನಿಯಂತ್ರಿಸಿ ನಿಗಾ ವಹಿಸಿದಲ್ಲಿ ಸೋಂಕನ್ನು ನಿಯಂತ್ರಿಸಬಹುದು. ಇದರಿಂದ ಕನಿಷ್ಠ ಸ್ಥಳೀಯವಾಗಿ ಯಾವುದೇ ಅಡ್ಡಿ, ಆತಂಕಗಳಿಲ್ಲದೆ ವಹಿವಾಟು ನಡೆಸಲು ಸಾಧ್ಯ, ಬಹುತೇಕ ಜನ ಬೆಳಗಿನ ಹೊತ್ತು ತಮ್ಮ ಕೆಲಸ ಮುಗಿಸಿ ಸಂಜೆ ಅಥವಾ ವಾರಾಂತ್ಯ ಖರೀದಿ ವಗೈರೆ ಇಟ್ಟುಕೊಳ್ಳುತ್ತಾರೆ. ಈಗ ಘೋಷಿಸಿರುವ ರೀತಿ ಪಾಲಿಸಿದರೆ ಸಂಜೆ ವ್ಯಾಪಾರ 7.30ರ ಹೊತ್ತಿಗೆ ನಿಲ್ಲಿಸಬೇಕು. ವಾರಾಂತ್ಯ ಲಾಕ್ ಡೌನ್ ಕಾರಣ ಮತ್ತೆ ವ್ಯಾಪಾರ ನಷ್ಟವಾಗುತ್ತಿದೆ ಎಂದು ದೂರಿದ್ದಾರೆ.

 

ಇನ್ನಾದರೂ ರಾಜ್ಯ ಸರಕಾರ ತನ್ನ ನಿರ್ಧಾರ ಮರುಪರಿಶೀಲಿಸಿ ರಾತ್ರಿ ಮತ್ತು ವಾರಾಂತ್ಯದ ಅವೈಜ್ಞಾನಿಕ ಲಾಕ್ ಡೌನ್ ಹಿಂಪಡೆಯಬೇಕು, ಮತ್ತು ಮೈಸೂರು ಜಿಲ್ಲೆಗೆ ಅಂತರಾಜ್ಯ ಮತ್ತು ಅಂತರ್ಜಿಲ್ಲೆ ಪ್ರವೇಶ ನಿಯಂತ್ರಿಸಿ ನಿಗಾವಹಿಸಬೇಕು ಜನರ ಜೀವ ಉಳಿಸುವುದರ ಜೊತೆಗೆ ಜೀವನ ಸುಧಾರಿಸಿಕೊಳ್ಳಲು ಸಹ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

See also  ಪೊನ್ನಂಪೇಟೆ ಬಳಿ ಕಾಡಾನೆಗಳ ದಾಂಧಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು