News Kannada
Friday, October 07 2022

ಮೈಸೂರು

ಮೈಸೂರಿನಲ್ಲಿ ನಿವೃತ್ತ ಪ್ರಾಂಶುಪಾಲರ ಬರ್ಬರ ಕೊಲೆ - 1 min read

Photo Credit :

ಮೈಸೂರಿನಲ್ಲಿ ನಿವೃತ್ತ ಪ್ರಾಂಶುಪಾಲರ ಬರ್ಬರ ಕೊಲೆ

ಮೈಸೂರು: ನಗರದ ಮನೆಯೊಂದರಲ್ಲಿ ಒಂಟಿಯಾಗಿ ವಾಸವಿದ್ದ ನಿವೃತ್ತ ಪ್ರಾಂಶುಪಾಲರೊಬ್ಬರನ್ನು ಭಾನುವಾರ ಭೀಕರವಾಗಿ ಹತ್ಯೆ ಮಾಡಿರುವುದು, ನಗರದ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ.

ಕೊಲೆಗೀಡಾದವರನ್ನು , ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ(67) ಎಂದು ಗುರುತಿಸಲಾಗಿದ್ದು ಇವರು ಪತ್ನಿಯಿಂದ ಪ್ರತ್ಯೇಕವಾಗಿ ವಾಸವಿದ್ದರು.

ಮೂಲತಃ ತಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದವರಾದ ಇವರು ಕುವೆಂಪುನಗರ ಪಿಯು ಕಾಲೇಜು, ಚಿತ್ರದುರ್ಗದ ಜಿಲ್ಲೆಯ ಚಳ್ಳಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಹಾಸನದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ತವ್ಯದಲ್ಲಿದ್ದಾಗಲೇ ನಿವೃತ್ತರಾಗಿದ್ದು, ಇವರ. ಹೆಂಡತಿ ಕುವೆಂಪುನಗರದಲ್ಲಿ ವಾಸವಿದ್ದರು. ಈ ಇಬ್ಬರು ಬೇರೆ ಬೇರೆ ಇದ್ದರೂ ಆಗಾಗ ಪರಸ್ಪರ ಭೇಟಿಯಾಗುತ್ತಿದ್ದರು. ಮಕ್ಕಳು ಇಲ್ಲದ ಕಾರಣದ ೮ ವರ್ಷದ ಬಾಲಕನನ್ನು ದತ್ತು ಪಡೆದು ಸಾಕುತ್ತಿದ್ದರು. ಈ ಬಾಲಕ ಕೂಡ ಪರಶಿವಮೂರ್ತಿ ಅವರ ಹೆಂಡತಿಯ ಜೊತೆಯಿದ್ದ. ಆಗಾಗ ಹೋಗಿ ನೋಡಿಕೊಂಡು ಬರುತ್ತಿದ್ದರು.

ಪರಶಿವಮೂರ್ತಿ ಬಡ್ಡಿ ವ್ಯವಹಾರವನ್ನು ಮಾಡಿಕೊಂಡು ನಿವೇದಿತಾನಗರದ ಮನೆಯಲ್ಲಿ ಒಬ್ಬರೇ ಇದ್ದರು. ಭಾನುವಾರ ಸಂಜೆ ಬಾಗಿಲು ಹಾಕಿಕೊಂಡು ಪರಶಿವಮೂರ್ತಿ ಅವರು ಮನೆಯ ಒಳಗಿದ್ದರು. ಸಂಜೆ ೬.೩೦ರ ಸಮಯದಲ್ಲಿ ಮನೆಯ ಬಳಿ ಬಂದ ಯಾರೋ ಇಬ್ಬರು ಪರಿಚಯಸ್ಥರು ಬಾಗಿಲು ತಟ್ಟಿದ್ದಾರೆ. ಪರಶಿವಮೂರ್ತಿ ಅವರು ಬಾಗಿಲು ತೆಗಿದಿದ್ದು, ಅವರನ್ನು ಒಳಗೆ ಕರೆದಿದ್ದಾರೆ. ಬಳಿಕ ಕೆಲ ಹೊತ್ತ ಮನೆಯಲ್ಲಿ ಏನೇನೋ ಮಾತು ಕತೆ ನಡೆದಿದೆ. ಸಂಜೆ 7.45 ಸಮಯದಲ್ಲಿ ಇಬ್ಬರು ಸೇರಿ ಪರಶಿವಮೂರ್ತಿ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಅವರು ಕಿರುಚಿಕೊಂಡಿದ್ದು, ಆ ಇಬ್ಬರು ಪರಾರಿಯಾಗಿದ್ದಾರೆ. ಕಿರುಚಿಕೊಂಡ ಶಬ್ದ ಕೇಳಿ ಪಕ್ಕದ ಮನೆಯವರು ಬಂದು ನೋಡುವ ಹೊತ್ತಿಗೆ ರಕ್ತಸ್ರಾವದಿಂದ ಮನೆಯ ಹಾಲಿನಲ್ಲಿ ಇವರು ಮೃತಪಟ್ಟಿದ್ದರು.

ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ, ಕೆ.ಆರ್ ವಿಭಾಗದ ಎಸಿಪಿ ಪೂರ್ಣಚಂದ್ರತೇಜಸ್ವಿ, ಸರಸ್ವತಿಪುರಂ ಠಾಣೆ ಪಿಐ ವಿಜಯ್ ಕುಮಾರ್ ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮನೆಯಲ್ಲಿ ಯಾವುದೇ ಕಳ್ಳತನವಾಗಿಲ್ಲ. ಸರಸ್ವತಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

See also  ಮೈಸೂರು ಯುವರಾಜರಿಂದ ಶಾಲಾ ಮಕ್ಕಳಿಗೆ ಪಾಠ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು