News Kannada
Saturday, October 01 2022

ಮೈಸೂರು

ಅ.5ರಿಂದ ಮೈಸೂರಲ್ಲಿ ಯೋಗಕ್ಷೇಮ ಯಾತ್ರೆ: ಎಸ್.ಎ.ರಾಮದಾಸ್ - 1 min read

Photo Credit :

ಅ.5ರಿಂದ ಮೈಸೂರಲ್ಲಿ ಯೋಗಕ್ಷೇಮ ಯಾತ್ರೆ: ಎಸ್.ಎ.ರಾಮದಾಸ್

ಮೈಸೂರು: ಕೃಷ್ಣರಾಜ ಕ್ಷೇತ್ರಾದ್ಯಂತ ಕೋರೋನಾ ಸಂಬಂಧಿಸಿದಂತೆ ಹಾಗೂ ಇತರೆ ಸರ್ಕಾರಿ ಕೆಲಸ ಕಾರ್ಯಗಳ ಕುರಿತಂತೆ ಕ್ಷೇತ್ರದ ಜನರನ್ನು ವಿಚಾರಿಸಿ ಅವರ ಅಹವಾಲು ಸ್ವೀಕರಿಸಿ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಅ.5. ರಿಂದ 11. ರವರೆಗೆ ಸಪ್ತಾಹದ ರೂಪದಲ್ಲಿ ಒಟ್ಟು ಒಂದು ವಾರಗಳ ಕಾಲ ಯೋಗಕ್ಷೇಮ ಯಾತ್ರೆಯನ್ನು ಹಮ್ಮಿಕೊಂಡಿರುವುದಾಗಿ ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗಕ್ಷೇಮ ಯಾತ್ರೆ ಕುರಿತಂತೆ ಮಾಹಿತಿ ನೀಡಿದರು. ಕ್ಷೇತ್ರದ ಜನರಲ್ಲಿ ಕೋರೋನಾ ಮತ್ತು ಕೋರೋನಾ ನಂತರದ ಸಮಸ್ಯೆಗಳ ವಿಚಾರವಾಗಿ ಜಾಗೃತಿಯನ್ನು ಮೂಡಿಸಿ ಕೋರೋನಾ ಸೋಂಕಿನಿಂದ ಮುಕ್ತರಾಗಲು ಅಗತ್ಯ ಸಲಹೆಗಳನ್ನು ನೀಡಿ ಅವರಲ್ಲಿ ವಿಶ್ವಾಸವನ್ನು ಮೂಡಿಸಲಾಗುವುದು, ಜತೆಗೆ ಕೋರೋನಾ ಸೋಂಕಿತರ ಮನೆಗಳಿಗೆ ತೆರಳಿ ಆರೋಗ್ಯ ಕಿಟ್ ನೀಡಿ ಯೋಗಕ್ಷೇಮ ವಿಚಾರಿಸಲಾಗುವುದು.

ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ಸಂಬಂಧಿಸಿದಂತೆ- ಕೋರೋನಾ ಸೋಂಕಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವಂತಹ ವ್ಯಕ್ತಿಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಮತ್ತು ಇನ್ನಿತರೆ ಯೋಜನೆಗಳಲ್ಲಿ ಲಾಭ ಪಡೆಯಲಾಗದ ವ್ಯಕ್ತಿಗಳಿಗೆ ಸಹಾಯ ನೀಡಲು ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದರು.

ಇದಲ್ಲದೆ ಮೈಸೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ – ಕುಡಿಯುವ ನೀರು, ಒಳಚರಂಡಿ, ಕಸ ವಿಲೇವಾರಿ, ಸ್ವಚ್ಛತೆ, ಉದ್ಯಾನವನ ನಿರ್ವಹಣೆ, ಮಳೆ ನೀರು ಚರಂಡಿ, ರೋಡ್ ಕಟ್ಟಿಂಗ್, ರಸ್ತೆ ಗುಂಡಿಗಳು ಮತ್ತು ಇನ್ನಿತರೆ ಸಮಸ್ಯೆಗಳ ಅಹವಾಲುಗಳನ್ನು ಪಡೆದು ಪರಿಹರಿಸುವ ಕುರಿತು ಹಾಗೂ ನಗರೋತ್ಥಾನ ಯೋಜನೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು. ಐ.ಪಿ.ಎಲ್ ಬೆಟ್ಟಿಂಗ್‍ಗೆ ಮತ್ತು ಡ್ರಗ್ಸ್ ಸೇವನೆಗೆ ಮಕ್ಕಳುಗಳು ಒಳಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳದಂತೆ ಕಾಪಾಡಿಕೊಳ್ಳಲು  ಪೋಷಕರುಗಳಲ್ಲಿ ಜಾಗೃತಿಯನ್ನು ಮೂಡಿಸಲಾಗುವುದು ಎಂದು ಹೇಳಿದರು.

 

ತಹಶೀಲ್ದಾರ್ ಕಛೇರಿಗೆ ಸಂಬಂಧಿಸಿದಂತೆ- ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ನೀಡಲಾಗುತ್ತಿರುವ ವಿವಿಧ ರೀತಿಯ ಪಿಂಚಣಿಗಳ ಸಮಸ್ಯೆಗಳ ಕುರಿತು ಪರಿಹಾರ ನೀಡಲು ಹಾಗೂ ಹೊಸದಾಗಿ ಅರ್ಜಿಗಳನ್ನು ಪಡೆದು ಪಿಂಚಣಿ ಮಾಡಿಸಿಕೊಡುವ ಕುರಿತು  ಮಾಹಿತಿ ನೀಡಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆ- ಹೌಸಿಂಗ್ ಫಾರ್ ಆಲ್ (ಪಿ.ಎಂ.ಎ.ವೈ-ಹೆಚ್.ಎಫ್.ಎ) ಅಡಿಯಲ್ಲಿ ಕೃಷ್ಣರಾಜ ಆಶ್ರಯ ವಸತಿಯಿಂದ ನಿರ್ಮಿಸಲು ಉದ್ದೇಶಿಸಲಾಗಿರುವ ಗುಂಪು ಮನೆಗಳಿಗೆ ಸಂಬಂಧಿಸಿದಂತೆ ಆನ್‍ಲೈನ್‍ನಲ್ಲಿ ಅರ್ಜಿಗಳನ್ನು ಹಾಕಲು ಸೂಕ್ತ ಮಾಹಿತಿಗಳನ್ನು ನೀಡುವುದು, ಪ್ರಧಾನ ಮಂತ್ರಿ ಆವಾಸ್ ಯೋಜನೆ- ಹೌಸಿಂಗ್ ಫಾರ್ ಆಲ್(ಪಿ.ಎಂ.ಎ.ವೈ-ಹೆಚ್.ಎಫ್.ಎ) ಅಡಿಯಲ್ಲಿ ಸ್ವಂತ ಜಾಗವನ್ನು ಹೊಂದಿರುವಂತಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಓ.ಬಿ.ಸಿ ಇವರುಗಳಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು, ಮನೆಗಳನ್ನು ವಿಸ್ತರಣೆ ಮಾಡಿಕೊಳ್ಳುವ ಸಂಬಂಧ ಸೂಕ್ತ ಮಾಹಿತಿಗಳನ್ನು ನೀಡಿ ಅವರಿಂದ ಅರ್ಜಿಗಳನ್ನು ಪಡೆದು ಕ್ರಮವಹಿಸಲಾಗುವುದಾಗಿ ಹೇಳಿದರು.

See also  ಮಂಡ್ಯ ಪೊಲೀಸ್ ಲಾಕಪ್‍ನಲ್ಲಿ ವ್ಯಕ್ತಿ ಅನುಮಾನಾಸ್ಪದ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು