News Kannada
Saturday, October 01 2022

ಮೈಸೂರು

ಎಟಿಎಂಗೆ ಕನ್ನ ಹಾಕಿದ್ದ ದರೋಡೆಕೋರರಿಬ್ಬರ ಬಂಧನ - 1 min read

Photo Credit :

ಎಟಿಎಂಗೆ ಕನ್ನ ಹಾಕಿದ್ದ ದರೋಡೆಕೋರರಿಬ್ಬರ ಬಂಧನ

ಮೈಸೂರು: ನಗರದಲ್ಲಿದ್ದ ಹೆಚ್.ಡಿ.ಎಫ್.ಸಿ. ಬ್ಯಾಂಕಿಗೆ ಸೇರಿದ ಎಟಿಎಂನ್ನು ಗ್ಯಾಸ್ ಕಟ್ಟರ್ ಬಳಸಿ ಒಡೆದು ಹಣ ದರೋಡೆ ಮಾಡಿದ್ದ ಖದೀಮರಿಬ್ಬರನ್ನು ಪೊಲೀಸರು ಬಂಧಿಸಿದ್ದು, ಎರಡೂವರೆ ಲಕ್ಷ ರೂ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಹತ್ಯಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹರ್ಯಾಣ ರಾಜ್ಯಕ್ಕೆ ಸೇರಿದ ಪಲ್ ವಲ್ ಜಿಲ್ಲೆಯ ಹತೀನ್ ತಾಲೂಕಿನ ಮೆಹಲುಕ್ ಗ್ರಾಮದ ನಿವಾಸಿ ಕಮರುದ್ದೀನ್ ಎಂಬುವರ ಪುತ್ರ ಅನೀಸ್(30) ಹಾಗೂ ಗುರಕ್ಸರ್ ಗ್ರಾಮದ ನಿವಾಸಿ ಮೊಹಮ್ಮದ್ ಎಂಬುವರ ಪುತ್ರ ಬರ್ಖನ್(22) ಎಟಿಎಂ ದರೋಡೆ ಮಾಡಿ ಸಿಕ್ಕಿ ಬಿದ್ದ ಖದೀಮರು. ಇವರೊಂದಿಗೆ ಇನ್ನೊಂದಷ್ಟು ಮಂದಿ ಕೈಜೋಡಿಸಿದ್ದು ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಅನೀಸ್ ಮತ್ತು ಬರ್ಖನ್ ಇನ್ನು ಕೆಲವರು ಸೇರಿ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣೆ ಮದ್ರಾಸ್ ಫ್ಯಾಕ್ಟರಿ ಮುಂಭಾಗದಲಿದ್ದ ಹೆಚ್.ಡಿ.ಎಫ್.ಸಿ. ಬ್ಯಾಂಕಿಗೆ ಸೇರಿದ ಎಟಿಎಂನ್ನು ಗುರಿಯಾಗಿಸಿಕೊಂಡು ಸೆ.17ರಂದು ಮಧ್ಯ ರಾತ್ರಿಯಲ್ಲಿ ಮುಚ್ಚಿದ್ದ ಎಟಿಎಂನ ಶೆಟರ್ ನ್ನು ಹಾರೆಬಳಸಿ ಮೀಟಿ ತೆಗೆದು ಬಳಿಕ ಎಟಿಂಎಂ ಮಿಷನ್‍ನನ್ನು ಗ್ಯಾಸ್ ಕಟ್ಟರ್‍ನಿಂದ ಕತ್ತರಿಸಿ ಅದರಲ್ಲಿದ್ದ 12,81,600 ರೂ. ನಗದನ್ನು ಹೊತ್ತೊಯ್ದಿದ್ದರು. ಕಳ್ಳತನದ ಬಳಿಕ ಹಣದೊಂದಿಗೆ ಹರ್ಯಾಣ ರಾಜ್ಯದತ್ತ ಪರಾರಿಯಾಗಿದ್ದರು. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮೈಸೂರು ನಗರದ ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತರವರು ಅಪರಾಧ ವಿಭಾಗದ ಡಿ.ಸಿ.ಪಿ, ಡಾ. ಪ್ರಕಾಶ್‍ಗೌಡ, ಗೀತಪ್ರಸನ್ನ ಹಾಗೂ ಎ.ಸಿ.ಪಿ ಮರಿಯಪ್ಪ ಮತ್ತು ಶಿವಶಂಕರ್ ಮಾರ್ಗದರ್ಶನದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಬಾಲಕೃಷ್ಣ ಹಾಗೂ ಮೇಟಗಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಲ್ಲೇಶ್ ಅವರ ನೇತೃತ್ವದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ರಮೇಶ್, ಇಂದ್ರಮ್ಮ, ದೇವರಾಜ ಪೊಲೀಸ್ ಠಾಣೆಯ ಪಿ.ಎಸ್.ಐ. ರಾಜು, ವಿಶೇಷ ಪತ್ತೆದಳದ ಅಧಿಕಾರಿ ಮತ್ತು ಪಿ.ಎಸ್.ಐ  ನಾಗರಾಜ್ ನಾಯಕ್, ಕಿರಣ್, ಅನಿಲ್ ಕುಮಾರ್, ಎ.ಎಸ್.ಐ  ಅನಿಲ್ ಕೆ ಶಂಕಪಾಲ್ ಸಿಬ್ಬಂದಿ  ಕಾಂತ.ಎಂ. ಲಿಂಗರಾಜಪ್ಪ. ರಮೇಶ, ಸುರೇಶ ಡಿ.ಎಸ್. ಹನುಮಂತ ಕಲ್ಲೇದ, ಗೌರಿಶಂಕರ ಹಾಗೂ ತಾಂತ್ರಿಕ ವಿಭಾಗದ ಇನ್ಸ್‍ಪೆಕ್ಟರ್ ಲೋಲಾಕ್ಷಿ, ಸಿಬ್ಬಂದಿ ಗುರುದೇವಾರಾಧ್ಯ,  ಮಂಜುನಾಥ್, ಶ್ಯಾಮ್ ಮತ್ತು ಕುಮಾರ್ ಮತ್ತು ವಿಜಯನಗರ ಪೊಲೀಸ್ ಠಾಣೆಯ ಸಿಬ್ಬಂದಿ ಮುರಳೀಧರ, ಸ್ವಾಮಾರಾದ್ಯ, ಶ್ರೀನಿವಾಸಮೂರ್ತಿ, ಪ್ರಕಾಶ್, ಅಣ್ಣಪ್ಪ ದೇವಾಡಿಗ, ತಿಲಕ್‍ಕುಮಾರ್, ಉಮೇಶ್, ಹರೀಶ್, ನಂದೀಶ ಅವರನ್ನೊಳಗೊಂಡ ತಂಡವನ್ನು ರಚಿಸಿ ತನಿಖೆ ಆರಂಭಿಸಲಾಗಿತ್ತು.

ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿಯಲ್ಲಿ ದಾಖಲಾಗಿದ್ದ ದೃಶ್ಯಗಳು, ಮೊಬೈಲ್ ಕರೆಗಳ ಮಾಹಿತಿ ಸೇರಿದಂತೆ  ತಾಂತ್ರಿಕ ಕೌಶಲ್ಯ ಬಳಸಿ ಆರೋಪಿಗಳು ಹರಿಯಾಣ ರಾಜ್ಯದಲ್ಲಿರುವ ಸುಳಿವು ದೊರೆತ ಹಿನ್ನಲೆಯಲ್ಲಿ ತನಿಖಾ ತಂಡವು ಹರ್ಯಾಣ ರಾಜ್ಯಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಅನೀಸ್ ಮತ್ತು ಬರ್ಖನ್ ನನ್ನು ಬಂಧಿಸಿ ಕರೆತರಲಾಗಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಿದ ಗ್ಯಾಸ್ ಕಟ್ಟರ್, ಗ್ಯಾಸ್ ಸಿಲಿಂಡರ್, ಗ್ಯಾಸ್ ಪೈಪ್‍ಗಳು ಮತ್ತು ಹಾರೆಯನ್ನು  ವಶಪಡಿಸಿಕೊಳ್ಳಲಾಗಿದೆ.

See also  ಕಣ್ಣಿಗೆ ಮಣ್ಣೆರಚುವ ಅಭಿವೃದ್ಧಿ ಕಾಮಗಾರಿಗಳು

ಎಟಿಎಂ ದರೋಡೆ ಬಳಿಕ ಆರೋಪಿಗಳು ಕಳವು ಮಾಡಿದ ಹಣದ ಪೈಕಿ ಒಂದು ಲಕ್ಷ ರೂ.ವನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿದ್ದು,  ರೂ. ಒಂದೂವರೆ ಲಕ್ಷವನ್ನು ತಮ್ಮೊಂದಿಗಿಟ್ಟುಕೊಂಡಿದ್ದರು. ಇದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿದ್ದು ತಲೆಮರೆಸಿಕೊಂಡಿದ್ದು, ಕಳುವು ಮಾಡಲಾದ ಹಣದ ಬಹುಪಾಲು ಹಣ ತಲೆಮರೆಸಿಕೊಂಡಿರುವ ಆರೋಪಿಗಳ  ಬಳಿಯೇ ಇರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದ್ದು, ಅವರುಗಳ ಪತ್ತೆಗಾಗಿ ತನಿಖಾ ಕಾರ್ಯವನ್ನು ಮುಂದುವರೆಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು