News Kannada
Monday, October 03 2022

ಮೈಸೂರು

ಗೋಪಿಗೆ ಮರದ ಅಂಬಾರಿ ತಾಲೀಮು - 1 min read

Photo Credit :

ಗೋಪಿಗೆ ಮರದ ಅಂಬಾರಿ ತಾಲೀಮು

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಗೆ ಕೆಲವೇ ದಿನಗಳು ಬಾಕಿಯಿದ್ದು, ಸರಳ ದಸರಾ ಆಚರಣೆಗೆ ಸಕಲ ಸಿದ್ಥತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯ ಗಜಪಡೆಗೂ ಸೂಕ್ತ ತರಬೇತಿ ನೀಡಲಾಗುತಿದ್ದು ಮುಂದಿನ ಮೂರು ದಿನಗಳ ಕಾಲ ಜಂಬೂಸವಾರಿ ತಾಲೀಮು ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಅರಮನೆ ಆವರಣದಲ್ಲಿ ತಾಲೀಮು ಆರಂಭವಾಗಲಿದ್ದು, ಇದೊಂದು ರೀತಿಯ ಅಣಕು ಜಂಬೂ ಸವಾರಿಯಂತೆ ಇದೆ. ಗಾಢ್ ಆಫ್ ಆನರ್, ಪುಷ್ಪಾರ್ಚನೆ ಸೇರಿ ಪ್ರಮುಖ ಕಾರ್ಯಕ್ರಮಗಳ ರಿಹರ್ಸಲ್ ಮಾಡಲಾಗುವುದು. ಅಭಿಮನ್ಯುಗೆ ಈಗಾಗಲೇ ಮರದ ಅಂಬಾರಿ ಹೊರಿಸಿ ಜಂಬೂಸವಾರಿ ತಾಲೀಮು ನೀಡಲಾಗುತ್ತಿದೆ.

ಗಜಪಡೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನೀಡಲಾಗುತ್ತಿದ್ದು, ಮೊದಲ ಬಾರಿಗೆ ಗೋಪಿ ಆನೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನೀಡಲಾಯಿತು.

ಕ್ಯಾಪ್ಟನ್ ಅಭಿಮನ್ಯುಗೆ ಪರ್ಯಾಯವಾಗಿ ಗೋಪಿಗೂ ತಾಲೀಮು ನೀಡಲಾಗುತ್ತಿದ್ದು, ಗೋಪಿ ಯಶಸ್ವಿಯಾಗಿ ಮರದ ಅಂಬಾರಿ ಹೊತ್ತು ಸಾಗಿದ. ಇಂದು 280ಕೆ.ಜಿ ತೂಕದ ಮರದ ಅಂಬಾರಿಯಲ್ಲಿ 300ಕೆ.ಜಿ ಮರಳು ಇರಿಸಿ ತಾಲೀಮು ನೀಡಲಾಯಿತು.

See also  ಚಾಮರಾಜನಗರ ಗಡಿಭಾಗದಲ್ಲಿ ರೈತರ ನಿದ್ದೆಗೆಡಿಸಿದ ಮಳೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು