News Kannada
Tuesday, September 27 2022

ಮೈಸೂರು

ದಸರಾ ಯಶಸ್ಸಿಗೆ ಧನ್ಯವಾದ ಸಲ್ಲಿಸಿದ ಉಸ್ತುವಾರಿ ಸಚಿವರು - 1 min read

Photo Credit :

ದಸರಾ ಯಶಸ್ಸಿಗೆ ಧನ್ಯವಾದ ಸಲ್ಲಿಸಿದ ಉಸ್ತುವಾರಿ ಸಚಿವರು

ಮೈಸೂರು: ದಸರಾ ಯಶಸ್ಸಿಗೆ ಸಹಕರಿಸಿದ ಮೈಸೂರಿನ ಜನತೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಧನ್ಯವಾದ ತಿಳಿಸಿದರು.

ಇಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ದಸರಾ ಯಶಸ್ಸಿಗೆ ಸಹಕರಿಸಿದ ಮೈಸೂರಿನ ಜನತೆಗೆ ಧನ್ಯವಾದ ತಿಳಿಸಿದ ಅವರು ಕೊರೋನಾ ವಾರಿಯರ್ಸ್ ನಿಂದ ದಸರಾ ಉದ್ಘಾಟನೆಯಾಗಿದ್ದು ಐತಿಹಾಸಿಕ ಸಂಗತಿ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಅತ್ಯಂತ ಉತ್ತಮ ರೀತಿಯಲ್ಲಿ ಕಾರ್ಯಹಿಸಿವೆ. ಸ್ಥಳೀಯ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಎಂ.ಪಿ ಪ್ರತಾಪ್ ಸಿಂಹ ಎಲ್ಲರೂ ಸಹಕಾರ ನೀಡಿದ್ದಾರೆ. ಮುಖ್ಯಮಂತ್ರಿಗಳು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ನಾಡಿಗೆ ಶುಭ ಸಂದೇಶ ನೀಡಿದ್ದಾರೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಸರಳ ಸಾಂಪ್ರದಾಯಿಕ ದಸರಾದ 9 ದಿನದ ಕಾರ್ಯಕ್ರಮ ಯಶಸ್ವಿಯಾಗಿದೆ. ಟೆಕ್ನಿಕಲ್ ಕಮಿಟಿ ಸೂಚನೆ ಯಶಸ್ವಿಯಾಗಿದೆ. ಜಂಬೂಸವಾರಿಗೆ ಜನರಿಗೆ ಬರೋದು ಬೇಡ ಅಂತ ಹೇಳಿದ್ದನ್ನು ಜನರೂ ಒಪ್ಪಿ ಸಹಕರಿಸಿದ್ದಾರೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪುಷ್ಪಾರ್ಚನೆ ಮೂಲಕ ಯಶಸ್ವಿಯಾಗಿ ನೆರವೇರಿತು. ಮೊದಲ ದಿನದಿಂದಲೂ ಸಾರ್ವಜನಿಕರು, ಸಂಸದರು,ಶಾಸಕರ ಸಹಕಾರ ಚೆನ್ನಾಗಿತ್ತು. ಆದ್ದರಿಂದ ಈ ಬಾರಿಯ ದಸರಾ ಯಶಸ್ಸಿಗೆ ಕಾರಣರಾದ ಇವೆರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

7 ಲಕ್ಷಕ್ಕೂ ಅಧಿಕ ಜನ ದಸರಾ ವೀಕ್ಷಿಸಿ ಯಶಸ್ಸಿಗೆ ಕಾರಣರಾಗಿದ್ದಾರೆ. ದಸರಾ ಖರ್ಚು ವೆಚ್ಚಗಳ ಲೆಕ್ಕ ವನ್ನು ನವಂಬರ್ 1 ರಂದು ನೀಡಲಿದ್ದೇವೆ ಎಂದರು.

ಸಾರ್ವಜನಿಕವಾಗೇ ದಸರಾ ಲೆಕ್ಕ ಬಿಡುಗಡೆ ಮಾಡುತ್ತೇವೆ. ದಸರಾಗೆ ಸರ್ಕಾರದಿಂದ 10 ಕೋಟಿ ಬಿಡುಗಡೆ ಮಾಡಲಾಗಿತ್ತು. ಕಳೆದ ಬಾರಿಯ ಉಳಿಕೆ ಹಣವನ್ನು ರಾಜ್ಯಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದೇನೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಉಳಿಕೆ ಹಣಕ್ಕೆ ನಾನು ಜವಾಬ್ದಾರಿ. ನಗರದ ಲೈಟಿಂಗ್ ನ ನಾಳೆಯಿಂದ ತೆರವುಗೊಳಿಸಲಾಗುತ್ತದೆ. ಮುಖ್ಯ ಆಯ್ದ ಭಾಗಗಳಲ್ಲಿ ಮಾತ್ರ ಕನ್ನಡ ರಾಜೋತ್ಸವದ ವರೆಗೂ ದೀಪಾಲಂಕಾರ ಮುಂದುವರೆಯಲಿದೆ ಎಂದರು.

See also  ನಂಜನಗೂಡು: ಜಮೀನಿನಲ್ಲಿ ಬೀಡು ಬಿಟ್ಟ ಗಜಪಡೆ ಮರಳಿ ಕಾಡಿಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು