News Kannada
Monday, January 30 2023

ಮೈಸೂರು

ಪೋಲೀಸ್‌ ಅಧಿಕಾರಿಯಿಂದ ರಸ್ತೆ ದುರಸ್ಥಿ: ಜನರ ಮೆಚ್ಚುಗೆ

Photo Credit :

ಪೋಲೀಸ್‌ ಅಧಿಕಾರಿಯಿಂದ ರಸ್ತೆ ದುರಸ್ಥಿ: ಜನರ ಮೆಚ್ಚುಗೆ

ಮೈಸೂರು: ಸರ್ಕಾರ ಮಾಡಬೇಕಾದ ಕೆಲಸವನ್ನು ಅದಕ್ಕೆ ಸಂಬಂದವೇ ಇಲ್ಲದ ಪೋಲೀಸ್‌ ಅಧಿಕಾರಿಯೊಬ್ಬರು ಮಾಡಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ರೀತಿ ಜನಮೆಚ್ಚುಗೆ ಗಳಿಸಿದ ಅಧಿಕಾರಿ ದೊರೆ ಸ್ವಾಮಿ ಅವರಾಗಿದ್ದು ಇವರು ಸಮೀಪದ ಹೆಚ್‌ ಡಿ ಕೋಟೆ ಪೋಲೀಸ್‌ ಠಾಣೆಯ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತಿದ್ದಾರೆ.

ಗುಂಡಿ ಬಿದ್ದಿದ್ದ ಹೆಚ್‌ ಡಿ ಕೋಟೆಯಿಂದ ಮಲಾರ ಕಾಲೋನಿಗೆ ತೆರಳುವ ಮುಖ್ಯ ರಸ್ತೆಯನ್ನು ತಮ್ಮ ಸ್ವಂತ ಖರ್ಚಿನಿಂದ 4 ಕಿಲೋ ಮೀಟರ್​ ಉದ್ದದ ರಸ್ತೆಯ ಗುಂಡಿಗಳನ್ನು ಮುಚ್ಚಿ ದುರಸ್ಥಿ ಮಾಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗುಂಡಿ ಬಿದ್ದ ರಸ್ತೆಯಿಂದಾಗಿ ವಾಹನ ಸಂಚಾರಕ್ಕೆ ಇದರಿಂದ ಬಹಳ ತೊಂದರೆಯಾಗುತ್ತಿತ್ತು.

ಕೆಲ ವರ್ಷಗಳಿಂದಲೂ ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಹೆಚ್.ಡಿ.ಕೋಟೆ ಪೊಲೀಸ್​ ಠಾಣೆಯ ಏಎಸ್‌ಐ ದೊರೆಸ್ವಾಮಿ ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿಸಿದ್ದಾರೆ.

ಹೆಚ್.ಡಿ.ಕೋಟೆ ಪಟ್ಟಣದ ಗದ್ದಿಗೆ ವೃತ್ತದಿಂದ, ಮಲಾರ ಕಾಲೋನಿ ಕ್ರಾಸ್​​ತನಕ ಸುಮಾರು 4 ಕಿ.ಮೀ. ಉದ್ದದ ರಸ್ತೆಯನ್ನು ಸ್ವತಃ ಏಎಸ್​ಐ ದೊರೆಸ್ವಾಮಿ, ಅವರ ಸ್ನೇಹಿತರು, ಪತ್ನಿ ಚಂದ್ರಿಕಾ,ಮಗಳು ವಿದ್ಯಾಶ್ರೀ ಸೇರಿ 15 ಕಾರ್ಮಿಕರ ಜೊತೆಗೂಡಿ ಸಿಮೆಂಟ್​ ಹಾಕಿ ದುರಸ್ತಿ ಮಾಡಿಸಿದ್ದಾರೆ.

ರಸ್ತೆ ದುರಸ್ತಿ ಮಾಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೆವು. ಆದರೆ ಯಾರೂ ಪ್ರತಿಕ್ರಿಯೆ ನೀಡಿರಲಿಲ್ಲ.

ಈ ಬಗ್ಗೆ ದೊರೆಸ್ವಾಮಿಯವರಿಗೆ ಹೇಳಿದಾಗ ತಕ್ಷಣ ಸ್ಪಂದಿಸಿ, ರಸ್ತೆ ದುರಸ್ತಿಗೆ ಬೇಕಾದ ಉಪಕರಣಗಳನ್ನು ತಂದು ಕೆಲಸ ಶುರು ಮಾಡಿದ್ರು. ಇಂತಹ ಅಧಿಕಾರಿಗಳು ಇರಬೇಕು. ಸುಮಾರು 4 ಕಿ.ಮೀ. ರಸ್ತೆಯನ್ನು ಅವರ ಹಣದಲ್ಲೇ ದುರಸ್ತಿ ಮಾಡಿಸಿದ್ದಾರೆ. ಅವರಿಗೆ ದೇವರ ಆಶೀರ್ವಾದ ಇರಲಿ ಎಂದು ಸ್ಥಳೀಯ ರಾಜು ಹಾರೈಸಿದ್ದಾರೆ.

ತಮ್ಮ ಕಾರ್ಯದ ಬಗ್ಗೆ ಒನ್‌ ಇಂಡಿಯಾ ಕನ್ನಡ ಪ್ರತಿನಿಧಿಯ ಜತೆ ಮಾತನಾಡಿದ ಏಎಸ್​ಐ ದೊರೆಸ್ವಾಮಿ, ರಸ್ತೆ ಹದಗೆಟ್ಟ ಹಿನ್ನೆಲೆ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಆಗುತ್ತಿತ್ತು.

ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ರಿಪೇರಿ ಮಾಡಿದ್ದೇವೆ. ಈಗ ಸಂಚಾರ ಸುಗಮವಾಗಿದೆ ಎಂದರು. ದಾನಿಯೊಬ್ಬರು ಒಂದು ಲಾರಿ ಜಲ್ಲಿ ಒದಗಿಸಿಕೊಟ್ಟರು. ನಾನು ಸಿಮೆಂಟ್‌ , ಡಸ್ಟ್‌ , ಮಿಕ್ಸರ್‌ ಮಿಶೀನ್‌ ಬಾಡಿಗೆಗೆ ತಂದು 15 ಕೂಲಿಯವರನ್ನೂ ಸೇರಿಸಿಕೊಂಡು ದುರಸ್ಥಿ ಮಾಡಿ ಮುಗಿಸಿದ್ದೇನೆ ಎಂದು ದೊರೆ ಸ್ವಾಮಿ ಹೇಳಿದರು.

See also  ಮೈಸೂರಲ್ಲಿ ವಿಮಾನ ನಿಲ್ದಾಣವಿದೆ.. ವಿಮಾನ ಹಾರಲ್ಲ..
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು