ಮೈಸೂರು: ಜನವರಿ 4ರಿಂದ ಮುಂಗಡ ಬುಕ್ಕಿಂಗ್ ಇಲ್ಲದ ರೈಲುಗಳು ಮೈಸೂರಿನಿಂದ ಸಂಚರಿಸಲಿವೆ.
ಬೆಂಗಳೂರಿನಿಂದ ಮೈಸೂರಿಗೆ ಸಂಜೆ 7ಕ್ಕೆ ಹೊರಡುವ ರೈಲು, ಮೈಸೂರಿನಿಂದ ಬೆಂಗಳೂರಿಗೆ ಬೆಳಿಗ್ಗೆ 6.10ಕ್ಕೆ ಹೊರಡುವ ರೈಲು, ಬೆಂಗಳೂರಿನಿಂದ ಮೈಸೂರಿಗೆ ಬೆಳಿಗ್ಗೆ 9.20ಕ್ಕೆ ಹೊರಡುವ ರೈಲು, ಮೈಸೂರಿನಿಂದ ಬೆಂಗಳೂರಿಗೆ ಮಧ್ಯಾಹ್ನ 1.45ಕ್ಕೆ ಹೊರಡುವ ರೈಲುಗಳು ಜ.4ರಿಂದ ಪುನರಾರಂಭವಾಗಲಿವೆ ಎಂದು ನೈಋತ್ಯ ರೈಲ್ವೇಯ ಡಿಆರ್ಎಂ ತಿಳಿಸಿದ್ದಾರೆ.
ವಾರದಲ್ಲಿ ಆರು ದಿನ (ಭಾನುವಾರ ಹೊರತುಪಡಿಸಿ) ರೈಲುಗಳು ಬೆಂಗಳೂರು ಹಾಗೂ ಮೈಸೂರಿನ ನಡುವೆ ಸಂಚರಿಸಲಿವೆ. ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.