ಮೈಸೂರು: ಕೇರಳದಲ್ಲಿ ಹೆಚ್ಚುತ್ತಿರುವ ಹಕ್ಕಿಜ್ವರದ ಭೀತಿಯಿಂದಾಗಿ ಮೈಸೂರು ಕೇರಳ ಗಡಿ ಭಾಗಗಳಲ್ಲಿ ಮಳೆ ಕೋಳಿಗಳ ಮೇಲೆ ಮೈಸೂರು ಜಿಲ್ಲಾಧಿಕಾರಿ ನಿಷೇಧ ಹೊಡಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ಆದೇಶವನ್ನು ಹೊರಡಿಸಿದ್ದು, ಹಕ್ಕಿಗಳು ಸತ್ತು ಬಿದ್ದದ್ದು ಕಂಡು ಬಂದ ತಕ್ಷಣ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇಷ್ಟು ಮಾತ್ರವಲ್ಲದೆ ರಾಜಸ್ಥಾನದಲ್ಲಿ ಹಕ್ಕಿಜ್ವರ ತೀವ್ರಗತಿಯಲ್ಲಿ ಹರಡುತ್ತಿದ್ದು ಬರನ್ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಕಾಲುಗಳು ಸತ್ತು ಬಿದ್ದಿದೆ. ಅವುಗಳ ಅವಶೇಷಗಳನ್ನು ಭೂಪಾಲ್ ಪ್ರಯೋಗಶಾಲೆಗೆ ಕಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.