News Kannada
Thursday, December 01 2022

ಮೈಸೂರು

ನಕಲಿ ಫೇಸ್‍ಬುಕ್ ಖಾತೆ ತೆರೆದು ವಂಚಿಸುತ್ತಿದ್ದಾಕೆಯ ಬಂಧನ - 1 min read

Photo Credit :

ನಕಲಿ ಫೇಸ್‍ಬುಕ್ ಖಾತೆ ತೆರೆದು ವಂಚಿಸುತ್ತಿದ್ದಾಕೆಯ ಬಂಧನ

ಮೈಸೂರು: ಫೇಸ್‍ಬುಕ್‍ನಲ್ಲಿ ನಕಲಿ ಪ್ರೊಫೈಲ್ ಸೃಷ್ಠಿಸಿ ಯುವಕರನ್ನು ಯಾಮಾರಿಸಿ ಲಕ್ಷಾಂತರ ರೂ ಹಣ ಹಾಗೂ ಆಭರಣಗಳನ್ನು ಲಪಟಾಯಿಸುತ್ತಿದ್ದ ಖತರ್‍ ನಾಕ್ ಯುವತಿಯನ್ನು ಪೊಲೀಸರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೇಘ ಹರಿಣಿ ಬಂಧಿತ ಯುವತಿ. ಈಕೆ ಫೇಸ್ ಬುಕ್‍ನಲ್ಲಿ ಚಿನ್ನುಗೌಡ ಎಂಬ ಹೆಸರಿನ ಪ್ರೊಫೈಲ್ ಸೃಷ್ಠಿಸಿ ರವಿ ಎಂಬ ವ್ಯಕ್ತಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಆತ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಮೇಲೆ ಇಬ್ಬರೂ ಪರಸ್ಪರ ಮೊಬೈಲ್ ನಂಬರ್ ಹಂಚಿಕೊಂಡು ತನ್ನ ಹೆಸರು ಬಿಂದುಗೌಡ ಎಂದು ಹಾಗೂ ಸುಂದರವಾದ ಹುಡುಗಿಯರ ಫೋಟೋಗಳನ್ನು ತನ್ನದೇ ಫೋಟೋ ಎಂದು ಕಳುಹಿಸಿ ಪರಿಚಯಿಸಿಕೊಂಡಿದ್ದಾಳೆ.

ಆ ನಂತರ ತಮ್ಮ ತಂದೆಗೆ ಒಬ್ಬಳೇ ಮಗಳಾಗಿದ್ದು ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ವಾಸವಾಗಿದ್ದು, ತಮ್ಮ ತಂದೆಗೆ 2 ಪೆಟ್ರೋಲ್ ಬಂಕ್ ಮತ್ತು ಬಾರ್‍ ಗಳು ಇರುವುದಾಗಿ ಹೇಳಿಕೊಂಡಿದ್ದಾಳೆ. ರವಿಯನ್ನು ಪ್ರೀತಿಸಿ ಮದುವೆ ಆಗಬೇಕೆಂದು ತಾನು ಆಸೆ ಪಟ್ಟಿರುವ ಕಾರಣ ಆತನ ಹುಟ್ಟು ಹಬ್ಬಕ್ಕೆ ಸುಮಾರು 45 ಲಕ್ಷ ರೂ. ಬೆಲೆಬಾಳುವ ಫಾರ್ಚುನರ್ ಕಾರ್ ಕೊಡಿಸುವುದಾಗಿ ನಂಬಿಸಿದ್ದಾಳೆ. ಕಾರ್ ಕೊಂಡುಕೊಳ್ಳುವುದಕ್ಕೆ ಕೇವಲ ಒಂದೂವರೆ ಲಕ್ಷ ಹಣ ಕಡಿಮೆಯಾಗಿದ್ದು ಅದನ್ನು ನನ್ನ ಸ್ನೇಹಿತನಾದ ಶಿವು ಎಂಬುವವನನ್ನು ಕಳುಹಿಸಿಕೊಡುತ್ತಿದ್ದು, ಅವನ ಕೈಯಲ್ಲಿ ಕೊಟ್ಟು ಕಳುಹಿಸು ಎಂದು ಹೇಳಿ ರವಿಯಿಂದ ಆ ಹಣವನ್ನು ಪಡೆದುಕೊಂಡಿದ್ದಾಳೆ.

ರವಿಯ ತಾಯಿಯನ್ನೂ ಪರಿಚಯ ಮಾಡಿಕೊಂಡು ಆಕೆಯ ಕತ್ತಿನಲ್ಲಿದ್ದ ಸರದ ರೀತಿಯಲ್ಲೇ ಚಿನ್ನದ ಸರ ಮಾಡಿಸಿಕೊಡುವುದಾಗಿ ತಿಳಿಸಿ ಆತನ ತಾಯಿಯಿಂದ 85 ಗ್ರಾಂನ ಚಿನ್ನದ ಸರ ಮತ್ತು ಅದರೊಂದಿಗೆ ಒಂದು ರೇಷ್ಮೆ ಸೀರೆಯನ್ನೂ ಪಡೆದುಕೊಂಡಿದ್ದಾಳೆ. ಇದೇ ರೀತಿ ಒಂದಲ್ಲಾ ಒಂದು ಸುಳ್ಳು ಹೇಳಿ 480 ಗ್ರಾಂ ಒಡವೆಗಳನ್ನು ಅವರಿಂದ ಪಡೆದು ವಂಚಿಸಿ ಬಳಿಕ ಮೊಬೈಲ್ ಸ್ವಿಚ್‍ಆಫ್ ಮಾಡಿಕೊಂಡಿದ್ದಾಳೆ. ರವಿಯಿಂದ  ಮತ್ತು ಆತನ ತಾಯಿಯಿಂದ ಸುಮಾರು 20 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಮತ್ತು ನಗದನ್ನು ಪಡೆದು ವಂಚಿಸಿದ್ದ ಬಗ್ಗೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯಾದ ಬಿಂದುಗೌಡ ಎಂಬಾಕೆಯನ್ನು ವಶಕ್ಕೆ ಪಡೆದು ಮಾಡಿ ನಂತರ ಹೆಚ್ಚುವರಿ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಈಕೆಯ ನಿಜವಾದ ಹೆಸರು ಮೇಘ ಹರಿಣಿ (25), ಮಾಗಡಿಯವಳಾಗಿದ್ದಾಳೆ. ಈಕೆ ಖತರ್ನಾಕ್ ಆರೋಪಿಯಾಗಿದ್ದು, ಈ ಹಿಂದೆ 2018ರಲ್ಲಿ ಮಂಡ್ಯದಲ್ಲಿ ಸಾನ್ವಿ ಸಿರಿಗೌಡ ಎಂಬ ಹೆಸರಿನ ಫೇಸ್‍ಬುಕ್ ಖಾತೆ  ತೆರೆದು ಯೋಗಾನಂದ ಎಂಬುವವರಿಗೆ ಕೆಲಸ ಕೊಡಿಸುತ್ತೇನೆಂದು 15 ಲಕ್ಷ ರೂ ಪಡೆದು ವಂಚಿಸಿದ್ದಾಳೆ. ಆರೋಪಿಯ ವಿಚಾರಣೆ ನಡೆಸಿದ ಪೊಲೀಸರು. ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

See also  ರಸ್ತೆ ಅಡ್ಡಲಾಗಿ ಬೇಲಿ: ಜನರ ಪರದಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು