News Kannada
Thursday, September 29 2022

ಮೈಸೂರು

ರಕ್ಷಣಾ ಇಲಾಖೆಯಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿ: ಆರ್.ಆರ್.ಮೆನನ್ - 1 min read

Photo Credit : News Kannada

ಮೈಸೂರು: ಮುಂದಿನ ವರ್ಷಗಳಲ್ಲಿ ರಕ್ಷಣಾ ಇಲಾಖೆಯಲಿಯೂ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಹೆಚ್ಚಿನ ಕೌಶಲ್ಯ ಬೆಳೆಸಿಕೊಳ್ಳಿ ಎಂದು ಮೈಸೂರು ಎನ್‌ಸಿಸಿ ಗ್ರೂಪ್ ಕಮಾಡಂರ್ ಆರ್.ಆರ್.ಮೆನನ್ ಹೇಳಿದರು.

ಮೈಸೂರು ಗ್ರೂಪ್ ಎನ್‌ಸಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್‌ಸಿಸಿ ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಜಂಟಿ ಸಮನ್ವಯದಲ್ಲಿ ಮೇ 4ರಿಂದ ಜೂ.4ರವರೆಗೆ ನಡೆದ ದೈಹಿಕ ಸಾಮರ್ಥ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ  ನೌಕಾಪಡೆ, ಸೇನಾ ಪಡೆಗಳಲ್ಲಿ ಸಾಕಷ್ಟು ಉದ್ಯೋಗ ಗಳು ಸೃಷ್ಟಿಯಾಗಲಿವೆ. ಹೀಗಾಗಿ ಇಂದಿನಿಂದಲೇ ದೈಹಿಕ ಹಾಗೂ ಮಾನಸಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅತ್ಯವಶ್ಯಕತೆಯಿದೆ. ನೀವೆಲ್ಲರೂ ಶಿಬಿರದಲ್ಲಿ ಕಲಿತು ಉದ್ಯೋಗ ಪಡೆದು ದೇಶ ಸೇವೆಗೆ ಹೋದಾಗ ಮಾತ್ರವೇ ಈ ಶಿಬಿರ ಸಾರ್ಥಕತೆ ಆಗಲಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಆಡಳಿತ) ಡಾ.ಪ್ರೇಮಕುಮಾರ್ ಮಾತನಾಡಿ, 15ರಿಂದ 25 ವರ್ಷದಲ್ಲಿ ಹೆಚ್ಚೆಚ್ಚು ಸಲಹೆ ಮಾಡುತ್ತಾರೆ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಶೈಕ್ಷಣಿಕದಲ್ಲಿ ನೀವೂ ಸಕ್ರಿಯರಾಗಿದ್ದರೆ ಸಾಧನೆ ಮಾಡುವಂತೆ ಸಲಹೆ ನೀಡುತ್ತಾರೆ. ಈ ಸಮಯದಲ್ಲಿ ದೇಹದಲ್ಲೂ ಸಾಕಷ್ಟು ಬದಲಾವಣೆ ಆಗಲಿದೆ. ಅತಿ ಹೆಚ್ಚು ಕೂತೂಹಲ ಹುಟ್ಟುವ ವಯಸ್ಸಾಗಿದೆ. ಮಾಡಬೇಡಿ ಎಂದಿದ್ದನ್ನೇ ಮಾಡುವ ವಯಸ್ಸೇ ಇದಾಗಿದೆ. ಹೀಗಾಗಿ ಈ ವಯಸ್ಸಿನಲ್ಲಿ ಒಳ್ಳೆಯ ತೀರ್ಮಾನ ಮಾಡಿ. ನಿಮ್ಮ ಈ ಐದು ವರ್ಷದ ಕಠಿಣ ಪರಿಶ್ರಮ ನಿಮ್ಮ 50 ವರ್ಷ ಅದ್ದೂರಿಯಾಗಿ ಇರಲಿದೆ. ನಿಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರ ಗುರಿ ಮುಟ್ಟುವವರೆಗೂ ಅದರತ್ತ ಚಿತ್ತ ಹಿರಿಸಬೇಕಿದೆ. ಈ ಅವಧಿಯಲ್ಲಿ ನಮ್ಮ ಹಿಂದಿನ ಸಂಸ್ಕಾರವನ್ನು ನಾವು ನೋಡಿ ಅರ್ಥ ಮಾಡಿಕೊಳ್ಳಬೇಕಿದೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿದುಕೊಳ್ಳಬೇಕಿದೆ. ದೇಶದ ರಾಜಕೀಯ, ಸಂಸ್ಕೃತಿಯನ್ನು ಓದಿ ತಿಳಿದುಕೊಳ್ಳವುದನ್ನು ಬೆಳೆಸಿಕೊಳ್ಳಿ. ರಾಜಕಾರಣಕ್ಕೆ ಬಾರದಿದ್ದರೂ ಪರವಾಗಿಲ್ಲ. ರಾಜಕೀಯ ಇತಿಹಾಸ, ಪ್ರಜಾಪ್ರಭುತ್ವದ ಮೂಲಭೂತ ಸೌಲಭ್ಯ ಹಾಗೂ  ಕರ್ತವ್ಯಗಳನ್ನು ಅರಿತುಕೊಂಡರೆ ನಾವು ಸಹ ಸರಿಯಾದ ದಾರಿಯಲ್ಲಿ ಸಾಗಿ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ದೇಶದಲ್ಲಿ ಒಳ್ಳೆ ಜನರು ಮೌನವಾಗಿದ್ದರೆ ಕೆಟ್ಟದೂ ವಿಜೃಂಭಿಸಿ ದೇಶದ ಸಾಮಾಜಿಕತೆ ಹಾಳಾಗಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಆಗ ನಿಮಗೆ ತಪ್ಪು ಎನಿಸಿದ್ದನ್ನು  ನೇರವಾಗಿ ಹೇಳುವ ಗುಣ ಬೆಳೆಸಿದಾಗ ಮಾತ್ರ ದೇಶದ ಭವಿಷ್ಯ ಉಜ್ವಲ ಆಗಲು ಸಾಧ್ಯ ಎಂದು ಹೇಳಿದರು.

ಕ್ರೀಡಾ ಮತ್ತು ಯುವಜನ  ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ.ಸುರೇಶ್, ಗ್ರೂಪ್ ಎಒ ವಿ.ಶ್ರೀನಿವಾಸ್, ಕಮಾಂಡಿಂಗ್ ಆಪೀಸರ್ ಕರ್ನಲ್ ಪರಾಗ್, ಎನ್ .ಸಿ.ಸಿ  ಸದಸ್ಯ ಮಂಜುನಾಥ್,  ಆದಿತ್ಯ ಆಸ್ಪತ್ರೆಯ ಚಂದ್ರಶೇಖರ್  ಇನ್ನಿತರರು ಉಪಸ್ಥಿತರಿದ್ದರು.  ಒಂದು ತಿಂಗಳ ತರಬೇತಿಯಲ್ಲಿ 70 ಕೆಡೆಟ್‌ಗಳು ಮತ್ತು ಯುವಕರು ಶಿಬಿರದಲ್ಲಿ ಭಾಗವಹಿಸಿದ್ದರು.

See also  ಮಳೆಗೆ ಕುಸಿದ ಮನೆಗಳು: ಜನ ಕಂಗಾಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು