News Kannada
Thursday, August 18 2022

ಮೈಸೂರು

ಮೈಸೂರು: ಭಾರಿ ಮಳೆ, ರೈತರು ಬೆಳೆದ ಕಬ್ಬು ಭತ್ತ ನಾಶ - 1 min read

Rain destroys sugarcane, paddy grown by farmers

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಕೆಲವೆಡೆ ರೈತರು ಭತ್ತಬೆಳೆದಿದ್ದು ಕಟಾವಿಗೆ ಬಂದಿತ್ತು. ಇದೀಗ ಗದ್ದೆಗೆ ನೀರು ನುಗ್ಗಿದ ಪರಿಣಾಮ ಕೈಗೆ ಬಂದ ತುತ್ತು  ಬಾಯಿಗೆ ಬಾರದಂತಾಗಿದೆ.

ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ವ್ಯಾಪ್ತಿಯಲ್ಲಿ  ಭಾರೀ ಮಳೆಯಿಂದ ಹುಲ್ಲಹಳ್ಳಿ ಹೋಬಳಿಯ ಚಂದ್ರವಾಡಿ ಗ್ರಾಮದಲ್ಲಿ ಸುಮಾರು ನಾಲ್ಕೈದು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಕಟಾವಿಗೆ ಬಂದಿತ್ತು. ಆದರೆ ಮಳೆಯಿಂದ ನುಗು ಹೊಳೆಯಿಂದ ಹರಿದು ಬಂದ ಅಧಿಕ ಪ್ರಮಾಣದ ನೀರು ಭತ್ತದ ಗದ್ದೆಗೆ ನುಗ್ಗಿದ ಪರಿಣಾಮ ಭತ್ತದ ಬೆಳೆ ನಾಶವಾಗಿದೆ. ಜತೆಗೆ ಇತರೆ ಬೆಳೆಗಳು ಕೂಡ ನಾಶವಾಗಿವೆ.

ಸದ್ಯ ಕೃಷಿಯನ್ನೇ ನಂಬಿ ಬದುಕುತ್ತಿದ್ದ ಚಂದ್ರವಾಡಿ ಗ್ರಾಮದ ರೈತರಾದ ತಿಮ್ಮಶೆಟ್ಟಿ, ರಂಗಸ್ವಾಮಿ, ಮಹೇಶ ಎಂಬುವರಿಗೆ ಸೇರಿದ ಭತ್ತದ ಗದ್ದೆಯು ನೀರಿನಿಂದ  ಮುಳುಗಡೆ ಗೊಂಡಿದೆ ಇದರಿಂದ ಇದರಿಂದ ಲಕ್ಷಾಂತರ ರೂ ನಷ್ಟ ಅನುಭವಿಸುವಂತಾಗಿದೆ. ಹುಲ್ಲಹಳ್ಳಿ ಸುತ್ತ ಮುತ್ತ ಕೆಲವು ದಿನಗಳಿಂದ ಸುರಿಯತ್ತಿರುವ ಮಳೆಯಿಂದ ರೈತರು ಬೆಳೆದಂತಹ ಅಪಾರ ಪ್ರಮಾಣಸ ಕಬ್ಬು, ಹತ್ತಿ. ಭತ್ತ ಮುಂತಾದ ಬೆಳೆಗಳು ನಾಶವಾಗಿವೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಆಗಮಿಸಿ ನಷ್ಟವಾದ ಬೆಳೆಗಳಿಗೆ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ. ಸದ್ಯ ಮಳೆ ಹೆಚ್ಚಾದ ಪರಿಣಾಮ ಸಂಕಷ್ಟ ಎದುರಾಗಿದ್ದು, ಕೃಷಿ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ.

See also  ಫೇಸ್ ಬುಕ್ ಕಮೆಂಟ್ಸ್: ಅಧ್ಯಕ್ಷೆ-ಉಪಾಧ್ಯಕ್ಷೆ ನಡುವಿನ ಸಮರ, ಪೊಲೀಸ್ ಠಾಣೆಯ ಮೆಟ್ಟಿಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು